Site icon Vistara News

Metro Penalty: ಮೆಟ್ರೊ ಸ್ಟೇಷನ್‌ನಲ್ಲಿ ಗರ್ಲ್‌ ಫ್ರೆಂಡ್‌ಗೆ ಕಾಯುತ್ತ ಕೂತರೆ ಬೀಳುತ್ತೆ 50 ರೂ. ದಂಡ!

Metro Penalty

ಬೆಂಗಳೂರು: ಭಾರಿ ಮಳೆಯ ಕಾರಣದಿಂದ (Metro Penalty) ಮೆಟ್ರೋ ನಿಲ್ದಾಣದಲ್ಲಿ (Metro station) 20 ನಿಮಿಷಕ್ಕಿಂತ ಹೆಚ್ಚು ಕಾಲ ನಿಂತು ಮೊಬೈಲ್ ಚಾರ್ಜ್ ಮಾಡಿದ ವ್ಯಕ್ತಿಯೊಬ್ಬರಿಗೆ 50 ರೂ. ದಂಡ (Penalty For Passenger) ವಿಧಿಸಿದ್ದು ಗೊತ್ತಲ್ಲವೆ? ಬೆಂಗಳೂರಿನ (bengaluru) ವಿಜಯನಗರ (vijayanagar) ಮೆಟ್ರೊ ನಿಲ್ದಾಣದಲ್ಲಿ ಈ ವಿದ್ಯಮಾನ ಸಂಭವಿಸಿತ್ತು. ಇದರ ಸಂದೇಶ ಏನೆಂದರೆ, ನಾವು ಯಾವುದೇ ಮೆಟ್ರೊ ನಿಲ್ದಾಣದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಹೊತ್ತು ಕಾಲ ಕಳೆದರೆ 50 ರೂ. ದಂಡ ತೆರಬೇಕಾಗುತ್ತದೆ. ಮೆಟ್ರೊ ನಿಲ್ದಾಣದಲ್ಲಿ ಯಾರಾದರು ತಮ್ಮ ಗರ್ಲ್‌ ಫ್ರೆಂಡ್‌ ಅಥವಾ ಬಾಯ್‌ ಫ್ರೆಂಡ್‌ಗಾಗಿ ಕಾಯುತ್ತ 20 ನಿಮಿಷಕ್ಕಿಂತ ಹೆಚ್ಚು ಸಮಯ ಕಳೆದರೆ ದಂಡ ಬಿದ್ದೇ ಬೀಳುತ್ತದೆ.

ಅರುಣ್ ಜುಗಲ್ ಬಂದಿ ಎಂಬವರು ಭಾರೀ ಮಳೆಯ ಸಮಯದಲ್ಲಿ ವಿಜಯನಗರದ ಮೆಟ್ರೋ ನಿಲ್ದಾಣದಲ್ಲಿ ಕುಳಿತು ತಮ್ಮ ಫೋನ್ ಅನ್ನು ಚಾರ್ಜ್ ಮಾಡಲು ನಿಂತಿದ್ದರು. ನಿಲ್ದಾಣದಲ್ಲಿ ಜನ ದಟ್ಟಣೆಯನ್ನು ತಡೆಗಟ್ಟುವ ಅಗತ್ಯವನ್ನು ಉಲ್ಲೇಖಿಸಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಅಧಿಕಾರಿಗಳು ದಂಡ ವಿಧಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರಿನ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಅನುಮತಿಸಿದ 20 ನಿಮಿಷಗಳ ಅವಧಿಯನ್ನು ಮೀರಿದ್ದಕ್ಕಾಗಿ ಜುಗಲ್ ಅವರಿಗೆ 50 ರೂ. ದಂಡವನ್ನು ವಿಧಿಸಲಾಯಿತು. ನಿಲ್ದಾಣದಿಂದ ನಿರ್ಗಮಿಸಿದ ಮೇಲೆ ಅವರ ಮೆಟ್ರೋ ಕಾರ್ಡ್‌ನಿಂದ ದಂಡವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲಾಯಿತು.

5 ನಿಮಿಷ ಹೆಚ್ಚು ಕಳೆದಿದ್ದರು

ಅರುಣ್ ಜುಗಲ್ ಅವರು ಸಂದಿಗ್ಧತೆಗೆ ಸಿಲುಕಿದ್ದರು. ಏಕೆಂದರೆ ಹೊರಗೆ ಭಾರೀ ಮಳೆಯಿಂದಾಗಿ ನಿಲ್ದಾಣದಲ್ಲಿ ತಮ್ಮ ಫೋನ್ ಅನ್ನು ಚಾರ್ಜ್ ಮಾಡಲು ನಿರ್ಧರಿಸಿದರು. ಅವರ ಫೋನ್ ಬ್ಯಾಟರಿಯೂ ಖಾಲಿಯಾಗಿತ್ತು. ನಿರಂತರ ಮಳೆ ಒಂದು ಕಡೆಯಾದರೆ ಮೊಬೈಲ್ ನಲ್ಲಿ ಬ್ಯಾಟರಿ ಮುಗಿದಿದ್ದುದರಿಂದ ಚಾರ್ಜ್ ಮಾಡಲು ನಿರ್ಧರಿಸಿದ್ದರು. ಅಲ್ಲೇ ಉಳಿಯುವ ಹೊರತು ಅವರ ಬಳಿ ಬೇರೆ ದಾರಿಯಿರಲಿಲ್ಲ. ಆದರೆ, ಇದರಿಂದಾಗಿ ಅವರು ಒಟ್ಟು 25 ನಿಮಿಷ ಅಲ್ಲಿ ಕಾಲ ಕಳೆದಿದ್ದರು. ಹಾಗಾಗಿ ದಂಡ ತೆರಬೇಕಾಯಿತು.

ಮೆಟ್ರೊ ಕಾರ್ಡ್‌ನಿಂದ ಕಡಿತ

ಅಲ್ಲಿಂದ ನಿರ್ಗಮಿಸಿದ ಮೇಲೆ ಮೆಟ್ರೊ ಕಾರ್ಡ್‌ನಿಂದ 50 ರೂ. ಹೆಚ್ಚುವರಿ ಕಡಿತವಾಗಿರುವುದನ್ನು ಕಂಡು ಜುಗಲ್ ಅವರಿಗೆ ಅಚ್ಚರಿಯಾಗಿದೆ. ಶುಲ್ಕದ ಬಗ್ಗೆ ಅವರು ವಿಚಾರಿಸಿದಾಗ, ಮೆಟ್ರೋ ಸಿಬ್ಬಂದಿ ಬಿಎಂಆರ್‌ಸಿಎಲ್‌ನ ನಿಲ್ದಾಣದ ಸಮಯ ಮಿತಿ ನಿಯಮವನ್ನು ಉಲ್ಲಂಘಿಸಿದ ಅವರ ವಿಸ್ತೃತ ವಾಸ್ತವ್ಯದ ಕಾರಣ ಎಂದು ಅವರಿಗೆ ತಿಳಿಸಿದರು.

ಇದನ್ನೂ ಓದಿ: Karnataka Politics: ಆಪರೇಶನ್ ಕಮಲ ಆಗೋಕೆ ಸಾಧ್ಯಾನೇ ಇಲ್ಲ; ಇದು ಬಿಜೆಪಿಯ ಹಗಲುಗನಸು: ಸಿಎಂ ಸಿದ್ದರಾಮಯ್ಯ

ದಟ್ಟಣೆಯನ್ನು ತಡೆಗಟ್ಟಲು ಮತ್ತು ಪ್ರಯಾಣಿಕರ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಿರುವ ಈ ನಿಯಮವು ವ್ಯಕ್ತಿಗಳು 20 ನಿಮಿಷಗಳ ಅನಂತರ ನಿಲ್ದಾಣದ ಒಳಗೆ ಇರಬಾರದು ಎಂದು ಷರತ್ತು ವಿಧಿಸುತ್ತದೆ.
ದಂಡ ವಿಧಿಸಿರುವುದನ್ನು ಬಿಎಂಆರ್ ಸಿಎಲ್ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದು, ಈ ನಿಯಮ ಮೊದಲಿನಿಂದಲೂ ಜಾರಿಯಲ್ಲಿದ್ದು, ಮೆಟ್ರೊ ವ್ಯವಸ್ಥೆಯಲ್ಲಿ ಸುವ್ಯವಸ್ಥೆ ಹಾಗೂ ದಕ್ಷತೆ ಕಾಪಾಡುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಎಲ್ಲಾ ಪ್ರಯಾಣಿಕರು ಹೆಚ್ಚು ತಂಗಿದರೆ ಅದು ಜನದಟ್ಟಣೆ ಮತ್ತು ಇತರರಿಗೆ ಅನಾನುಕೂಲತೆಗೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Exit mobile version