Site icon Vistara News

Book Release | ಬೆಂಗಳೂರಿನಲ್ಲಿ ಸೆ.16ರಂದು ರಾಜ್ಯಪಾಲರಿಂದ ಕಥಾ ಲೋಕ ಕೃತಿ ಬಿಡುಗಡೆ

Book Release

ಬೆಂಗಳೂರು: ಪಿಇಎಸ್‌ ವಿಶ್ವವಿದ್ಯಾಲಯ ಹಾಗೂ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ʻಕಥಾಲೋಕʼ (ಶಾಲಾ ಮಕ್ಕಳಿಗಾಗಿ ಕನ್ನಡ ನೀತಿ ಸಂಗ್ರಹ) ಕೃತಿ ಬಿಡುಗಡೆಯನ್ನು (Book Release) ಶುಕ್ರವಾರ (ಸೆ.16) ಬೆಳಗ್ಗೆ 10 ಗಂಟೆಗೆ ರಾಜಭವನದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಲಾಗಿದೆ.

ಮುಖ್ಯ ಅತಿಥಿಯಾಗಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಆಗಮಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ, ಸಚಿವ ಬಿ.ಸಿ ನಾಗೇಶ್‌, ಹಂಪಿ ಕನ್ನಡ ವಿಶ್ವವಿದ್ಯಾಲ ಮಾಜಿ ಕುಲಪತಿ ಡಾ. ಚಂದ್ರಶೇಖರ ಕಂಬಾರ ಉಪಸ್ಥಿತರಿರಲಿದ್ದಾರೆ. ಪಿಇಎಸ್‌ ವಿಶ್ವ ವಿದ್ಯಾಲಯದ ಕುಲಾಧಿಪತಿ ಮತ್ತು ರಾಜ್ಯ ಸರಕಾರದ ಶಿಕ್ಷಣ ಸುಧಾರಣೆ ಸಮಿತಿ ಸಲಹೆಗಾರರಾದ ಡಾ. ಎಂ.ಆರ್‌. ದೊರೆಸ್ವಾಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಸ್ಥಳ: ರಾಜಭವನದ ಬ್ಯಾಂಕ್ವೆಟ್‌ ಹಾಲ್‌

ಸಮಯ: ಬೆಳಗ್ಗೆ ೧೦ ಗಂಟೆ

ಇದನ್ನೂ ಓದಿ | Free Health Camp | ಕೇಸರಿ ಫೌ೦ಡೇಶನ್‌ನಿಂದ ಆ.26ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

Exit mobile version