Site icon Vistara News

Bangalore News : ಕೇಳಚಂದ್ರ ಕಾಫಿಗೆ ಎಚ್​ಆರ್​ಡಿ ಮುಖ್ಯಸ್ಥರಾಗಿ ಡಾ.ಪಿ.ಕುರಿಯನ್ ರಾಫೆಲ್ ನೇಮಕ

ಬೆಂಗಳೂರು: ಕೇಳಚಂದ್ರ ಕಾಫಿ ಸಂಶೋಧನೆ ಮತ್ತು ಅಭಿವೃದ್ಧಿಯ ನೂತನ ಮುಖ್ಯಸ್ಥರಾಗಿ ಡಾ.ಪಿ. ಕುರಿಯನ್ ರಾಫೆಲ್ ಅವರನ್ನು ನೇಮಕಗೊಂಡಿದ್ದಾರೆ. ಡಾ. ರಾಫೆಲ್ ಅವರು ಟಾಟಾ ಕಾಫಿ ಲಿಮಿಟೆಡ್​ನಲ್ಲಿ ಇದೇ ಹುದ್ದೆಯನ್ನು ನಿರ್ವಹಿಸಿದ್ದರು. ತೋಟದ ಬೆಳೆಗಳು, ಸುಸ್ಥಿರ ಕೃಷಿ ಮತ್ತು ಆವೃತ್ತನೀಯ ಆರ್ಥಿಕತೆಯಲ್ಲಿ ಅನುಭವ ಹೊಂದಿರುವ ಅವರು ಇನ್ನು ಮುಂದೆ ಕೇಳಚಂದ್ರ ಕಾಫಿ ಸಂಸ್ಥೆ ಪ್ರಗತಿಗಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ ಪ್ರಾಣಿಶಾಸ್ತ್ರದಲ್ಲಿ (ಕೀಟಶಾಸ್ತ್ರ) ಪಿಎಚ್​ಡಿ ಪಡೆದಿರುವ ಡಾ.ರಾಫೆಲ್ ಅವರು ​​ ಲಂಡನ್​ನ ಬ್ರಿಟಿಷ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಿಂದ ಪೋಸ್ಟ್​ಡಾಕ್ಟರಲ್​ ಫೆಲೋಶಿಪ್ ( ಪಿಎಚ್​ಡಿ ನಂತರದ ಫೆಲೊಶಿಪ್​) ಪಡೆದಿದ್ದಾರೆ. ಕಾಫಿ ಬೋರ್ಡ್ ಆಫ್ ಇಂಡಿಯಾದಲ್ಲಿ ಹಿರಿಯ ವಿಜ್ಞಾನಿಯಾಗಿ 25 ವರ್ಷಗಳು ಸೇರಿದಂತೆ ತೋಟಗಾರಿಕಾ ಬೆಳೆಗಳ ಕ್ಷೇತ್ರದಲ್ಲಿ 31 ವರ್ಷಗಳ ಪರಿಣತಿಯನ್ನು ಹೊಂದಿರುವ ಡಾ.ರಾಫೆಲ್ ಅವರು ಭಾರತದ ವಿವಿಧ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಾಫಿ ಸಂಶೋಧನೆಗೆ ಕೊಡುಗೆಗಳನ್ನು ನೀಡಿದ್ದಾರೆ. ಈ ಎಲ್ಲ ಕಾರ್ಯಗಳಿಗಾಗಿ ಅವರಿಗೆ ಗೌರವಗಳು ದೊರಕಿವೆ. ಅವರ ಸಮೃದ್ಧ ವೃತ್ತಿಜೀವನದ ನಡುವೆ ರಾಷ್ಟ್ರೀಯ ಮತ್ತು ಅಂ ತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ 37 ಸಂಶೋಧನಾ ಪ್ರಬಂಧಗಳು ಪ್ರಕಟಣೆಗೊಂಡಿವೆ. ಜೊತೆಗೆ ಜಾಗತಿಕ ವೈಜ್ಱನಿಕ ಜರ್ನಲ್​ಗಳಿಗೆ ಕೊಡುಗೆ ನೀಡಿದ್ದಾರೆ. ಅದೇ ರೀತಿ ಹಲವಾರು ಸಂಶೋಧನೆಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ಸಸ್ಯಗಳು ಫಲ ನೀಡುವ ಅವಧಿಯನ್ನು ಪ್ರಸ್ತುತ 5 ವರ್ಷದಿಂದ 2-3 ವರ್ಷಗಳಿಗೆ ಇಳಿಸುವುದು. ಇದು ಕೇಳಚಂದ್ರ ಕಾಫಿಯಲ್ಲಿ ಇಳುವರಿ ಮತ್ತು ಉತ್ಪಾದಕತೆ ಹೆಚ್ಚಿಸುವುದು. ಕಾಳುಮೆಣಸು ಉತ್ಪಾದನೆಯಲ್ಲಿನ ಸುಧಾರಣೆ ಮತ್ತು ರಕ್ಷಣಾ ಕಾರ್ಯವಿಧಾನಗಳನ್ನು ಉತ್ತೇಜಿಸುವುದು. ಎಸ್ಟೇಟ್​ನಲ್ಲಿ ಜೇನು ಸಾಕಾಣಿಕೆ ನಿರ್ವಹಣೆ ಮತ್ತು ಜೇನು ಉತ್ಪಾದನೆ ಹೆಚ್ಚಿಸುವುದು. ನಿಗದಿತ ಸ್ಥಳಗಳಲ್ಲಿ ವಿಶಿಷ್ಟ ಹಣ್ಣುಗಳ (ವಿದೇಶಿ ಹಣ್ಣುಗಳ) ಉತ್ಪಾದನೆ ಮಾಡುವುದು. ಪರಿಸರ ನಿರ್ವಹಣೆಗೆ ಕೆಳಚಂದ್ರ ಅವರ ಬದ್ಧತೆಯನ್ನು ಎತ್ತಿಹಿಡಿಯಲು ಸುಸ್ಥಿರ ಮತ್ತು ಪುನರುತ್ಪಾದಕ ಕೃಷಿ ಪದ್ಧತಿಗಳ ಪ್ರೇರಪಿಸುವುದು ಕೇಳಚಂದ್ರ ಕಾಫಿಯಲ್ಲಿ ಡಾ. ರಾಫೆಲ್ ಅವರು ಈ ಪ್ರಮುಖ ಕಾರ್ಯಗಳಾಗಿವೆ.

ಸುಸ್ಥಿರ ಕೃಷಿ, ಕೀಟಗಳ ನಿರ್ವಹಣೆ ಮತ್ತು ಹೊಸ ಮಾದರಿಯ ಪರಿಸರ ಸ್ನೇಹಿ ಪರಿಹಾರಗಳ ಅಭಿವೃದ್ಧಿಯಲ್ಲಿ ಅವರ ಅತ್ಯುತ್ತಮ ಕೆಲಸವನ್ನು ಜಾಗತಿಕವಾಗಿ ಗುರುತಿಸಲಾಗಿದೆ. ಉತ್ಕೃಷ್ಟತೆ ಮತ್ತು ಸುಸ್ಥಿರತೆಗೆ ಡಾ. ರಾಫೆಲ್ ಅವರ ಸಮರ್ಪಣೆ ಕೆಳಚಂದ್ರ ಕಾಫಿಯ ಧ್ಯೇಯ ಮತ್ತು ಮೌಲ್ಯಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಟಾಟಾ ಕಾಫಿಯಲ್ಲಿದ್ದಾಗ, ಡಾ.ರಾಫೆಲ್ ಅವರು ಸುಸ್ಥಿರ ಕೃಷಿ ಕ್ಷೇತ್ರದಲ್ಲಿ ಮಾಡಿದ ಕೆಲಸಕ್ಕಾಗಿ 2022 ಮತ್ತು 2023 ರಲ್ಲಿ ವಾರ್ಷಿಕ ಶ್ರೇಷ್ಠತೆ ಪ್ರಶಸ್ತಿಯನ್ನು ಪಡೆದರು.

ಇದನ್ನೂ ಓದಿ: TA Sharavana: ಮಂಡ್ಯದಿಂದ ಕುಮಾರಸ್ವಾಮಿ ಲೋಕಸಭೆಗೆ ಆಯ್ಕೆ; ಸಾಯಿಬಾಬಾ ಪ್ರಸಾದ ನೀಡಿ, ಅಭಿನಂದಿಸಿದ ಟಿ.ಎ.ಶರವಣ

ಟಾಟಾ ಕಾಫಿ ಸಂಸ್ಥೆಯಲ್ಲಿ ಡಾ. ರಾಫೆಲ್ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯವನ್ನು ಮುನ್ನಡೆಸಿದ್ದರು. ಅವರ ಪರಿಣತಿ ಕಾಫಿ ಮತ್ತು ಮೆಣಸು ಕೃಷಿಗೆ ಸೀಮಿತವಾಗದೇ ನಾಯಕತ್ವವು ಹಲವಾರು ಪ್ರಶಂಸೆಗಳನ್ನು ಗಳಿಸಿವೆ. ಅಲ್ಲದೆ ಕೃಷಿ ಸಂಶೋಧನೆಯನ್ನು ಪರಿವರ್ತಿಸುವ ಮತ್ತು ಸುಸ್ಥಿರವಾಗಿ ಬೆಳೆಸುವ ಬದ್ಧತೆಯಿಂದ ಕೂಡಿತ್ತು.

ಕೇಳಚಂದ್ರ ಕಾಫಿಯ ವ್ಯವಸ್ಥಾಪಕ ನಿರ್ದೇಶಕ ರಾಣಾ ಜಾರ್ಜ್ ಹೊಸ ನೇಮಕದ ಕುರಿತು ಮಾತನಾಡಿ, ಡಾ.ಪಿ.ಕುರಿಯನ್ ರಾಫೆಲ್ ಅವರನ್ನು ಕೇಳಚಂದ್ರ ಕಾಫಿಗೆ ಸ್ವಾಗತಿಸಲು ನಾವು ಉತ್ಸಾಹಭರಿತರಾಗಿದ್ದೇವೆ. ಕಾಫಿ ಸಂಶೋಧನೆ ಮತ್ತು ಅಭಿವೃದ್ಧಿಯ ವ್ಯಾಪ್ತಿ ವಿಸ್ತರಣೆ ಮಾಡುವಲ್ಲಿ ಅವರ ವ್ಯಾಪಕ ಅನುಭವ ನಮಗೆ ಅಮೂಲ್ಯವಾಗಿದೆ “ಎಂದು ಹೇಳಿದರು. ಮುಂದುವರಿದ ಅವರು. ಡಾ. ರಾಫೆಲ್ ಅವರ ದೃಷ್ಟಿಕೋನ ಮತ್ತು ನಾಯಕತ್ವವು ನಿಸ್ಸಂದೇಹವಾಗಿ ಉತ್ಕೃಷ್ಟತೆ ಮತ್ತು ಸುಸ್ಥಿರತೆಯ ವಿಚಾರದಲ್ಲಿ ನಮ್ಮ ಬದ್ಧತೆಯನ್ನು ಮುನ್ನಷ್ಟು ಮುಂದಕ್ಕೆ ಕೊಂಡೊಯ್ಯಲಿದೆ. ಇದು ಭಾರತವನ್ನು ಜಾಗತಿಕ ಕಾಫಿ ಕ್ಷೇತ್ರದಲ್ಲಿ ದೃಢವಾಗಿ ಇರಿಸಲು ನಮಗೆ ಸಹಾಯ ಮಾಡಲಿದೆ ಎಂದು ಹೇಳಿದರು.

ಕೆಳಚಂದ್ರ ಕಾಫಿಗೆ ಸೇರಲು ಮತ್ತು ಭಾರತೀಯ ಕಾಫಿ ಸಂಶೋಧನೆ ಮತ್ತು ನೈತಿಕ ಮೂಲದ ಸುಸ್ಥಿರ ಕಾಫಿ (ECS) ಯಲ್ಲಿ ಪ್ರವರ್ತಕ ಪ್ರಗತಿಗೆ ಸಮರ್ಪಿತವಾದ ತಂಡದೊಂದಿಗೆ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ” ಎಂದು ಡಾ. ರಾಫೆಲ್​ ಹೇಳಿದ್ದಾರೆ. ಪುನರುತ್ಪಾದಕ ಕೃಷಿಯಲ್ಲಿ ನನ್ನ ಅನುಭವವನ್ನು ನಾವೀನ್ಯತೆಯ ಹಂಚಿಕೆಯ ಗುರಿಗಳಿಗೆ ಕೊಡುಗೆ ನೀಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

Exit mobile version