Site icon Vistara News

Namma Metro : ಭಾನುವಾರ ನೇರಳೆ ಮಾರ್ಗದಲ್ಲಿ ಮೆಟ್ರೋ ಓಡಾಟದಲ್ಲಿ ವ್ಯತ್ಯಯ

Metro services disrupted on Purple Line on Sunday

ಬೆಂಗಳೂರು: ನಾಳೆ ಭಾನುವಾರ (ನ.5) ಮೆಟ್ರೋ ಮೂಲಕ ಎಂ.ಜಿ ರೋಡ್‌ ಕಡೆ ಹೋಗಿ ಬರೋಣಾ ಎಂದುಕೊಂಡರೆ ಪ್ಲ್ಯಾನ್‌ ಚೇಂಜ್‌ ಮಾಡಿ. ಯಾಕೆಂದರೆ ನ.5ರಂದು ಎಂ.ಜಿ ರಸ್ತೆಯಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ (Namma Metro) ನಡುವೆ ವಾಣಿಜ್ಯ ಸಂಚಾರ ಭಾಗಶಃ ಸ್ಥಗಿತಗೊಳ್ಳಲಿದೆ.

ಭಾನುವಾರದಂದು ನೇರಳೆ ಮಾರ್ಗದಲ್ಲಿ ಸ್ವಾಮಿ ವಿವೇಕಾನಂದ ರಸ್ತೆ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವೆ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಹೀಗಾಗಿ ಎಂ.ಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವಿನ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸೇವೆಗಳು ಇರುವುದಿಲ್ಲ.

ಎಂ.ಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಡುವಿನ ರೈಲು ಸೇವೆಗಳು ಬೆಳಗ್ಗೆ 7 ಗಂಟೆಗೆ ಬದಲಾಗಿ 9 ಗಂಟೆಗೆ ಪ್ರಾರಂಭವಾಗಲಿದೆ. ಚಲ್ಲಘಟ್ಟ ಮತ್ತು ಎಂ.ಜಿ.ರಸ್ತೆ, ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ), ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವಿನ ಮಾರ್ಗಗಳಲ್ಲಿ ರೈಲುಗಳ ಸೇವೆಯು ಬೆಳಗ್ಗೆ 7 ಗಂಟೆಗೆ ಆಯಾ ಟರ್ಮಿನಲ್ ನಿಲ್ದಾಣಗಳಿಂದ ವೇಳಾಪಟ್ಟಿಯ ಪ್ರಕಾರ ಸಂಚರಿಸಲಿದೆ ಎಂದು ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ:Karnataka Weather : ಮರೆಯಾದ ಸೂರ್ಯ; ಧರೆಗೆ ಅಪ್ಪಳಿಸುವನೇ ಮಳೆರಾಯ

ಸಿಲ್ಕ್‌ ಬೋರ್ಡ್‌ ಫ್ಲೈ ಓವರ್ 4 ತಿಂಗಳು ಬಂದ್‌; ಕಾರಣವೇನು?

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಿಂದ (ಬಿಎಂಆರ್‌ಸಿಎಲ್‌) ಮೆಟ್ರೋ ಮಾರ್ಗ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಅ.21ರಿಂದ ನಾಲ್ಕು ತಿಂಗಳವರೆಗೆ ನಗರದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ ಫ್ಲೈ ಓವರ್ (Silk Board Flyover) ಮಡಿವಾಳ ಬದಿ ಭಾಗಶಃ ಮುಚ್ಚಲಾಗಿದೆ.

ಈ ಬಗ್ಗೆ ಬಿಎಂಆರ್‌ಸಿಎಲ್ ಮಾಹಿತಿ ನೀಡಿದ್ದು, ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೇತುವೆ ಅಪ್ ಮತ್ತು ಡೌನ್ ರ‍್ಯಾಂಪ್ ಕ್ಯಾರೇಜ್ ವೇ (ಮಡಿವಾಳ ಬದಿ) ಲೂಪ್‌ಗಳು ಮತ್ತು ರ‍್ಯಾಂಪ್ ಫ್ಲೈ ಓವರ್ ಸ್ಟೇಜಿಂಗ್ ಕಾಮಗಾರಿ ಕೈಗೊಳ್ಳಲು ತಾತ್ಕಾಲಿಕವಾಗಿ ಅ. 21ರಿಂದ 4 ತಿಂಗಳುಗಳವರೆಗೆ (ಎರಡೂ ಗ್ಯಾರೇಜ್ ಮಾರ್ಗಗಳಲ್ಲಿ 2.50 ಮೀಟರ್) ಭಾಗಶಃ ಬ್ಯಾರಿಕೇಡ್ ಮಾಡಲಾಗುವುದು. ಇದರಿಂದಾಗುವ ಅನಾನುಕೂಲತೆಗೆ ವಿಷಾದಿಸುತ್ತೇವೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದೆ.

ಮುಂಬೈ ಲೋಕಲ್‌ ಟ್ರೈನ್‌ನಂತಾಯ್ತು ನಮ್ಮ ಮೆಟ್ರೋ; ಹತ್ತಕ್ಕಾಗಲ್ಲ, ಇಳಿಯೋಕ್ಕಾಗಲ್ಲ!

ಬೆಂಗಳೂರು: ಮುಂಜಾನೆ, ಮುಸ್ಸಂಜೆ ವೇಳೆ ನಮ್ಮ ಮೆಟ್ರೋ ರೈಲಿನಲ್ಲಿ ಕಾಲಿಡಲು ಆಗದಷ್ಟು ಜನಸಂದಣಿ ಹೆಚ್ಚಾಗಿದೆ. ನಮ್ಮ ಮೆಟ್ರೋ ವಿಸ್ತೃತ ನೇರಳೆ ಮಾರ್ಗ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೆ ವಿಸ್ತರಿತಗೊಂಡಿದ್ದೆ ತಡ ರೈಲಿನಲ್ಲಿ ಜನರು ತುಂಬಿ (Namma Metro) ತುಳುಕುತ್ತಿರುತ್ತಾರೆ. ಸದ್ಯ ಬೆಂಗಳೂರು ನಮ್ಮ ಮೆಟ್ರೋ ರೈಲು ಮುಂಬೈ ಲೋಕಲ್‌ ಟ್ರೈನ್‌ ರೀತಿ ಆಗಿದೆ ಎಂದು ವಿಡಿಯೊವೊಂದನ್ನು ಹಾಕಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ರಾಜಧಾನಿ ಬೆಂಗಳೂರಲ್ಲಿ ಬಿಎಂಟಿಸಿಯಷ್ಟೇ (Bmtc bus) ಮೆಟ್ರೋ ರೈಲು (Metro rail) ಕೂಡ ಜನರ ಜೀವನಾಡಿಯಾಗಿದೆ. ಟ್ರಾಫಿಕ್‌ ಕಿರಿಕಿರಿಗೆ (Bengaluru Traffic) ಬಹುತೇಕ ದೂರ ಪ್ರಯಾಣ ಮಾಡುವ ಮಂದಿ ಮೆಟ್ರೋ (Bengaluru Metro) ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. ಈಗಾಗಲೇ ಸಂಚಾರ ನಡೆಸುತ್ತಿರುವ ನಮ್ಮ ಮೆಟ್ರೋ (Namma Metro) ವಿಸ್ತೃತ ಮಾರ್ಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಅಧಿಕೃತವಾಗಿ ಉದ್ಘಾಟಿಸಿದ್ದಾರೆ.

Nam Metro Rush

ಇದನ್ನೂ ಓದಿ: Assault Case : ರಕ್ತ ಚಿಮ್ಮುವಂತೆ ಗುಂಪುಗಳ ನಡುವೆ ಹೊಡೆದಾಟ ಬಡಿದಾಟ!

ವೈಟ್‌ಫೀಲ್ಡ್‌ನಲ್ಲಿರುವ ನೂರಾರು ಐಟಿ ಕಂಪನಿಗಳ ಉದ್ಯೋಗಿಗಳು ರಾಜಧಾನಿಯ ಬೇರೆಬೇರೆಡೆಯಿಂದ ಮೆಟ್ರೋ ಮೂಲಕ ಆಗಮಿಸಲು ನೇರಳೆ ಮಾರ್ಗ ಅವಕಾಶ ಕಲ್ಪಿಸಿಕೊಟ್ಟಿದೆ. ಹಾಗೆಯೇ ಚಲ್ಲಘಟ್ಟ ಸಮೀಪವೇ ಇರುವ ಆರ್‌ಆರ್‌ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವಿಧ್ಯಾರ್ಥಿಗಳು, ಸಿಬ್ಬಂದಿ, ರೋಗಿಗಳಿಗೂ ಇದರಿಂದ ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ವಿಸ್ತೃತ ಮಾರ್ಗದಿಂದಾಗಿ ಐಟಿ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚಿನ ಸಂತಸವಾಗಿದೆ.

ಮುಂಜಾನೆಯದ್ದು ನಮ್ಮ ಮೆಟ್ರೋ ರೈಲಿನೊಳಗೆ ಹೋಗಲು ಸಾಧ್ಯವಾಗದಷ್ಟು ಜನರಿಂದ ಕಿಕ್ಕಿರಿದ ದಟ್ಟಣೆಯನ್ನು ಮುಂಬೈ ಲೋಕಲ್‌ ರೈಲುಗಳಿಗೆ ಹೋಲಿಸಿದ್ದಾರೆ. ಬೆಂಗಳೂರು ಮತ್ತೊಂದು ಮುಂಬೈ ರೀತಿ ಆಗುತ್ತಿದೆ ಎಂದು ವರ್ಣಿಸಿದ್ದಾರೆ. ಇದರೊಂದಿಗೆ ಮೆಟ್ರೋದಲ್ಲಿ ಪ್ರಯಾಣಿಕರಿಂದ ಪ್ಯಾಕ್‌ ಆಗಿದ್ದರೂ ಬೆಂಗಳೂರಲ್ಲಿ ಟ್ರಾಫಿಕ್‌ ಸಮಸ್ಯೆ ಮಾತ್ರ ಕಡಿಮೆ ಆಗಿಲ್ಲ ಎಂದು ಕಾಮೆಂಟ್‌ ಮಾಡಿದ್ದಾರೆ. ಕೆಲವರು ನಮ್ಮ ಮೆಟ್ರೋ ರೈಲನ್ನು ಮುಂಬೈ Pro ಎಂದಿದ್ದಾರೆ.

ಜನರು ಇಷ್ಟು ನೂಕುನುಗ್ಗಲಿನಲ್ಲೇ ಪ್ರಯಾಣಿಸುವಾಗ ನಮ್ಮ ಮೆಟ್ರೋ ಅಧಿಕಾರಿಗಳು ಹೆಚ್ಚುವರಿ ರೈಲುಗಳನ್ನು ಬಿಡುವಂತೆಯು ಒತ್ತಾಯ ಕೇಳಿ ಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version