ಬೆಂಗಳೂರು: ಮೊಹರಂ ಹಬ್ಬದ ಭಾಗವಾಗಿ ಮುಸ್ಲಿಮರು ಮೆರವಣಿಗೆ ನಡೆಸುವ ಹಿನ್ನೆಲೆಯಲ್ಲಿ ಆಗಸ್ಟ್ 9ರಂದು ಮಧ್ಯಾಹ್ನ 1 ರಿಂದ 3.30 ರವರೆಗೆ ನಗರದ ಕೆಲವು ರಸ್ತೆಗಳ ಸಂಚಾರ ಸ್ಥಗಿತಗೊಳಿಸಿದ್ದು, ಪರ್ಯಾಯ ವ್ಯವಸ್ಥೆಯನ್ನು ಸಂಚಾರ ಪೊಲೀಸರು ಕಲ್ಪಿಸಿದ್ದಾರೆ. ಹಬ್ಬದ ಮೆರವಣಿಗೆ ವೇಳೆ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇರುವುದರಿಂದ ಈ ಕೆಳಕಂಡ ಮಾರ್ಗಗಳಗೆ ಬದಲಿ ವ್ಯವಸ್ಥೆ ಮಾಡಲಾಗಿದೆ.
೧. ಬ್ರಿಗೇಡ್ ರಸ್ತೆ ಮುಖೇನ ಹೊಸೂರು ರಸ್ತೆ ಕಡೆಗೆ ಸಾಗುವ ವಾಹನ ಸವಾರರು ವೆಲ್ಲಾರ ಜಂಕ್ಷನ್ ಬಳಿ ಬಲತಿರುವು ಪಡೆದು ರಿಚ್ಮಂಡ್ ರಸ್ತೆ ಮುಖೇನ ಸಾಗಿ ರಿಚ್ಮಂಡ್ ಜಂಕ್ಷನ್ ಬಳಿ ಎಡತಿರುವು ಪಡೆದು ಕೆ.ಎಚ್ ರಸ್ತೆ ಮುಖಾಂತರ ಸಾಗಿ ಶಾಂತಿನಗರ ವೃತ್ತದ ಬಳಿ ಎಡ ತಿರುವು ಪಡೆದು ಲ್ಯಾಂಗ್ ಫೋರ್ಡ್ ರಸ್ತೆಯ ಮುಖಾಂತರ ಹೊಸೂರು ರಸ್ತೆ ಸಂಪರ್ಕಿಸುವುದು.
ಇದನ್ನೂ ಓದಿ | ಬೆಂಗಳೂರಿನಲ್ಲಿ ಮಂಗಗಳ ಕಾಟವೇ? ಕೂಡಲೇ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ!
2. ಇಂಡಿಯಾ ಗ್ಯಾರೇಜ್ ಕಡೆಯಿಂದ ಬರುವ ವಾಹನಗಳು ವೆಲ್ಲಾರ ಜಂಕ್ಷನ್‌ನಲ್ಲಿ ಎಡ ತಿರುವಿಗೆ ಬದಲಾಗಿ ನೇರವಾಗಿ ಚಲಿಸಿ ರಿಚ್ಮಂಡ್ ವೃತ್ತದಲ್ಲಿ ಎಡವಿರುವು ಪಡೆದು ಕೆ.ಎಚ್ ರಸ್ತೆ ಮುಖಾಂತರ ಸಾಗಿ ಶಾಂತಿನಗರ ವೃತ್ತದ ಬಳಿ ಎಡ ತಿರುವು ಪಡೆದು ಲ್ಯಾಂಗ್ ಫೋರ್ಡ್ ರಸ್ತೆಯ ಮುಖಾಂತರ ಹೊಸೂರು ರಸ್ತೆ ಸಂಪರ್ಕಿಸುವುದು.
3.ಹೊಸೂರು ರಸ್ತೆ ಅಡುಗೋಡಿ ಕಡೆಯಿಂದ ಬರುವಂತಹ ಸವಾರರು, ಸಿಮೆಂಟ್ರಿ ಕ್ರಾಸ್ ರಸ್ತೆಯ ಬಳಿ ಎಡ ತಿರುವು ಪಡೆದು ಬರ್ಲಿ ಸ್ಟೇಟ್ ಕ್ರಾಸ್ ರಸ್ತೆ ಮುಖೇನ ನಂದಪ್ಪ ವೃತ್ತ-ಬಾಲ್ಡ್‌ವಿನ್ ಬಾಲಕಿಯರ ಶಾಲೆ-ರಿಚ್ಮಂಡ್ ರಸ್ತೆಯ ಮುಖಾಂತರ ಸಾಗುವುದು.
4.ಹೊಸೂರು ರಸ್ತೆ ಕಡೆಯಿಂದ ಆಡುಗೋಡಿ ಮಾರ್ಗವಾಗಿ ಬರುವ ಭಾರೀ ವಾಹನ ಸವಾರರು, ಆಡುಗೋಡಿ ಜಂಕ್ಷನ್ ಬಳಿ ಎಡ ತಿರುವು ಪಡೆದು – ಮೈಕೋ ಜಂಕ್ಷನ್ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ಬಸ್ ನಿಲ್ದಾಣ -ಸಿದ್ದಯ್ಯ ರಸ್ತೆಯಲ್ಲಿ ಬಲ ತಿರುವು ಪಡೆದು ಮುಂದೆ ತೆರಳುವುದು. ಬನ್ನೇರುಘಟ್ಟ ಡೈರಿವೃತ್ತದ ಮಾರ್ಗವಾಗಿ ಬರುವ ಸವಾರರು ಸಹ ಇದೇ ಮಾರ್ಗದಲ್ಲಿ ಸಂಚರಿಸುವುದು.
5.ಶಾಂತಿನಗರ ಮಾರ್ಗವಾಗಿ ಸಂಚರಿಸುವ ವಾಹನಗಳು ಹೊಸೂರು ರಸ್ತೆಯಲ್ಲಿ ಸಿ.ಎಂ.ಪಿ.ಜಂಕ್ಷನ್‌ನಲ್ಲಿ ಎಡ ತಿರುವು ಪಡೆಯುವ ವಾಹನಗಳು ನಂಜಪ್ಪ ವೃತ್ತದಲ್ಲಿಯೇ ಎಡ ತಿರುವು ಪಡೆದು, ಆಫೀಸ್ ಬಾಲ್ಡ್‌ವಿನ್ ಬಾಲಕಿಯರ ಶಾಲೆ- ರಿಚ್ಮಂಡ್ ರಸ್ತೆಯ ಮುಖಾಂತರ ಸಾಗುವುದು.
ಇದನ್ನೂ ಓದಿ | ಹುಸಿ ಬಾಂಬ್ ಬೆದರಿಕೆ; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ