ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಪದವೀಧರ ಕ್ಷೇತ್ರದ ಚುನಾವಣೆ (MLC Election) ಮತ್ತು ಲೋಕಸಭಾ ಚುನಾವಣೆಯ (lok sabha election 2024) ಫಲಿತಾಂಶ ಹೊರಬೀಳಲಿರುವ ಕಾರಣ ಬೆಂಗಳೂರು ಜಿಲ್ಲಾಡಳಿತ ಜೂನ್ ಮೊದಲ ವಾರದಲ್ಲಿ ಮದ್ಯ ಮಾರಾಟವನ್ನು (Liquor Ban) ನಿಷೇಧಿಸಿದೆ. ಅದರಂತೆ ಜೂನ್ 1ರ ಸಂಜೆ 4ಕ್ಕೆ ಎಲ್ಲ ಲಿಕ್ಕರ್ ಶಾಪ್, ವೈನ್ ಶಾಪ್, ಬಾರ್‌ಗಳು ಬಂದ್ ಆಗಿರಲಿದೆ. ಇನ್ನೂ ಹೋಟೆಲ್ ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವನೆಗೆ ಮಾತ್ರ ವಿನಾಯಿತಿ ನೀಡಲಾಗಿದ್ದು, ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.
ಈ ಸಂಬಂಧ ಮಾಹಿತಿ ನೀಡಿರುವ ಬೆಂಗಳೂರು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಬಾರ್‌ಗಳು ಒಂದು ವಾರ ಪೂರ್ತಿ ಕ್ಲೋಸ್ ಆಗುವುದಿಲ್ಲ. ಒಟ್ಟು ನಾಲ್ಕುವರೆ ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಲಾಗಿದೆ. 5 ದಿನಗಳ ಕಾಲ ಲಿಕ್ಕರ್ ಬ್ಯಾನ್ ಎಂಬ ವಿಚಾರ ಮುಂದಿಟ್ಟುಕೊಂಡು ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಉಚ್ಚ ನ್ಯಾಯಾಲಯವು ನಮ್ಮ ಆದೇಶವನ್ನು ಎತ್ತಿಹಿಡಿದೆ. ಎಂಎಲ್‌ಸಿ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯ ಮತ ಎಣಿಕೆ ಎರಡು ಒಟ್ಟಿಗೆ ಬಂದಿದೆ.
ಜೂನ್ 3ರ ಸಂಜೆ 4 ಗಂಟೆ ವರೆಗೂ ಪರಿಷತ್ ಚುನಾವಣೆ ನಡೆಯುತ್ತದೆ. ಪ್ರತಿ ಚುನಾವಣೆಯ ಸಂದರ್ಭದಲ್ಲಿ 48 ಗಂಟೆಗಳ ಮದ್ಯ ಮಾರಾಟ ನಿಷೇಧ ಆಗುತ್ತದೆ. ಹೀಗಾಗಿ ಶನಿವಾರ ಸಂಜೆಯಿಂದಲೇ (ಜೂನ್ 1) ಮದ್ಯ ಮಾರಾಟ ನಿಷೇಧಸಲಾಗಿದೆ. ಆದರೆ ಜೂನ್ 3ರಂದು ಸಂಜೆ 4 ಗಂಟೆಯಿಂದ ರಾತ್ರಿ 1 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಇದೆ. ಬಾರ್ ಮತ್ತು ರೆಸ್ಟೋರಂಟ್‌ಗಳಲ್ಲಿ ಲಿಕ್ಕರ್ ಸೇಲ್ ಬ್ಯಾನ್ ಇದೆ ಹೊರತು, ಆಹಾರಕ್ಕೆ ಯಾವುದೇ ನಿಷೇಧ ಇಲ್ಲ ಎಂದರು.
ಇನ್ನೂ ಲೋಕಸಭಾ ಮತ ಎಣಿಕೆ ಕಾರ್ಯ ಇರುವುದರಿಂದ ಜೂನ್ 3ರ ಮಧ್ಯರಾತ್ರಿ 12ರಿಂದ ಜೂನ್ 4ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ. ಜೂನ್ 5 ರಂದು ಲಿಕ್ಕರ್ ಬ್ಯಾನ್ ಇರುವುದಿಲ್ಲ. ನಂತರ ಜೂನ್ 6 ರಂದು ಮತ ಎಣಿಕೆ ಕಾರ್ಯ ಇದೆ. ಹೀಗಾಗಿ ಒಟ್ಟಾರೆ ನಾಲ್ಕುವರೆ ದಿನಗಳು ಮಾತ್ರ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ದಯಾನಂದ ತಿಳಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ