Site icon Vistara News

Lok Sabha Election 2024: ಬೆಂಗಳೂರಿನಲ್ಲಿ ಪುಟ್ಟ ಬಾಲಕಿಯರಿಂದ ಮತದಾನ ಜಾಗೃತಿ

Voting awareness by school studens in Bengaluru

ಬೆಂಗಳೂರು: ಲೋಕಸಭೆಯ ಮೊದಲ ಹಂತದ ಚುನಾವಣೆಗೆ (Lok Sabha Election 2024) ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಮತದಾನದ ಮಹತ್ವ, ಮತದಾನ ಮಾಡುವುದು ನಮ್ಮ ಹಕ್ಕು ಎಂದು ಬೆಂಗಳೂರಿನ ಪುಟ್ಟ ಬಾಲಕಿಯರು ವಿಭಿನ್ನ ಪ್ರಯತ್ನದೊಂದಿಗೆ ಮತದಾನದ ಜಾಗೃತಿ (Voting Awareness) ಮೂಡಿಸಿ, ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಕ್ಯಾಬ್‌ ಸೇವೆ ಆರಂಭ

ಹೌದು, ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸಿಯಾದ ಪುಟ್ಟ ಬಾಲಕಿ ನಿಹಾರಿಕಾ ಮತ್ತು ತನ್ನ ಸ್ನೇಹಿತರಾದ ಪ್ರತಿಕ್ಷ, ಸುಹಾಸಿನಿ, ನವ್ಯ ಜತೆಗೂಡಿ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ.100 ರಷ್ಟು ಮತದಾನ ಆಗಬೇಕು. ಸಧೃಢ ಪ್ರಜಾಪ್ರಭುತ್ವ ರಾಷ್ತ್ರಕ್ಕಾಗಿ ಎಲ್ಲರೂ ಮತದಾನ ಮಾಡಿ, ನಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಜಾಗೃತಿ ಮೂಡಿಸುತ್ತಾ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: Samsung: ಎಐ ಫೀಚರ್‌ಗಳ ನಿಯೋ ಕ್ಯೂಎಲ್ಇಡಿ 8ಕೆ, 4ಕೆ, ಒಎಲ್ಇಡಿ ಟಿವಿ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್; ದರ ಎಷ್ಟು?

ಬೆಂಗಳೂರಿನ ಸೆಂಟ್ ಮೇರಿಸ್ ಪಬ್ಲಿಕ್ ಸ್ಕೂಲ್‌ನ 3ನೇ ತರಗತಿ ವಿದ್ಯಾರ್ಥಿನಿಯಾಗಿರುವ ನಿಹಾರಿಕಾ, ಮನೆ ಮನೆಗೆ ತೆರಳಿ ಮತದಾನದ ಜಾಗೃತಿ ಮೂಡಿಸುತ್ತಿದ್ದಾಳೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದು, ತನ್ನ ಮತದಾನ ಜಾಗೃತಿಗೆ ಸಹಕಾರ ನೀಡಬೇಕೆಂದು ವಿನಂತಿಸಿದ್ದಾಳೆ.

Exit mobile version