Site icon Vistara News

Music festival: ಬನಶಂಕರಿಯಲ್ಲಿ ಫೆ.18ರಂದು ಮೈಸೂರಿನ ಚಿನ್ನಾರಿ ಸಂಗೀತ

chinnari sangeeta

ಬೆಂಗಳೂರು: ವನಮಾಲ ಸೆಂಟರ್‌ ಫಾರ್‌ ಆರ್ಟ್‌ ಆ್ಯಂಡ್‌ ಕಲ್ಚರ್‌ ವತಿಯಿಂದ ವನಮಾಲ ಸಂಗೀತ ಮಹೋತ್ಸವದ (Music festival) ಭಾಗವಾಗಿ ಫೆ. 18ರಂದು ಬೆಳಗ್ಗೆ 10.15ಕ್ಕೆ ʼಮೈಸೂರಿನ ಚಿನ್ನಾರಿ ಸಂಗೀತʼ (Mysurina Chinnari sangeeta) ಕಾರ್ಯಕ್ರಮವನ್ನು ನಗರದ ಬನಶಂಕರಿ 2ನೇ ಹಂತದ ಬಿ.ವಿ.ಕಾರಂತ ರಸ್ತೆಯ ಸುಚಿತ್ರಾ ಸಿನಿಮಾ ಆ್ಯಂಡ್‌ ಕಲ್ಚರಲ್‌ ಅಕಾಡೆಮಿಯಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಕಾಶವಾಣಿಯ ನಿವೃತ್ತ ಸಹಾಯಕ ನಿರ್ದೇಶಕಿ ಎಸ್‌. ಸಾಯಿಲಕ್ಷ್ಮಿ, ಬ್ರಾಹ್ಮಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಸಂಸ್ಥಾಪಕ ಕಾರ್ಯದರ್ಶಿ ಡಾ.ಚನ್ನರಾಜು, ವಿದುಷಿ ಕಾಂಚನಾ ಎಸ್. ಶೃತಿರಂಜನಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ | Udupa Music Festival: ಬೆಂಗಳೂರಿನಲ್ಲಿ ಫೆ.16ರಿಂದ ಉಡುಪ ಸಂಗೀತೋತ್ಸವ; ವಿಶ್ವ ವಿಖ್ಯಾತ ಕಲಾವಿದರ ಸಂಗಮ

ಕಾರ್ಯಕ್ರಮವು ಡಾ.ಮೀರಾ ರಾಜಾರಾಮ್‌ ಪ್ರಾಣೇಶ್‌ ಅವರ ಪರಿಕಲ್ಪನೆಯಾಗಿದ್ದು, ಸೂತ್ರದಾರರು ಮೈಸೂರು ಮಹಾರಾಜರ ಕತೆಗಳನ್ನು ಹೇಳುತ್ತಾರೆ. ಅಪರೂಪದ ಕೋಲಾಟ ಮತ್ತು ಸುವ್ವಿ ಹಾಡುಗಳಿಗೆ ಮಕ್ಕಳು ನೃತ್ಯ ಪ್ರದರ್ಶಿಸಲಿದ್ದಾರೆ. ಮೈಸೂರು ಮಹಾರಾಜರು ಕಲೆ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಗಳನ್ನು ಮಕ್ಕಳಿಗೆ ಪರಿಚಯಿಸುವ ದೃಷ್ಟಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Exit mobile version