ಬೆಂಗಳೂರು: ನೀಲೇಶ್ ಛಡ್ವಾ ಮತ್ತು ಮಿತೇಶ್ ಸುಂಬದ್ ಮಾಲೀಕತ್ವದ ಕೊರಾ ಸಂಸ್ಥೆಯ 18ನೇ ಮಳಿಗೆ ನಗರದಲ್ಲಿ ಅದ್ಧೂರಿಯಾಗಿ ಭಾನುವಾರ ಆರಂಭವಾಗಿದೆ. ಸಂಪ್ರದಾಯ ಮತ್ತು ಆಧುನಿಕತೆಯ ಸಂಯೋಜನೆಯಾದ ಕೊರಾ ಬೈ ನೀಲೇಶ್ ಮಿತೇಶ್ ಮಳಿಗೆಯನ್ನು (Kora Clothing Store) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉದ್ಘಾಟಿಸಿದರು.
ಕೊರಾ ಬೈ ನಿತೇಶ್‌ನ ನಿರ್ದೇಶಕ ಮಿತೇಶ್ ಸುಂಬದ್ ಪ್ರತಿಕ್ರಿಯಿಸಿ, ಕೊರಾ ಬೈ ಎನ್ಎಂ ವಿಶೇಷ ವಿನ್ಯಾಸಗಳನ್ನು ಮಾತ್ರ ಸೃಷ್ಟಿಸುತ್ತಿಲ್ಲ, ಇದು ಉಡುಪಿನ ಮೂಲಕ ಜನರ ಭಾವನೆಗಳನ್ನು ವಿನ್ಯಾಸಗೊಳಿಸುವುದು ಮತ್ತು ನಮ್ಮ ಉದ್ಯಮದ ಒಟ್ಟಾರೆ ಪ್ರಗತಿಯನ್ನು ಉತ್ತೇಜಿಸುವುದಾಗಿದೆ ಎಂದು ತಿಳಿಸಿದರು.
ನೀಲೇಶ್ ಛಡ್ವಾ ಅವರು ಮಾತನಾಡಿ, ನಮ್ಮ ಗ್ರಾಹಕರಿಗೆ ಕೊರಾ ಉಡುಪುಗಳನ್ನು ಧರಿಸಿದಾಗ ಐಷಾರಾಮಿಯ ಅನುಭವ ನೀಡುತ್ತದೆ. ನಮ್ಮ ಉತ್ಪನ್ನಗಳ ಬಗ್ಗೆ ಗ್ರಾಹಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು.
ಅತ್ಯುತ್ತಮ ಸಾಂಪ್ರದಾಯಿಕ ಉಡುಪುಗಳ ಕೇಂದ್ರ
ನೀಲೇಶ್ ಮತ್ತು ಮಿತೇಶ್ ಅವರು 2011ರಲ್ಲಿ ಕೊರಾ ಕಂಪನಿಯನ್ನು ಪ್ರಾರಂಭಿಸಿದರು. ಇದು ಪುರುಷರು ಮತ್ತು ಬಾಲಕರಿಗೆ ಒನ್-ಸ್ಟಾಪ್ –ಶಾಪ್ ಆಗಿದ್ದು, ಅತ್ಯುತ್ತಮ ಸಾಂಪ್ರದಾಯಿಕ ಉಡುಪುಗಳ ಕೇಂದ್ರವಾಗಿದೆ. ಖ್ಯಾತ ವಿನ್ಯಾಸಕರು, ಮಾಸ್ಟರ್‌ಗಳು ಮತ್ತು ಕರಕುಶಲಿಗರ ತಂಡವನ್ನು ಹೊಂದಿರುವ ಕೊರಾ, ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಿದೆ. ಮುಂಬೈನಲ್ಲಿ ಸಿಟಿ ಆಫ್ ಡ್ರೀಮ್ಸ್ (ಬೊರಿವಿಲಿ, ಸಾಂತಾ ಕ್ರೂಜ್ ಮತ್ತು ಹ್ಯೂಸ್ ರೋಡ್), ದುಬೈನ ಇಂಟರ್ ನ್ಯಾಷನಲ್ ಫ್ಯಾಷನ್ ಹಬ್ (ಮೀನಾ ಬಜಾರ್)ನಲ್ಲಿ ಕೊರಾ ಮಳಿಗೆಗಳಿವೆ.
ಇದನ್ನೂ ಓದಿ | Festival Nail Art: ಹಬ್ಬದ ಸೀಸನ್‌ಗೆ ಬಂದಿದೆ ಪ್ರೆಸ್ ಆನ್ ನೇಲ್ ಆರ್ಟ್ ಗಣೇಶ
ಈ ಬ್ರಾಂಡ್ ಫ್ಯಾಷನ್ ಆಸಕ್ತಿಯ ಪುರುಷರಿಗೆ ಗುಣಮಟ್ಟದ ಸಾಂಪ್ರದಾಯಿಕ ಉಡುಪುಗಳನ್ನು ಒದಗಿಸುತ್ತದೆ. ಕೊರಾ ಬೈ ನೀಲೇಶ್ ಮಿತೇಶ್‌ನ ಹೊಸ ಮಳಿಗೆಯಲ್ಲಿ ವಿಸ್ತಾರ ಶ್ರೇಣಿಯ ಉಡುಪು ಸಂಗ್ರಹವಿದ್ದು, ಪುರುಷರು ಮತ್ತು ಬಾಲಕರ ಕೊರಾ ಬ್ರ್ಯಾಂಡ್‌ನ ಶೇರ್ವಾನಿ, ಬಂದ್ ಗಾಲಾ, ಕುರ್ತಾ ಮತ್ತು ಟಕ್ಸೆಡೊಗಳಿಗೆ ಭಾರಿ ಬೇಡಿಕೆ ಇದೆ.