ಬೆಂಗಳೂರು: ಮೈತ್ರೀ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನಮ್ ಮತ್ತು ಪ್ರೋ. ಎಂಪಿಎಲ್ ಶಾಸ್ತ್ರೀ ಎಜುಕೇಶನ್ ಫೌಂಡೇಶನ್ಸ್ ಇಂಡಾಲಾಜಿಕಲ್ ಲೈಬ್ರರಿ & ರಿಸರ್ಚ್ ಸೆಂಟರ್ ವತಿಯಿಂದ ನವೆಂಬರ್ 19ರಂದು ಬೆಳಗ್ಗೆ 9.30ಕ್ಕೆ ನಗರದ ಮಲ್ಲೇಶ್ವರದ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ʼಮೇಧಾನಮನಮ್ ಸಂಸ್ಕೃತೋತ್ಸವಃ, ವಿದ್ವದ್ವಂದನಮ್, ಸಾಮರಸ್ಯಮ್, ಯೋಧನಮನಮ್ʼ (Sanskrutotsava) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಕ್ಕೆ ಖ್ಯಾತ ಉಪನ್ಯಾಸಕ ಡಾ. ಗುರುರಾಜ್ ಕರಜಗಿ, ರಂಗಭೂಮಿ, ಸಿನಿಮಾ ನಟ ಡಾ. ಸುಚೇಂದ್ರ ಪ್ರಸಾದ್, ಖ್ಯಾತ ಹಾಸ್ಯಬರಹಗಾರ ಎಂ.ಎಸ್. ನರಸಿಂಹಮೂರ್ತಿ, ಹಿರಿಯ ಸಂಸ್ಕೃತ ವಿದ್ವಾಂಸ ಪ್ರೊ. ಬಿ.ಆರ್. ಶೇಷಾದ್ರಿ ಅಯ್ಯಂಗಾರ್, ಖ್ಯಾತ ನ್ಯಾಯವಾದಿ ಕೆ.ಜೆ. ಕಾಮತ್, ಉದ್ಯಮಿ, ನಟ ಮಹೇಂದ್ರ ಮುನ್ನೋತ್ ಅವರು ಆಗಮಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ವೇದವಿಜ್ಞಾನ ಗುರುಕುಲಮ್ ಸಂಸ್ಥಾಪಕ ಡಾ. ರಾಮಚಂದ್ರ ಭಟ್ ಕೋಟೆಮನೆ, ಹಿರಿಯ ಸಂಸ್ಕೃತ ವಿದ್ವಾಂಸ ವಿದ್ವಾನ್ ಉಮಾಕಾಂತ್ ಭಟ್ಟ ಕೆರೆಕೈ, ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ, ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ಭಾರತೀಯ ವಾಯುಸೇನೆಯ ಫ್ಲೈಟ್ ಲೆಫ್ಟಿನೆಂಟ್ ಕೆ.ಪಿ. ನಾಗೇಶ್ ಅವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಕಾಮತ್ & ಕಾಮತ್ ಅಡ್ವೊಕೇಟ್ಸ್ ಸಹಯೋಗ ನೀಡಿದ್ದಾರೆ.
ಇದನ್ನೂ ಓದಿ | ನ.19 ರಂದು ಮೇಧಾನಮನಮ್-ಸಂಸ್ಕೃತೋತ್ಸವ, ಮೈತ್ರೀ ಪುರಸ್ಕಾರ ಪ್ರದಾನ
ಅಂದಿನ ವಿಶೇಷ
ಕಾರ್ಯಕ್ರಮದಲ್ಲಿ ಅಂದು ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಸಾಮರಸ್ಯಮ್ ಭಾಗವಾಗಿ ಖ್ಯಾತ ಗಾಯಕರಿಂದ ಮಧುರ ಸಂಸ್ಕೃತ ಗೀತೆಗಳ ಪ್ರಸ್ತುತಿ, ಸಂಸ್ಕೃತೋತ್ಸವದ ನಿಮಿತ್ತ ಅಮೂಲ್ಯ ಸಂಸ್ಕೃತ ಭಾವಗೀತೆಗಳ ರಸಾಸ್ವಾದನೆ ಇರಲಿದೆ.
ಪ್ರತಿಭಾ ಪುರಸ್ಕಾರ
ಪಿಯುಸಿ ಸಂಸ್ಕೃತದ ವಿದಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರʼ, ಸಂಸ್ಕೃತ ಕ್ಷೇತ್ರದ ಸಾಧಕರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ.
ಯೋಧನಮನಮ್
ದೇಶರಕ್ಷಣೆಗೆ ಕಟಿಬದ್ಧರಾದ ಸೈನಿಕರಿಗೆ ಗೌರವಾರ್ಪಣೆ, ಸಂಸ್ಕೃತ ಕಲಿಕೆಗೆ ಸಹಾಯಕವಾದ ಪುಸ್ತಕ, ಸಿಡಿಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇರುತ್ತದೆ.