Site icon Vistara News

ಇತಿಹಾಸವನ್ನು ತಿರುಚಿ ಬರೆದ ಪಠ್ಯ ಪುಸ್ತಕ: ರಾಮಲಿಂಗಾರೆಡ್ಡಿ ಆರೋಪ

ರಾಮಲಿಂಗಾರೆಡ್ಡಿ

ಬೆಂಗಳೂರು: ದೇಶದ ಇತಿಹಾಸವನ್ನು ತಿರುಚಿ, ಸತ್ಯವಲ್ಲದ ಸಂಗತಿಗಳನ್ನು ಪಠ್ಯ ಪುಸ್ತಕದಲ್ಲಿ ಸೇರಿಸಲು ಪ್ರಯತ್ನಿಸುತ್ತಿದ್ದಾರೆ. ನಾಡಿನ ಮಹಾನ್ ವ್ಯಕ್ತಿಗಳ ಅಪಮಾನ ಮಾಡುವ ಕೆಲಸವನ್ನು ಈ ಸಮಿತಿ ಮಾಡಿದೆ. ಬುದ್ಧ ಬಸವಣ್ಣ ಮಹಾವೀರ ಜಯಂತಿ ಭಗತ್ ಸಿಂಗ್ ಅಂಬೇಡ್ಕರ್ ಅವರು ನಾರಾಯಣಗುರುಗಳು ಹಾಗೂ ಕುವೆಂಪು ಸೇರಿದಂತೆ ಹಲವು ಮಹಾನ್ ವ್ಯಕ್ತಿಗಳ ಪಠ್ಯ ಪುಸ್ತಕ ತಿರುಚಿ ಅಪಮಾನ ಮಾಡಲಾಗಿದೆ.

ಅನೇಕ ಮಠಾಧೀಶರು ಚಿಂತಕರು, ಸಾಹಿತಿಗಳ ಸಂಘ-ಸಂಸ್ಥೆಗಳ ವಿರೋಧ ವ್ಯಕ್ತಪಡಿಸಿದ್ದರೂ ಸರ್ಕಾರ ಪರಿಷ್ಕೃತ ಪಠ್ಯ ಪುಸ್ತಕವನ್ನು ಮಕ್ಕಳಿಗೆ ನೀಡಲು ಮುಂದಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆ ಎಲ್ಲಿ ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಲಾಗಿದೆ.

ಆರನೇ ತರಗತಿ ಪಠ್ಯ ಪುಸ್ತಕದಲ್ಲಿ ವಾಲಿಕಾರ್ ಅವರು ಬರೆದ ನೀ ಹೋದ ಮರುದಿನ ಎಂಬ ಅಂಬೇಡ್ಕರ್ ಅವರ ಕುರಿತ ಪಠ್ಯವನ್ನು ಕೈಬಿಡಲಾಗಿದೆ. 7ನೇ ತರಗತಿ ಸಮಾಜ-ವಿಜ್ಞಾನ ವಿಷಯದ ಪಠ್ಯದಲ್ಲಿ ಅಂಬೇಡ್ಕರ್ ಅವರ ತಂದೆ-ತಾಯಿ ಹುಟ್ಟಿದ ಸ್ಥಳ ಸೇರಿದಂತೆ ಹಲವು ವಿವರಗಳನ್ನು ಕೈಬಿಡಲಾಗಿದೆ.

ಅಂಬೇಡ್ಕರ್ ಅವರ ಹೋರಾಟದ ವಿಚಾರಗಳನ್ನು ಪಠ್ಯದಿಂದ ತೆಗೆದುಹಾಕಲಾಗಿದೆ.

9ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಎಂಬ ಭಾಗವನ್ನು ತೆಗೆದು ಹಾಕಲಾಗಿದೆ. ಸಂವಿಧಾನ ರಚನೆಯಲ್ಲಿ ಬಿ. ಎನ್. ರಾವ್ ಅವರ ಕೊಡುಗೆ ಅಪಾರ ಎಂದು ತಿಳಿಸಲಾಗಿದೆ. ಆ ಮೂಲಕ ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಅವರನ್ನು ಬಿಟ್ಟು ಬಿ.ಎನ್‌. ರಾವ್‌ ಅವರೇ ಸಂವಿಧಾನ ರಚನೆ ಮಾಡಿದ್ದಾರೆ ಎಂದು ಬಿಂಬಿಸುವ ಪ್ರಯತ್ನ ನಡೆಸಲಾಗಿದೆ.

10ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಗಾಂಧಿಯುಗ ಪಾಠದಲ್ಲಿ ಅಂಬೇಡ್ಕರ್ ಅವರ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಧರ್ಮ ಸ್ವೀಕರಿಸಿದರು ಎಂಬ ಅಂಶವನ್ನು ಕೈಬಿಡಲಾಗಿದೆ.

ಸರ್ಕಾರ ಕೂಡಲೇ ಈ ವ್ಯಕ್ತಿಯನ್ನು ಬಂಧಿಸಬೇಕು:

ಬಿಜೆಪಿ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ಹೆಸರಲ್ಲಿ ಇತಿಹಾಸದ ಮೇಲೆ ಅತ್ಯಾಚಾರ ನಡೆಸುತ್ತಿದೆ. ಇದರ ವಿರುದ್ಧ ಮಠಾಧೀಶರು ಸಾಹಿತಿಗಳು ಚಿಂತಕರು ಎಲ್ಲರೂ ವಿರೋಧ ವ್ಯಕ್ತಪಡಿಸಿದರು ಇದಪ್ಪ ಚರ್ಮದ ಸರ್ಕಾರಕ್ಕೆತಾಗುತ್ತಿಲ್ಲ. ಬಸವಣ್ಣನವರ ಬಗ್ಗೆ ಇತಿಹಾಸ ತಿರುಚಿ ಬರೆದರು ಮುಖ್ಯಮಂತ್ರಿ ಬೊಮ್ಮಾಯಿ ಅವರು ಚಕಾರ ಎತ್ತುತ್ತಿಲ್ಲ. ಆ ಮೂಲಕ ತಮಗೆ ಅಧಿಕಾರವೇ ಮುಖ್ಯ ಉಳಿದೆಲ್ಲವೂ ಗೌಡ ಎಂಬಂತೆ ವರ್ತಿಸುತ್ತಿದ್ದಾರೆ.

ರಾಜ್ಯಸಭೆ ಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ, ‘ ಇನ್ನು ಮುಂದೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಜೆಡಿಎಸ್ ನವರು ತೀರ್ಮಾನಿಸಿದ್ದಾರೆ ಕಾಂಗ್ರೆಸ್ನವರು ತೀರ್ಮಾನಿಸಿದ್ದೇವೆ. ಅವರು ಕೊನೆಕ್ಷಣದಲ್ಲಿ ಕಾಂಗ್ರೆಸ್ ಬೆಂಬಲ ಕೋರಿದ್ದು ಪಕ್ಷದ ಹೈಕಮಾಂಡ್ ಅದಕ್ಕೆ ಸಮ್ಮತಿ ಸೂಚಿಸಲಿಲ್ಲ’ ಎಂದರು.

ಇದನ್ನೂ ಓದಿ| Textbook controversy: ಪಠ್ಯ ಪುಸ್ತಕ ಪರಿಷ್ಕರಣೆ ಸ್ಥಗಿತಗೊಳಿಸಲು ನಿರಂಜನಾರಾಧ್ಯ ಒತ್ತಾಯ

Exit mobile version