Site icon Vistara News

Independence Day | ದೇಶದ ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಾಡಿದೆ: ಶಾಸಕ ಅರವಿಂದ ಲಿಂಬಾವಳಿ

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಕರೊನಾ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಅಷ್ಟೇನೂ ಕಳೆ ಕಟ್ಟಿರಲಿಲ್ಲ, ಪ್ರಧಾನಿ ನರೇಂದ್ರಮೋದಿ ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸ್ಮರಣೀಯಗೊಳಿಸಲು ಪಣತೊಟ್ಟು “ಹರ್ ಘರ್ ತಿರಂಗಾʼʼ ಅಭಿಯಾನದ ಮೂಲಕ ಯಶಸ್ವಿಯಾದರು. ಅದರಂತೆ ದೇಶದ ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಾಡಿತು ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿದರು.

ಮಹದೇವಪುರ ಕ್ಷೇತ್ರದಲ್ಲಿ ವೈಟ್‌ಫೀಲ್ಡ್ ಬಿಜೆಪಿ ವತಿಯಿಂದ ಸ್ವಾತಂತ್ರ್ಯ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ವಿರುದ್ಧ ಹೋರಾಡಿ ಅದನ್ನು ಹಿಮ್ಮೆಟ್ಟಿಸಿದ ನಂತರ ಸ್ವಾತಂತ್ರ್ಯೋತ್ಸವ ಆಚರಿಸಿದ್ದು, ಈ ಬಾರಿ ಮಹದೇವಪುರ ಕ್ಷೇತ್ರದಲ್ಲಿ ಸರಿ ಸುಮಾರು 75 ಸಾವಿರ ಧ್ವಜಗಳು ಹಾರಾಡಿವೆ, ಇದೊಂದು ಹೆಮ್ಮೆಯ ವಿಷಯ ಎಂದರು.

ಇದನ್ನೂ ಓದಿ | Independence Day | ನ್ಯೂಯಾರ್ಕ್‌ ಆಲ್ಬನಿಯಲ್ಲಿ 75ನೇ ಭಾರತ ಸ್ವಾತಂತ್ರ್ಯೋತ್ಸವದ ಅದ್ಧೂರಿ ಆಚರಣೆ

ದೇಶದ ಅಭಿವೃದ್ಧಿಗೋಸ್ಕರ ಹಾಗೂ ಭಾರತ ವಿಶ್ವಗುರುವಾಗಲು ನಾವೆಲ್ಲರೂ ಏನಾದರೂ ಕೊಡುಗೆ ನೀಡಬೇಕು. ನಾವಿರುವ ಕ್ಷೇತ್ರಗಳಲ್ಲಿಯೆ ವೈದ್ಯಕೀಯ ಕ್ಷೇತ್ರ, ಐಟಿ ಕ್ಷೇತ್ರ ಯಾವುದೇ ಕ್ಷೇತ್ರದಲ್ಲಾಗಲಿ ಆರ್ಥಿಕವಾಗಿ ವ್ಯಾಪಾರ, ವಹಿವಾಟು ಮಾಡುತ್ತಾ ಅಭಿವೃದ್ಧಿ ಪಡಿಸುವ ಕೆಲಸ ಮಾಡಬೇಕು. ಯುವಕರು ಸರ್ಕಾರಿ ಕೆಲಸ ಪಡೆಯುವ ಯೋಚನೆಯಲ್ಲೇ ಇರದೆ ನೂರು ಜನರಿಗೆ ಕೆಲಸ ನೀಡುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಖ್ಯಾತ ವೀಣಾ ವಾದಕಿ ವೀಣಾ ವಾರುಣಿ, ಮಾಸ್ಟರ್ ಆನಂದ್, ವಂಶಿಕಾ ಸೇರಿ ಹಲವು ಹೆಸರಾಂತ ಕಲಾವಿದರು, ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ದೇಶದ ಐಕ್ಯತೆಯನ್ನು ಸಾರುವ, ಸಂಸ್ಕೃತಿ, ಪರಂಪರೆಯನ್ನು ಸಾರುವ ಗೀತೆಗಳು ಪ್ರೇಕ್ಷರ ಎದೆಯಲ್ಲಿ ದೇಶಭಕ್ತಿಯ ಅಲೆಯನ್ನು ಉಕ್ಕಿಸಿದವು. ಅಲ್ಲದೇ ಮರಳು ಶಿಲ್ಪಕಲೆ, ಹಾಸ್ಯ, ರಸಮಂಜರಿ ಕಾರ್ಯಕ್ರಮಗಳು ನೆರೆದಿದ್ದವರನ್ನು ರಂಜಿಸಿದವು.

ಬಿಜೆಪಿ ಕ್ಷೇತ್ರ ಅಧ್ಯಕ್ಷರಾದ ಮನೋಹರರೆಡ್ಡಿ, ನಟರಾಜ್, ಮುಖಂಡರಾದ ಜಯಚಂದ್ರಾರೆಡ್ಡಿ, ವೆಂಕಟಸ್ವಾಮಿರೆಡ್ಡಿ, ಚನ್ನಸಂದ್ರ ಚಂದ್ರಶೇಖರ್, ಶ್ರೀಧರ್ ರೆಡ್ಡಿ ರಾಜೇಶ್, ಹೂಡಿ ಪಿಳ್ಳಪ್ಪ, ಮಹೇಂದ್ರ ಮೋದಿ ಮತ್ತಿತರರು ಇದ್ದರು.

ಇದನ್ನೂ ಓದಿ | Independence Day | ಅದಮ್ಯ ಚೇತನದಲ್ಲಿ ಮಕ್ಕಳಿಗೆ ತ್ರಿವರ್ಣ ಭೋಜನ

Exit mobile version