ಬೆಂಗಳೂರು: ಮಾಕ್ಸಿ ಹೋಟೆಲ್ಸ್(moxy hotels), ಮ್ಯಾರಿಯಟ್ ಬೊನ್ವಾಯ್‌ನ (Marriott Bonvoy) 30ಕ್ಕೂ ಹೆಚ್ಚು ಅಸಾಧಾರಣ ಹೋಟೆಲ್ ಬ್ರ್ಯಾಂಡ್ ಪೋರ್ಟ್‌ಫೋಲಿಯೊದ ಒಂದು ಭಾಗವಾಗಿದ್ದು, ಇದೀಗ ಬೆಂಗಳೂರು ವಿಮಾನ ನಿಲ್ದಾಣದ (kempegowda international airport, Bengaluru) ಪ್ರೆಸ್ಟೀಜ್ ಟೆಕ್ ಕ್ಲೌಡ್ ನಲ್ಲಿ ಹೊಸ ಮಾಕ್ಸಿ ಆರಂಭವಾಗಿದೆ ಎಂಬುದನ್ನು ಘೋಷಿಸಿದೆ, ಇದು ಭಾರತದಲ್ಲಿ ಬ್ರ್ಯಾಂಡ್‌ನ ಮೊದಲ ಹೋಟೆಲ್ ಆಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಆತಿಥ್ಯದ ಚಮತ್ಕಾರ ಮತ್ತು ಸಂತೋಷದ ಭಾಗವನ್ನು ಪರಿಚಯಿಸಲಿರುವ ಹೋಟೆಲ್, ಸ್ಥಳೀಯರು ಮತ್ತು ಪ್ರವಾಸಿಗರಿಗೆ ಮೋಜು ಮತ್ತು ಸಾಹಸಮಯ ಅನುಭವ ಪಡೆಯಲು ಪರಿಪೂರ್ಣ ಕೇಂದ್ರವಾಗಿದೆ.
ಉತ್ತರ ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 10 ನಿಮಿಷಗಳ ಅಂತರದಲ್ಲಿರುವ ಮಾಕ್ಸಿ ಬೆಂಗಳೂರು ಏರ್ಪೋರ್ಟ್ ಪ್ರೆಸ್ಟೀಜ್ ಟೆಕ್ ಕ್ಲೌಡ್, ನಗರದ ಐಕಾನಿಕ್ ಸೈಟ್‌ಗಳು ಮತ್ತು ಮುಂಬರುವ ಪ್ರಮುಖ ಯೋಜನೆಗಳ ಆಯಕಟ್ಟಿನ ಸ್ಥಳದಲ್ಲಿದೆ. ಬೆಂಗಳೂರಿನ ಕಂಟೆಂಪರರಿ ಮತ್ತು ಸಾಂಪ್ರದಾಯಿಕ ಸ್ಥಳಗಳ ಸುಂದರ ಮಿಶ್ರಣವನ್ನು ನೋಡಲು ಬಯಸುವ ಪ್ರವಾಸಿಗರು ಇಸ್ಕಾನ್ ದೇವಾಲಯ, ಸೇಂಟ್ ಮೇರಿಸ್ ಬೆಸಿಲಿಕಾ ಮತ್ತು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ಗೆ ಭೇಟಿ ನೀಡಬಹುದು. ಜೊತೆಗೆ, ನಗರದ ಏವಿಯೇಷನ್ ಇತಿಹಾಸ ಮತ್ತು ತಾಂತ್ರಿಕ ಆವಿಷ್ಕಾರಗಳಲ್ಲಿ ಆಸಕ್ತಿಯುಳ್ಳವರು ಎಚ್ಎಎಲ್ ಹೆರಿಟೇಜ್ ಸೆಂಟರ್, ಏರೋಸ್ಪೇಸ್ ಮ್ಯೂಸಿಯಂ ಮತ್ತು ಬ್ರಿಟಿಷ್-ಯುಗದ ಒಪೇರಾ ಹೌಸ್ ಅನ್ನು ವೀಕ್ಷಿಸಬಹುದು.ಇವುಗಳು ವರ್ಚುವಲ್-ರಿಯಾಲಿಟಿ ಅನುಭವಗಳನ್ನು ನೀಡುತ್ತದೆ.
“ನಾವು ನಮ್ಮ ಹೋಟೆಲ್‌ಗಳ ಪೋರ್ಟ್‌ಫೋಲಿಯೊ ಬೆಳೆಸುವುದನ್ನು ಮುಂದುವರಿಸುತ್ತಿದ್ದೆವು. ಮಾಕ್ಸಿಬೆಂಗಳೂರು ಏರ್‌ಪೋರ್ಟ್ ಪ್ರೆಸ್ಟೀಜ್ ಕ್ಲೌಡ್ ಅನ್ನು ತೆರೆಯುವುದರೊಂದಿಗೆ ಬೆಂಗಳೂರಿನ ಶಕ್ತಿಯಾಗಿ ಮಾಕ್ಸಿಹೋಟೆಲ್‌ಗಳ ಲವಲವಿಕೆಯ ಸ್ವಭಾವವನ್ನು ಒದಗಿಸುವ ಸಾಮರ್ಥ್ಯದ ಬಗ್ಗೆ ನಾವು ಹೆಮ್ಮೆಪಡುತ್ತೇವೆ” ಎಂದು ಮ್ಯಾರಿಯಟ್ ಇಂಟರ್‌ನ್ಯಾಶನಲ್ ದಕ್ಷಿಣ ಏಷ್ಯಾಏರಿಯಾ ಉಪಾಧ್ಯಕ್ಷ ರಂಜು ಅಲೆಕ್ಸ್ ಹೇಳಿದ್ದಾರೆ.
“ಈ ಕ್ರಿಯಾತ್ಮಕ ನಗರಕ್ಕೆ ಮೋಜಿನ-ಹಂಬಲದವರನ್ನು ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ ಮತ್ತು ಮಾಕ್ಸಿಯ ಮೋಜಿನ ಮನೋಭಾವ ಮತ್ತು ಅಪೂರ್ವ ಹೋಟೆಲ್ ಅನುಭವವನ್ನು ಒದಗಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಉದ್ಘಾಟನೆಯ ಕುರಿತು ಪ್ರತಿಕ್ರಿಯಿಸಿದ ಪ್ರೆಸ್ಟೀಜ್ ಗ್ರೂಪ್ ನ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಇರ್ಫಾನ್ ರಜಾಕ್, “ಅಪಾರವಾದ ಹೆಮ್ಮೆ ಮತ್ತು ಕೃತಜ್ಞತೆಯಿಂದ ನಾವು ಮಾಕ್ಸಿ ಬೆಂಗಳೂರು ಏರ್ ಪೋರ್ಟ್ ಪ್ರೆಸ್ಟೀಜ್ ಟೆಕ್ ಕ್ಲೌಡ್‌ನ ಕ್ರಿಯಾತ್ಮಕ ಆಗಮನವನ್ನು ಪರಿಚಯಿಸುತ್ತಿದ್ದೇವೆ. ಇದು ದಕ್ಷಿಣ ಏಷ್ಯಾದಲ್ಲಿ ಮಾಕ್ಸಿಹೋಟೆಲ್‌ಗಳ ಮೊದಲ ಹೋಟೆಲ್ ಆಗಿದೆ. ವಿಶ್ವ ದರ್ಜೆಯ ಆತಿಥ್ಯವನ್ನು ಒದಗಿಸುವ ನಮ್ಮ ಅಚಲ ಬದ್ಧತೆಗೆ ಇದು ಸಾಕ್ಷಿಯಾಗಿದೆ. ಅದರ ರೋಮಾಂಚಕ ವಾತಾವರಣ ಮತ್ತು ಆಧುನಿಕ ಗುಣದೊಂದಿಗೆ, ಈ ಹೊಸ ಸೇರ್ಪಡೆಯು ಪ್ರೆಸ್ಟೀಜ್ ಗ್ರೂಪ್ ಅನ್ನು ವ್ಯಾಖ್ಯಾನಿಸುವ ನವೀನ ಮನೋಭಾವವನ್ನು ಒಳಗೊಂಡಿದೆ ಎಂದು ನಾವು ಹೆಮ್ಮೆಪಡುತ್ತೇವೆ” ಎಂದು ಹೇಳಿದ್ದಾರೆ.
ವಿನ್ಯಾಸ + ಸೌಕರ್ಯಗಳು
ಕಲೆ, ವಿನ್ಯಾಸ ಮತ್ತು ಸಂಗೀತಕ್ಕಾಗಿ ಬೆಂಗಳೂರಿನ ಗುಣವನ್ನು ತೆಗೆದುಕೊಂಡಿರುವ, ಮಾಕ್ಸಿ ಬೆಂಗಳೂರಿನ ಇಂಡಸ್ಟ್ರಿಯಲ್-ಸ್ನೇಹಿ ಲಾಬಿಯು ಸೊಗಸಾದ ಕಲಾಕೃತಿಗಳು, ಸ್ಥಳೀಯ ಕಲಾಕೃತಿಗಳನ್ನು ಒಳಗೊಂಡ ಗ್ರಾಫಿಟಿ ಗೋಡೆ ಮತ್ತು ಹಲವಾರು ಇನ್‌ಸ್ಟಾ-ಯೋಗ್ಯ ಕಾರ್ನರ್‌ಗಳನ್ನು ಅತ್ಯುತ್ತಮವಾದ ಹಿನ್ನೆಲೆ ಸಂಗೀತದೊಂದಿಗೆ ನೀಡುತ್ತದೆ. ಲಾಬಿಯು ಹೊಟೇಲ್‌ನ ಹೃದಯಭಾಗವಾಗಿದ್ದು, ಇದು ಗೇಮ್ ಆರ್ಕೇಡ್, ಲೈಬ್ರರಿ, ಕೋ-ವರ್ಕಿಂಗ್ ಮತ್ತು ಆಟದ ಸ್ಥಳವಾಗಿ ರೂಪುಗೊಂಡಿದ್ದು, ಇದು ಸಂಪರ್ಕಗಳನ್ನು ಸುಲಭಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ. ಫಿಟ್ ಆಗಿರಲು ಬಯಸುವ ಅತಿಥಿಗಳಿಗೆ 24/7 ಫಿಟ್‌ನೆಸ್ ಸೆಂಟರ್, 25-ಮೀಟರ್ ಔಟ್ ಡೋರ್ ಈಜುಕೊಳ ಇದೆ. ಹೋಟೆಲ್‌ನ ಕಾರ್ ಪಾರ್ಕ್ ಮತ್ತು ವಿಮಾನ ನಿಲ್ದಾಣದ ಶಟಲ್ ಸೇವೆಯಂತಹ ಅನುಕೂಲಕರ ಸೌಕರ್ಯಗಳನ್ನು ಆನಂದಿಸಬಹುದು.
ಹೋಟೆಲ್ ಆರು ಸೂಟ್‌ಗಳನ್ನು ಒಳಗೊಂಡಿದ್ದು, 128 ಆಧುನಿಕ ಮತ್ತು ಬುದ್ಧಿವಂತಿಕೆಯಿಂದ ವಿನ್ಯಾಸಗೊಳಿಸಲಾದ ಕೊಠಡಿಗಳನ್ನು ಒದಗಿಸುತ್ತದೆ. ಎಲ್ಇಡಿ ದೀಪಗಳು, ಕೀ-ಲೆಸ್ ಎಂಟ್ರಿ, ಮತ್ತು ಉಚಿತ ವೈಫೈನಂತಹ ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಆಧುನಿಕ ಸೌಕರ್ಯಳು ಮತ್ತು ಅಪೂರ್ವ ವಿನ್ಯಾಸವನ್ನು ಹೊಂದಿದೆ. ಪ್ರತಿ ಕೋಣೆಯೂ ಮಾಕ್ಸಿಯ ಸಿಗ್ನೇಚರ್ ಸ್ಟೈಲಿನ ವಾಲ್-ಮೌಂಟೆಡ್ ಪೆಗ್‌ಸ್ಯಾಂಡ್ ಮತ್ತು ಫೋಲ್ಡಬಲ್ ಡೆಸ್ಕ್ ಗಳು ಮತ್ತು ಕುರ್ಚಿಗಳನ್ನು ಒಳಗೊಂಡಂತೆ ಮಾಡ್ಯುಲರ್ ಪೀಠೋಪಕರಣಗಳನ್ನು ಹೊಂದಿದೆ. ಅತಿಥಿಗಳು ತಮ್ಮ ಅಗತ್ಯಗಳಿಗೆ ತಕ್ಕಂತೆ ಕೊಠಡಿಯನ್ನು ಹೊಂದಿಸಿಕೊಳ್ಳಲು ನಮ್ಯತೆಯನ್ನು ನೀಡುತ್ತದೆ.
ತಿನ್ನಿ, ಕುಡಿಯಿರಿ ಮತ್ತು ಆಟವಾಡಿರಿ
ಬೆಂಗಳೂರಿನ ರುಚಿಕರ ಪಾಕಪದ್ಧತಿಯಲ್ಲಿ ಹೊಸ ಅಲೆಗಳನ್ನು ಸೃಷ್ಟಿಸುವ ಹೋಟೆಲ್, ಬಾರ್ ಮಾಕ್ಸಿ ಒಳಗೊಂಡು ಹಲವಾರು ಆಕರ್ಷಕ ಎಫ್&ಬಿ ಸ್ಥಳಗಳನ್ನು ಹೊಂದಿದೆ.ಇದರ ಲಾಬಿ ಬಾರ್, ಹಗಲು ಡೈನಿಂಗ್ ಲಾಂಜ್ ಆಗಿ ಕಾರ್ಯನಿರ್ವಹಿಸಿ ರಾತ್ರಿ ಸೋಷಿಯಲ್ ಹಬ್ ಆಗಲಿದ್ದು, ಅತಿಥಿಗಳು ಮಾಕ್ಸಿಯ ಸಿಗ್ನೇಚರ್ ಸ್ಟೈಲ್“ಮೂಡ್ ಆಧಾರಿತ ಕಾಕ್‌ಟೈಲ್”ಗಳನ್ನು ಆನಂದಿಸಬಹುದು. ತ್ವರಿತ ಆಹಾರ ಬಯಸುವವರಿಗೆ, ಮಾಕ್ಸಿ , ಮಾಕ್ಸಿ ಕಿಚನ್&ಪಿಕಪ್ಸ್ ದಿನಪೂರ್ತಿ ಆಹಾರ ಮತ್ತು ಪಾನೀಯಗಳನ್ನು ಗ್ರ್ಯಾಬ್ ಮತ್ತು ಗೋ ಆಯ್ಕೆಗಳೊಂದಿಗೆ ನೀಡುತ್ತದೆ. ಲೇಓವರ್,ಆಕರ್ಷಕ ಪೂಲ್ ಬಾರ್ ಆಗಿದ್ದು, ಇದು ಗ್ರಾಫಿಟಿಗಳೊಂದಿಗೆ ತನ್ನದೇ ಆದ ಪರ್ಸನಲೈಸ್‌ಡ್ ಡಿಜೆ ಬೂತ್ ಹೊಂದಿದೆ.
ಸ್ಥಳೀಯ ಮತ್ತು ಹೊಸ ನಾವೀನ್ಯತೆಗಳನ್ನೊಳಗೊಂಡ ಎಫ್&ಬಿ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ, ಹೋಟೆಲ್ ಮಾಕ್ಸಿ ವಿವಿಧ ಆನ್-ಸೈಟ್ ಚಟುವಟಿಕೆಗಳನ್ನು ಸಹ ಒದಗಿಸುತ್ತದೆ. ನೆನಪಿನಲ್ಲಿಡುನ ಬೋರ್ಡ್ ಆಟಗಳು ಮತ್ತು ಡೈಸ್ ನೈಟ್ ಆಟಗಳು ಸಂಭಾಷಣೆಗಳನ್ನು ಆರಂಭಿಸಲು ಮತ್ತು ಬೆರೆಯಲು ಒಂದು ಮೋಜಿನ ಮಾರ್ಗವಾಗಿದೆ.ಜೊತೆಗೆ ವೀಕ್ಲಿ ಮೂವೀ ನೈಟ್ಸ್, ಡಂಕ್ ವೀಲ್ ಆಫ್ ಫಾರ್ಚೂನ್ ಮತ್ತು ಜೆಂಗಾ ವಾರ್ಸ್ ಅನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಆನಂದಿಸಬಹುದು.
ಮೀಟಿಂಗ್ ಮತ್ತು ಈವೆಂಟ್ ಗಳು
ಹೋಟೆಲ್ ಮೂರು ಸಭೆ ಮತ್ತು ಈವೆಂಟ್ ಕೊಠಡಿಗಳನ್ನು ಹೊಂದಿದೆ. ಅವುಗಳು ನೈಸರ್ಗಿಕ ಬೆಳಕನ್ನು ಪಡೆದಿದ್ದು, ಪ್ರೀ-ಫಂಕ್ಷನ್ ಏರಿಯಾ ಮತ್ತು 1000 ಚದರ ಮೀಟರ್ ನ ಹೊರಾಂಗಣ ಈವೆಂಟ್ ಸ್ಥಳವನ್ನು ಹೊಂದಿವೆ.ಜೊತೆಗೆ ಆಹಾರ ಟೇಕ್‌ಅವೇ ಆಯ್ಕೆಗಳನ್ನು ಹೊಂದಿದೆ.
“ಭಾರತದ ಹೈಟೆಕ್ ರಂಗದ ಮೂಲ ಕೇಂದ್ರವಾಗಿರುವ ಬೆಂಗಳೂರು21ನೇ ಶತಮಾನದ ಶಕ್ತಿಯುತ ಪರಂಪರೆ, ಕಲೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ಸಂಯೋಜನೆಯಾಗಿದೆ. ಬೆಂಗಳೂರಿನ ಯುವ, ಕ್ರಿಯಾತ್ಮಕ ಮತ್ತು ಸಾಹಸಮಯ ವಾತಾವರಣವು ಭಾರತದಲ್ಲಿ ಮಾಕ್ಸಿಯ ಪ್ರಭಾವಶಾಲಿ ಚೊಚ್ಚಲ ಆರಂಭಕ್ಕೆ ಪರಿಪೂರ್ಣ ಹಿನ್ನೆಲೆಯನ್ನು ಒದಗಿಸುತ್ತದೆ” ಎಂದು ಮಾಕ್ಸಿ ಬೆಂಗಳೂರು ಏರ್ ಪೋರ್ಟ್ ಪ್ರೆಸ್ಟೀಜ್ ಟೆಕ್ ಕ್ಲೌಡ್ ನ ಹೋಟೆಲ್ ಕ್ಯಾಪ್ಟನ್ ಅನುರಾಧ ವೆಂಕಟಾಚಲಂ ತಿಳಿಸಿದ್ದಾರೆ.
“ನಾವು ಇಲ್ಲಿ ಒಂದು ವಿಶಿಷ್ಟವಾದ ವಾತಾವರಣವನ್ನು ರಚಿಸಿದ್ದೇವೆ. ಇಲ್ಲಿ ಸೊಗಸಾದ, ಉತ್ಸಾಹಭರಿತ ಮತ್ತು ವೈವಿಧ್ಯಮಯ ವಿನ್ಯಾಸಗಳು ಇದ್ದು, ತಲ್ಲೀನಗೊಳಿಸುವ ಅನುಭವವನ್ನು ಒದಗಿಸುತ್ತವೆ.ಮಾಕ್ಸಿ ಹೋಟೆಲ್ಸ್ ಕೇವಲ ಒಂದು ಬ್ರಾಂಡ್‌ಗಿಂತ ಹೆಚ್ಚಿನದ್ದಾಗಿದೆ; ಇದು ಸಂಪೂರ್ಣ ಹೊಸ ಉತ್ಸಾಹತುಂಬಲಿದೆ, ಮತ್ತು ಭಾರತದಲ್ಲಿನ ಆತಿಥ್ಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಲು ಇಲ್ಲಿದ್ದೇವೆ ಎಂಬುದನ್ನು ನಾನು ನಂಬುತ್ತೇನೆ! ಮಾಕ್ಸಿ ಬೆಂಗಳೂರು ಏರ್ ಪೋರ್ಟ್ ಪ್ರೆಸ್ಟೀಜ್ ಕ್ಲೌಡ್ಗೆ ನಮ್ಮ ಅತಿಥಿಗಳನ್ನು ಸ್ವಾಗತಿಸಲು ನಾನು ಉತ್ಸುಕಳಾಗಿದ್ದೇನೆ, ಏಕೆಂದರೆ ನಾವು ಆತಿಥ್ಯದ ನವೀನತೆ ಮತ್ತು ಹೊಸ ರುಚಿಯನ್ನು ನೀಡುಸುತ್ತೇವೆ” ಎಂದೂ ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Bangalore Airport : ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಿಶ್ವದ ಅತಿ ಸುಂದರ ಏರ್‌ಪೋರ್ಟ್ ಗರಿ