Site icon Vistara News

Swadeshi Mela: ಫೆ. 7 ರಿಂದ ಬೆಂಗಳೂರಿನಲ್ಲಿ ಬೃಹತ್ ಸ್ವದೇಶಿ ಮೇಳ

Swadeshi Mela

ಬೆಂಗಳೂರು: ದೇಶೀಯ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವುದರ ಜತೆಗೆ ಜನರಿಗೆ ಸ್ವದೇಶಿ ವಸ್ತುಗಳ ಪರಿಚಯ ಮಾಡುವ ಉದ್ದೇಶದಿಂದ ಸ್ವದೇಶಿ ಜಾಗರಣ ಮಂಚ್ (Swadeshi Jagran Manch) ವತಿಯಿಂದ ಫೆಬ್ರವರಿ 7 ರಿಂದ 11 ರವರೆಗೆ ಬೃಹತ್ ಸ್ವದೇಶಿ ಮೇಳವನ್ನು ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ (ಶಾಲಿನಿ ಗೌಂಡ್) ಆಯೋಜಿಸಲಾಗಿದೆ.

ಫೆ. 7ರ ಸಂಜೆ 5.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ನಾಲ್ಕು ದಿನಗಳ ಕಾರ್ಯಾಗಾರದಲ್ಲಿ ಪಂಚಗವ್ಯ ಚಿಕಿತ್ಸೆ, ತಾರಸಿ ತೋಟ ತರಬೇತಿ ಕಾರ್ಯಾಗಾರ, ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ, ಆಯುರ್ವೇದ ಶಿಬಿರ, ಗೋ ಉತ್ಪನ್ನ ತಯಾರಿಕಾ ಶಿಬಿರ, ಜನಪದ ಸಂಜೆ, ನಿತ್ಯ ಬಳಕೆ ವಸ್ತುಗಳ ತಯಾರಿಕಾ ಶಿಬಿರ, ಕುಟುಂಬ ಪ್ರಬೋಧನ, ಸೌಭಾಗ್ಯವತಿ ಉಡುಗೊರೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಮೇಳದಲ್ಲಿ 225ಕ್ಕೂ ಅಧಿಕ ವಿವಿಧ ರೀತಿಯ ದೇಶೀಯ ಉತ್ಪಾದಕರ ಉತ್ಪನ್ನಗಳು ಸಾರ್ವಜನಿಕರಿಗೆ ಲಭ್ಯವಿರಲಿವೆ. ಇದಲ್ಲದೆ ಕರ್ನಾಟಕ ರಾಜ್ಯದ ವಿವಿಧ ರೀತಿಯ ಆಹಾರಗಳ ಮೂವತ್ತಕ್ಕೂ ಅಧಿಕ ಮಳಿಗೆಗಳು ಮೇಳದಲ್ಲಿ ಜನರಿಗೆ ವೈವಿಧ್ಯಮಯ ಆಹಾರವನ್ನು ಪರಿಚಯಸಲಿವೆ.

ಐದು ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ಸ್ವ ಉದ್ಯೋಗ ತರಬೇತಿ, ಆಯುರ್ವೇದ ಶಿಬಿರ, ತಾರಸಿ ತೋಟ ತರಬೇತಿ, ನಿತ್ಯ ಬಳಕೆ ವಸ್ತುಗಳ ತಯಾರಿಕಾ ಶಿಬಿರ, ಕುಟುಂಬ ಪ್ರಭೋದನಾ ಕಾರ್ಯಕ್ರಮ, ಪಂಚಗವ್ಯ ಚಿಕಿತ್ಸೆ, ಕಾಲೇಜು ವಿದ್ಯಾರ್ಥಿಗಳ ಸಮಾವೇಶ ಇತ್ಯಾದಿ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ಗಂಧವತಿಗೆ ಸಿರಿಗಂಧಲೇಪನನ ಆಗಮನ

ಮೇಳದಲ್ಲಿ ಪ್ರತಿದಿನ ರಾಜ್ಯದ ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, 2.5 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ. ಸಮಾಜದ ವಿವಿಧ ಕ್ಷೇತ್ರದ ಗಣ್ಯರನ್ನು ಸಹ ಮೇಳಕ್ಕೆ ಆಹ್ವಾನಿಸಲಾಗಿದೆ.

Exit mobile version