Site icon Vistara News

ಸೈಕ್ಲಿಂಗ್ ಎಂದು ಹೋಗಿ ನಾಪತ್ತೆಯಾಗಿದ್ದ ಬಾಲಕರನ್ನ ಕರೆತಂದ ಪೊಲೀಸರು

ಬೆಂಗಳೂರು: ಸೈಕ್ಲಿಂಗ್ ಹೋಗಿ ಬರುತ್ತೇವೆ ಎಂದು ತಿಳಿಸಿ ಹೋದ ಬಾಲಕರು ನಾಪತ್ತೆಯಾಗಿ ಪೋಷಕರಿಗೆ ಆತಂಕ ಎದುರಾಘಿತ್ತು. ಕಮ್ಮನಹಳ್ಳಿಯಲ್ಲಿ ವಾಸಿಗಳಾದ ಪೋಷಕರ ದೂರಿನ ಆಧಾರದಲ್ಲಿ ಇದೀಗ ಪೊಲೀಸರು ಇಬ್ಬರು ಬಾಲಕರನ್ನೂ ಕರೆತಂದು ಮನೆಯವರಗೆ ಒಪ್ಪಿಸಿದ್ದಾರೆ.

ಬಾಲಕರು ತೆರಳಿದ್ದ ಸೈಕಲ್‌ಗಳು

ಕಮ್ಮನಹಳ್ಳಿಯ ಆರ್.ಎಸ್.ಪಾಳ್ಯದಲ್ಲಿ 14 ವರ್ಷದ ತರುಣ್, 11ವರ್ಷದ ಚರಣ್ ಸೈಕ್ಲಿಂಗ್‌ ಮಾಡುವುದಾಗಿ ತಿಳಿಸಿ ಗುರುವಾರ ಸಂಜೆ ಹೊರಹೋಗಿದ್ದರು. ತಡರಾತ್ರಿಯಾದರೂ ಬಾಲಕರು ಹಿಂದಿರುಗಿಲ್ಲ. ಮನೆಯಿಂದ ಹೊರ ಹೋಗೋವಾಗ ಬಾಲಕ ತರುಣ್‌ ಮೊಬೈಲ್ ತೆಗೆದುಕೊಂಡು ಹೋಗಿದ್ದ. ಆದರೆ ಅವನ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

ತರುಣ್, ಚರಣ್

ಆತಂಕಗೊಂಡ ಪೋಷಕರು ಬಾಣಸವಾಡಿ ಪೊಲೀಸ್‌ ಠಾನೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಾಗ್ತಿದ್ದಂತೆಯೇ ಮೊಬೈಲ್ ಟವರ್ ಡಂಪ್ ಟ್ರೇಸ್ ಮಾಡಲು ಪೊಲೀಸರು ಮುಂದಾದರು. ತಂತ್ರಜ್ಞಾನದ ನೆರವಿನಿಂದ, ಬಾಲಕರು ನಂದಿ ಬೆಟ್ಟದಲ್ಲಿದ್ದಾರೆ ಎನ್ನುವುದು ಪತ್ತೆಯಾಯಿತು. ಅಲ್ಲಿನ ಪೊಲೀಸರ ಸಹಾಯದಿಂದ ಇಬ್ಬರನ್ನೂ ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ| ಭದ್ರಾ ನಾಲೆಯಲ್ಲಿ ಈಜಲು ಹೋದ ಇಬ್ಬರು ಮಕ್ಕಳು ನಾಪತ್ತೆ

Exit mobile version