Site icon Vistara News

Road Collapse: ರಸ್ತೆ ಕುಸಿದು ಸಿಲುಕಿದ ಲಾರಿ; ಜಲಮಂಡಳಿ ಬೇಕಾಬಿಟ್ಟಿ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ

Road collapse

ಬೆಂಗಳೂರು: ನಗರದಲ್ಲಿ ಕೇಬಲ್‌ ಅಳವಡಿಕೆ, ನೀರಿನ ಪೈಪ್‌ಲೈನ್‌ ಅಳವಡಿಕೆ ಸೇರಿ ವಿವಿಧ ಉದ್ದೇಶಗಳಿಗೆ ಎಲ್ಲೆಂದರಲ್ಲಿ ರಸ್ತೆಗಳನ್ನು ಅಗೆಯುವುದು ಹೆಚ್ಚಾಗುತ್ತಿದೆ. ಕೆಲಸ ಮುಗಿದ ನಂತರ ಸರಿಯಾಗಿ ಗುಂಡಿಗಳನ್ನು ಮುಚ್ಚದ ಕಾರಣ ವಾಹನ ಸವಾರರು ಪರದಾಡುವಂತಾಗಿದೆ. ಅದೇ ರೀತಿ ನಾಯಂಡಹಳ್ಳಿಯಲ್ಲಿ ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿಯ ಕಳಪೆ ಒಳಚರಂಡಿ ಪೈಪ್‌ ಕಾಮಗಾರಿಯಿಂದ ರಸ್ತೆ ಕುಸಿದು ಟ್ರಕ್‌ವೊಂದು ಸಿಲುಕಿದ ಘಟನೆ ನಡೆದಿದೆ.

ಕಾಮಗಾರಿ ವೇಳೆ ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ ಒಂದಲ್ಲ ಒಂದು ಯಡವಟ್ಟು ಮಾಡುತ್ತಲೇ ಇರುತ್ತವೆ. ನಾಯಂಡಹಳ್ಳಿ ವಾರ್ಡ್‌ ಜನವಸತಿ ಪ್ರದೇಶದಲ್ಲಿ ಕಳೆದ ತಿಂಗಳು ಒಳಚರಂಡಿ ಪೈಪ್‌ ದುರಸ್ತಿಗೆಂದು ಚೆನ್ನಾಗಿದ್ದ ರೋಡ್ ಅಗೆದು ಕಾಮಗಾರಿ ನಡೆಸಲಾಗಿತ್ತು. ಆದರೆ, ಥಾರ್‌ ರೋಡ್ ಅಗೆದು ಬೇಕಾಬಿಟ್ಟಿ ಕಾಂಕ್ರೀಟ್‌ ಹಾಕಿದ್ದರಿಂದ ರಸ್ತೆ ಕುಸಿದು, ಆ ಮಾರ್ಗದಲ್ಲಿ ಮಣ್ಣು ಸಾಗಿಸುತ್ತಿದ್ದ ಲಾರಿಯೊಂದು ಸಿಲುಕಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಇದನ್ನೂ ಓದಿ | Organ donors: ಅಂಗಾಂಗ ದಾನಿ ಕುಟುಂಬಗಳ ಕಣ್ಣೀರ ಕಥೆ ಕೇಳಿದ ಸಿಎಂ ಸಿದ್ದರಾಮಯ್ಯ

ಒಳಚರಂಡಿ ಪೈಪ್ ಹಾಕುವಾಗಲೂ ಜಲ ಮಂಡಳಿ ಅಧಿಕಾರಿಗಳು ಸ್ಥಳೀಯರಿಗೆ ಕಿರಿಕಿರಿ ನೀಡಿದ ಆರೋಪ ಕೇಳಿಬಂದಿದೆ. ನಾಯಂಡಹಳ್ಳಿ ಕೆರೆ ಸಮೀಪದ ರಸ್ತೆ ಅಧ್ವಾನದಿಂದ ಯಾವಾಗ ಏನಾಗುತ್ತೋ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಜನವರಿಯಲ್ಲಿ ಚೆನ್ನಾಗಿದ್ದ ರೋಡ್‌ ಅಗೆದು ಪೈಪ್ ಕಾಮಗಾರಿ ಮಾಡಲಾಗಿದೆ. ಅದಾದ ಒಂದೇ ತಿಂಗಳಲ್ಲಿ ಕಳಪೆ ಕಾಮಗಾರಿಯಿಂದ ರಸ್ತೆ ಕುಸಿದು ಲಾರಿ ಸಿಲುಕಿದೆ. ಬಿಬಿಎಂಪಿ ಮತ್ತು ಬಿಡಬ್ಲ್ಯುಎಸ್‌ಎಸ್‌ಬಿ ಎಡವಟ್ಟಿನಿಂದ ಈ ರೀತಿಯಾಗಿದೆ. ಕಳಪೆ ಕಾಮಗಾರಿಯಿಂದ ರಸ್ತೆಯಲ್ಲಿ ಓಡಾಡೋಕು ಆತಂಕದ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ನಾಯಂಡಹಳ್ಳಿ ಕೆರೆಯ ಸಮೀಪ ಜಲಮಂಡಳಿ ಹಾಗೂ ಬಿಬಿಎಂಪಿಯ ಕಳಪೆ ಕಾಮಗಾರಿಯಿಂದ ರಸ್ತೆ ಕುಸಿದು ಲಾರಿ ಸಿಲುಕಿಕೊಂಡಿದೆ. ಇದರಿಂದ ರಸ್ತೆಯಲ್ಲಿ ಎರಡು ದೊಡ್ಡ ಗುಂಡಿಗಳು ಬಿದ್ದಿವೆ. ಅಧಿಕಾರಿಗಳ ಕಳಪೆ ಕಾಮಗಾರಿಯಿಂದಲೇ ಸಮಸ್ಯೆ ಉಂಟಾಗಿದೆ ಎಂದು ನಾಯಂಡಹಳ್ಳಿ ನಿವಾಸಿ, ವಕೀಲ ವಿಲ್ಫ್ರೆಡ್‌ ಶ್ರೇಯಸ್ ಅಸಮಾಧಾನ ಹೊರಹಾಕಿದ್ದಾರೆ.

Exit mobile version