ಬೆಂಗಳೂರು: ಮಂಗಳವಾರ ಸಂಜೆ 5:33ರಿಂದ ಮೆಟ್ರೋ ಓಡಾಟದಲ್ಲಿ (Namma Metro) ವ್ಯತ್ಯಯ ಉಂಟಾಗಿದೆ. ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ದೋಷ ಉಂಟಾಗಿದೆ. ಈ ಕಾರಣಕ್ಕೆ ಹಸಿರು ಮಾರ್ಗದಲ್ಲಿ ಮೆಟ್ರೋ ರೈಲುಗಳು ನಾಗಸಂದ್ರ ಮತ್ತು ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣದ ನಡುವೆ ಮಾತ್ರ ಓಡುತ್ತಿವೆ.
ಬನಶಂಕರಿ, ಜಯಪ್ರಕಾಶ್ ನಗರ, ಯಲಚೇನಹಳ್ಳಿ ಹಾಗೂ ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ, ಸಿಲ್ಕ್ ಇನ್ಸ್ಟಿಟ್ಯೂಟ್ ಮಾರ್ಗದ ರೈಲುಗಳು ಓಡಾಟ ಸ್ಥಗಿತವಾಗಿದೆ. ಈ ಕುರಿತು ನಮ್ಮ ಮೆಟ್ರೋ ಅಧಿಕೃತ ಖಾತೆಯಲ್ಲಿ ತಿಳಿಸಿದೆ. ಇನ್ನೂ ಉಂಟಾದ ಅನಾನುಕೂಲತೆಗಾಗಿ ವಿಷಾದಿಸಿದೆ.
ದಿಢೀರ್ ರೈಲು ಓಡಾಟ ಸ್ಥಗಿತಗೊಂಡ ಕಾರಣದಿಂದಾಗಿ ಪ್ರಯಾಣಿಕರು ಪರದಾಡಬೇಕಾಯಿತು. ಅತಿ ಶೀಘ್ರದಲ್ಲೇ ವಿದ್ಯುತ್ ಸಮಸ್ಯೆಯನ್ನ ಬಗೆಹರಿಸೋದಾಗಿ ಬಿಎಂಆರ್‌ಸಿಎಲ್ ತಿಳಿಸಿದೆ.