Site icon Vistara News

Namma Metro | ಮೆಟ್ರೊ ಪ್ರಯಾಣಿಕರಿಗೆ ಗುಡ್ ನ್ಯೂಸ್; ಕುಟುಂಬಸಮೇತ ಪ್ರಯಾಣಿಸುವಾಗ ಒಂದೇ ಟಿಕೆಟ್‌ ಸಾಕು!

Namma Metro

ಬೆಂಗಳೂರು:‌ ಕುಟುಂಬ ಸಮೇತ ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಬೇಕಾದರೆ ಟಿಕೆಟ್‌ಗಾಗಿ ನಿಮಿಷಗಟ್ಟಲೇ ಕ್ಯೂ ನಿಲ್ಲುತ್ತಿದ್ದೀರಾ? ಹಾಗಿದ್ದರೆ ಇನ್ನು ಮುಂದೆ ಆ ಟೆನ್ಶನ್ ಇರುವುದಿಲ್ಲ. ನಗರದ ಪ್ರಯಾಣಿಕರಿಗೆ ನಮ್ಮ ಮೆಟ್ರೋ(Namma Metro) ಗುಡ್‌ ನ್ಯೂಸ್ ನೀಡಿದೆ. ಬಿಎಂಆರ್‌ಸಿಎಲ್‌ ಕ್ಯೂಆರ್ ಕೋಡ್‌ ಆಧಾರಿತ ಟಿಕೆಟ್ ವ್ಯವಸ್ಥೆ ಮಾಡಿದ್ದು, ಇದರಿಂದ ಒಂದೇ ಟಿಕೆಟ್‌ನಲ್ಲಿ ಕುಟುಂಬ ಸದಸ್ಯರೆಲ್ಲರೂ ಪ್ರಯಾಣಿಸಬಹುದಾಗಿದೆ.

ಸದ್ಯ ಟೋಕನ್ ಖರೀದಿ ಮಾಡಿಯೇ ಎಲ್ಲರೂ ಪ್ರಯಾಣ ಮಾಡಬೇಕಿದೆ. ಇದಕ್ಕಾಗಿ ನಿಮಿಷಗಟ್ಟಲೇ ಕ್ಯೂನಲ್ಲಿ ಕಾಯಬೇಕಾಗುತ್ತದೆ. ಹೀಗಾಗಿ ಕುಟುಂಬ ಸಮೇತ ಆಗಮಿಸುವವರೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದೇ ಟಿಕೆಟ್‌ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ. ಒಂದು ಟಿಕೆಟ್‌ನಲ್ಲಿ ಗರಿಷ್ಠ 6 ಮಂದಿಗೆ ಮಾತ್ರ ಅವಕಾಶವಿರುತ್ತದೆ. 2023ರ ಜನವರಿಯಿಂದ ಈ ರೀತಿಯ ವಿಶೇಷ ಕ್ಯೂಆರ್‌ ಕೋಡ್‌ ಟಿಕೆಟ್‌ ವ್ಯವಸ್ಥೆ ಮಾಡಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ.

ಇದನ್ನೂ ಓದಿ | Formal Jobs | ಸೆಪ್ಟೆಂಬರ್‌ನಲ್ಲಿ ಔಪಚಾರಿಕ ಉದ್ಯೋಗ ಸೃಷ್ಟಿ ಹೆಚ್ಚಳ

ಪ್ರಸ್ತುತ ಸಂದರ್ಭದಲ್ಲಿ ಕುಟುಂಬ ಸಹಿತ ಪ್ರಯಾಣ ಮಾಡಿದರೂ ಪ್ರತ್ಯೇಕ ಟಿಕೆಟ್‌ನೊಂದಿಗೆ ಪ್ರಯಾಣಿಸಬೇಕು. ಇದರಿಂದ ಟಿಕೆಟ್ ಕೌಂಟರ್‌ನಲ್ಲಿ ಹೆಚ್ಚು ಕಾಲ ನಿಲ್ಲುವ ಸ್ಥಿತಿಯಿದೆ‌. ಇದನ್ನು ತಪ್ಪಿಸುವ ಉದ್ದೇಶದಿಂದ ಬಿಎಂಆರ್‌ಸಿಎಲ್‌ ಒಂದೇ ಟಿಕೆಟ್‌ನಲ್ಲಿ 6 ಮಂದಿ ಪ್ರಯಾಣಿಸಲು ಅವಕಾಶ ಕಲ್ಪಿಸಲು ಮುಂದಾಗಿದೆ. ಇದರಿಂದ ಒಟ್ಟೊಟ್ಟಿಗೆ ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರು ಪ್ರಯಾಣಿಸಲು ನೆರವಾಗಲಿದ್ದು, ಟಿಕೆಟ್‌ಗಾಗಿ ಕಾಯುವ ಸಮಯವೂ ಉಳಿಯಲಿದೆ.

ಜನವರಿಯಿಂದ ಈ ಸೇವೆ ಆರಂಭವಾಗಲಿದ್ದು, ಸದ್ಯ ಇದರ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಈಗಾಗಲೇ ನವೆಂಬರ್ 1 ರಿಂದ ಆರಂಭವಾಗಿರುವ ಕ್ಯೂಆರ್ ಕೋಡ್‌ ಟಿಕೆಟ್ ವ್ಯವಸ್ಥೆಗೆ ಉತ್ತಮ ಸ್ಪಂದನೆ ಸಿಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಜನಸ್ನೇಹಿಯಾಗಲು ಬಿಎಂಆರ್‌ಸಿಎಲ್‌ ಈ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ | Border dispute | ರಾಜ್ಯದ ಬಸ್‌ ಅಡ್ಡಗಟ್ಟಿ ಪುಂಡಾಟ ಮೆರೆದ ಮಹಾ ಪುಂಡರು, ಬೊಮ್ಮಾಯಿ ವಿರುದ್ಧ ಪ್ರತಿಭಟನೆ

Exit mobile version