ಬೆಂಗಳೂರು : ವಿದೇಶಗಳಲ್ಲಿ ಮಂಕಿಪಾಕ್ಸ್ ಹಾವಳಿ ಹಿನ್ನಲೆಯಲ್ಲಿ ದೇಶದಲ್ಲಿಯೂ ಮಂಕಿಪಾಕ್ಸ್ ಭೀತಿಯಿಂದ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮಂಕಿಪಾಕ್ಸ್ ನಿಯಂತ್ರಣ ದೃಷ್ಟಿಯಿಂದ ಯಾವುದೇ ಶಂಕಿತ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದ್ದರೆ ಕೂಡಲೇ ಸೋಂಕಿತರನ್ನು ಪ್ರತ್ಯೇಕಿಸಬೇಕು. ಮತ್ತು ಮಂಕಿಪಾಕ್ಸ್ ಚಿಕಿತ್ಸೆಗೆ ಜಿಲ್ಲಾಮಟ್ಟದಲ್ಲಿ ಬೆಡ್ ಗಳ ವ್ಯವಸ್ಥೆಗಳಿದ್ದು, ಕನಿಷ್ಠ ಎರಡು ಬೆಡ್ ಗಳನ್ನ ಮೀಸಲಿಡಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಇದನ್ನೂ ಓದಿ | Monkeypox: ಮಂಕಿ ಪಾಕ್ಸ್ ಭಾರತಕ್ಕೆ ಬಂದಿಲ್ಲ, ಆದರೂ ಎಲ್ಲೆಡೆ ಕಟ್ಟೆಚ್ಚರ ವಹಿಸಲು ಸೂಚನೆ
ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲು ಆರೋಗ್ಯ ಅಧಿಕಾರಿಗಳಿಗೆ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಮಾಡಿ, ಶಂಕಿತ ಸೋಂಕಿತರನ್ನ ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು. ಮತ್ತು ಬೆಂಗಳೂರಿನ ಇಂದಿರಾಗಾಂಧಿ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ಶಂಕಿತ ಪ್ರಕರಣಗಳ ಮಾದರಿಗಳನ್ನ ಪುಣೆ ಅಥವಾ ಬೆಂಗಳೂರಿನ ರಾಷ್ಟ್ರೀಯ ವೈರಾಣು ಸಂಶೋಧನಾ ಸಂಸ್ಥೆಗೆ (NIV) ರವಾನಿಸುವಂತೆ ಸೂಚನೆ ನೀಡಲಾಗಿದೆ. ಡಾ ಎನ್ ಶ್ರೀನಿವಾಸ್ ರಾಜ್ಯ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ | Explainer: ಮಂಕಿಪಾಕ್ಸ್ ಮಾರಣಾಂತಿಕವೇ? ಸಲಿಂಗಕಾಮಿಗಳಿಗೆ ಹೆಚ್ಚು ಆತಂಕ?