Site icon Vistara News

Vistara News Launch | ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ಕಾಯಕ ಯೋಗಿ ಪುರಸ್ಕಾರ

Vistara News Launch

ಹಸಿರು ಕ್ರಾಂತಿಯಿಂದ ಮಣ್ಣಿನ ಫಲವತ್ತತೆ ಹಾಳಾಗಿದೆ, ಇದಕ್ಕೆ ಸಾವಯವ ಕೃಷಿಯೇ ಉತ್ತರ ಎಂಬ ಸತ್ಯವನ್ನು ಸಾರುತ್ತಲೇ ಊರೂರು ಸುತ್ತಿ ಜಾಗೃತಿ ಮೂಡಿಸುತ್ತಿದ್ದಾರೆ ಕೊಲ್ಲಾಪುರ ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ. ಕೃಷಿ ಸ್ವಾಮೀಜಿ ಎಂದೇ ಖ್ಯಾತರಾಗಿರುವ ಶ್ರೀಗಳು ದೇಶದ ಮೊದಲ ಸಾವಯವ ಕೃಷಿ ಕೇಂದ್ರ ಸ್ಥಾಪಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ.

ಕೇವಲ ಒಂದು ಎಕರೆ ಪ್ರದೇಶದಲ್ಲಿ 110 ಬಗೆಯ ಬೆಳೆಗಳನ್ನು ಬೆಳೆಯಬಹುದು ಎಂದು ತಾವೇ ಬೆಳೆದು ರೈತರಿಗೆ ತೋರಿಸಿಕೊಟ್ಟ ಶ್ರೀಗಳು, ಮಠದ ಗೋಶಾಲೆಯಲ್ಲಿ 21 ವಿವಿಧ ಜಾತಿಯ ದೇಸಿ ತಳಿಯ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಗೋವುಗಳನ್ನು ಸಾಕಿ ಸಲಹುತ್ತಿದ್ದಾರೆ.

ಪೂಜ್ಯ ಶ್ರೀಗಳು ಗುರುಕುಲ ಮಾದರಿಯ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಿದ್ದು, ಇಲ್ಲಿ 64 ವಿದ್ಯೆಗಳನ್ನು, 14 ಶಾಸ್ತ್ರಗಳನ್ನು ಬೋಧಿಸಲಾಗುತ್ತಿದೆ. ಈಶಾನ್ಯ ರಾಜ್ಯಗಳ ಅನಾಥ 100 ಮಕ್ಕಳಿಗೆ ಆನಂದ ಆಶ್ರಮ ತೆರೆದು ಉಚಿತ ವಸತಿ, ಶಿಕ್ಷಣ ವ್ಯವಸ್ಥೆ ಮಾಡಿದ್ದಾರೆ. ಹೀಗೆ ಸಮಾಜದ ಒಳಿತಿಗೆ ಮಿಡಿಯುತ್ತಲೇ ಇರುವ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್ ಹೆಮ್ಮೆಪಡುತ್ತಿದೆ.

ಇದನ್ನೂ ಓದಿ | Vistara News Launch | ಖ್ಯಾತ ವರ್ಣಚಿತ್ರ ಕಲಾವಿದ ಡಾ.ಬಿ.ಕೆ.ಎಸ್. ವರ್ಮರಿಗೆ ಕಾಯಕ ಯೋಗಿ ಪುರಸ್ಕಾರ

Exit mobile version