ಬೆಂಗಳೂರು: ಸತತ ಮುಂದೂಡಿಕೆ ಬಳಿಕ ಯುಜಿಸಿಇಟಿ 2024ರ (UGCET 2024) ಮೊದಲ ಅಣಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟಗೊಂಡಿದೆ. ಈ ಮೊದಲು ಆಗಸ್ಟ್ 9ರ ಸಂಜೆ ಫಲಿತಾಂಶ (KCET Mock Allotment 2024) ಬಿಡುಗಡೆ ಮಾಡುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿತ್ತು. ಆದರೆ, ಆ ಬಳಿಕವೂ ಒಂದು ದಿನ ಮುಂದೂಡಲಾಗಿತ್ತು. ಇದೀಗ ಆಗಸ್ಟ್ 10ರ ಸಂಜೆ 6 ಗಂಟೆಯೊಳಗೆ ಪ್ರಕಟವಾಗಲಿದೆ ಎಂದು ಪ್ರಕಟಣೆ ಹೊರಡಿಸಿದೆ.
ಎಂಜಿನಿಯರಿಂಗ್ (Engineering) ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ (UGCET 2024) ಪ್ರವೇಶಕ್ಕೆ ತಮ್ಮ ಆಸಕ್ತಿಗನುಗುಣವಾಗಿ ಆಪ್ಷನ್ ದಾಖಲಿಸಿರುವ ಸಿಇಟಿ ರ‍್ಯಾಂಕಿಂಗ್ (CET Ranking) ಅಭ್ಯರ್ಥಿಗಳಿಗೆ ಎಂಜಿನಿಯರಿಂಗ್ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಆ.10ರಂದು ಸಂಜೆ 6 ಗಂಟೆಗೊಳಗೆ ಕೆಇಎ (KEA) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಕೆಇಎ ತಿಳಿಸಿದೆ.
ಅಭ್ಯರ್ಥಿಗಳಿಗೆ ತಮ್ಮ ಆಪ್ಷನ್ ದಾಖಲಿಸಲು ಆಗಸ್ಟ್ 4 ಕೊನೆಯ ದಿನವಾಗಿತ್ತು. ಎಂಜಿನಿಯರಿಂಗ್, ಯೋಗ, ನ್ಯಾಚುರೋಪಥಿ, ಪಶುವೈದ್ಯ, ನರ್ಸಿಂಗ್, ಕೃಷಿ ವಿಜ್ಞಾನ, ಬಿ -ಫಾರ್ಮಾ ಮತ್ತು ಡಿ-ಫಾರ್ಮಾ ಕೋರ್ಸ್ ಮತ್ತು ಕಾಲೇಜುಗಳ ಆಯ್ಕೆ ಆಪ್ಷನ್ ಮೂಲಕ ನಡೆದಿದೆ. ಇಂದು ಅಣಕು ಸೀಟು ಹಂಚಿಕೆ ಬಳಿಕ ನೈಜ ಸೀಟು ಹಂಚಿಕೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಈ ಮೊದಲು ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಏಳು ದಿನ ಅವಕಾಶ ನೀಡಲಾಗಿತ್ತು. ಜು.30ರಂದು ಕೊನೆಯಾಗಲಿದ್ದ ಅದನ್ನು ಅಭ್ಯರ್ಥಿಗಳ ಮನವಿ ಮೇರೆಗೆ ಮತ್ತೂ ವಿಸ್ತರಿಸಲಾಗಿತ್ತು. ಯೋಗ ಮತ್ತು ನ್ಯಾಚುರೋಪತಿ ಕೋರ್ಸುಗಳ ಸೀಟ್ ಮ್ಯಾಟ್ರಿಕ್ಸ್ ಬಂದಿದ್ದು, ಅದಕ್ಕೂ ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗಿತ್ತು. ರಾಷ್ಟ್ರೀಯ ವೈದ್ಯಕೀಯ ಮಂಡಳಿ, ಕಾಲಕಾಲಕ್ಕೆ ಹೊರಡಿಸುವ ಸೂಚನೆಗಳು / ಅಧಿಸೂಚನೆಗಳ ಅನ್ವಯ ವೈದ್ಯಕೀಯ ಮತ್ತು ದಂತ ವೈದ್ಯಕ್ಯೀಯ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ.
ಇದನ್ನೂ ಓದಿ: KEA: ಸಹಾಯ ಎಂಜಿನಿಯರ್ ಹುದ್ದೆಗಳಿಗೆ ನಾಳೆ ನೇಮಕ ಪರೀಕ್ಷೆ; ವೆಬ್ ಕಾಸ್ಟಿಂಗ್ ಮೂಲಕ 28 ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ ಮಾದರಿ / ಅಟಲ್ ಬಿಹಾರಿ ವಾಜಪೇಯಿ / ಶ್ರೀಮತಿ ಇಂದಿರಾ ಗಾಂಧಿ / ಡಾ।। ಬಿ.ಆರ್. ಅಂಬೇಡ್ಕರ್ / ಮಾಸ್ತಿ ವೆಂಕಟೇಶ ಅಯ್ಯಂಗಾರ್ / ಸಂಗೊಳ್ಳಿ ರಾಯಣ್ಣ / ಕವಿರನ್ನ / ಗಾಂಧಿತತ್ವ / ಶ್ರೀ ನಾರಾಯಣ ಗುರು ಮುಂತಾದ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳ ಮೆರಿಟ್ ಮತ್ತು ಅಭ್ಯರ್ಥಿಗಳು ದಾಖಲಿಸಿರುವ ಇಚ್ಚೆ / ಆಯ್ಕೆಗಳ ಆಧಾರದ ಮೇಲೆ ಮೂರನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ದಿನಾಂಕ 10-07-2024 ರಂದು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ. ಸೀಟು ಹಂಚಿಕೆಯ ಫಲಿತಾಂಶವನ್ನು ಪರಿಶೀಲಿಸಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ದಿನಾಂಕ 12-07-2024 ರ ಸಂಜೆ 5.30 ರ ವರೆಗೆ ಸಂಬಂಧಿಸಿದ ಶಾಲೆಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ