Site icon Vistara News

Namma Metro: ಅಡಚಡಣೆಗಾಗಿ ಕ್ಷಮಿಸಿ; ಮೆಟ್ರೋ ಕಾಮಗಾರಿಗಾಗಿ ಈ ರೂಟ್‌ನಲ್ಲಿ 1 ವರ್ಷ ವಾಹನ ಓಡಾಟವಿಲ್ಲ

Namma Metro

ಬೆಂಗಳೂರು: ಲಕ್ಕಸಂದ್ರ ಸುರಂಗ ಮೆಟ್ರೋ ನಿಲ್ದಾಣದ ದಕ್ಷಿಣ ಭಾಗದ ಪ್ರವೇಶ ಕಾಮಗಾರಿಯನ್ನು ನಮ್ಮ ಮೆಟ್ರೋ (Namma Metro) ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಉತ್ತರ ದಿಕ್ಕಿನ ಪಥವನ್ನು ಮೈಕೋ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ವರೆಗೆ ಸಂಚಾರ ನಿರ್ಬಂಧ (Traffic restrictions) ಮಾಡಲಾಗುತ್ತಿದೆ. ಏಪ್ರಿಲ್‌ 1 ರಿಂದ ಒಂದು ವರ್ಷದ ಅವಧಿಗೆ ಮುಚ್ಚಲಾಗುತ್ತದೆ. ಈ ಬಗ್ಗೆ ಬಿಎಂಆರ್‌ಸಿಎಲ್‌ ಪ್ರಕಟಣೆ (BMRTC) ಹೊರಡಿಸಿದೆ.

ಕಾಮಗಾರಿ ನಿರ್ಮಾಣಕ್ಕೆ ಅನುಕೂಲವಾಗುವಂತೆ ಸಂಚಾರ ನಿರ್ಬಂಧವಾಗಿರುವ ಕಾರಣಕ್ಕೆ ಪರ್ಯಾಯ ಮಾರ್ಗ ಬಳಸುವಂತೆ ಬಿಎಂಆರ್‌ಸಿಎಲ್‌ ವಿನಂತಿ ಮಾಡಿದೆ. ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಡೈರಿ ಸರ್ಕಲ್‌ ಕಡೆಯಿಂದ ಚಲಿಸುವ ವಾಹನಗಳು ಆನೆಪಾಳ್ಯ ಜಂಕ್ಷನ್‌ ಕಡೆಗೆ ಹೋಗಬೇಕಾದರೆ ಮೈಕೋ ಸಿಗ್ನಲ್‌ನಲ್ಲಿ ಬಲಕ್ಕೆ ತಿರುಗಿ ಭೋಷ್‌ ಲಿಂಕ್‌ ರಸ್ತೆಯ ಮೂಲಕ ಆಡುಗೋಡಿ ಸಿಗ್ನಲ್‌ ತಲುಪಿ ಎಡಕ್ಕೆ ತಿರುಗಿಕೊಳ್ಳಬೇಕು.

ಆನೆಪಾಳ್ಯ ಜಂಕ್ಷನ್‌ನಿಂದ ಡೈರಿ ಸರ್ಕಲ್ ಕಡೆಗೆ ಚಲಿಸುವ ವಾಹನ ಸಂಚಾರದಲ್ಲಿ ಯಾವುದೆ ವ್ಯತ್ಯಯವಿರುವುದಿಲ್ಲ. ಡೈರಿ ಸರ್ಕಲ್‌ನಿಂದ ಶಾಂತಿನಗರ ಕಡೆಗೆ ಚಲಿಸುವ ವಾಹನಗಳು ವಿಲ್ಸನ್‌ ಗಾರ್ಡನ್‌ನ 7ನೇ ಮುಖ್ಯ ರಸ್ತೆಯಲ್ಲಿ ಎಡಕ್ಕೆ ತಿರುವು ತೆಗೆದುಕೊಳ್ಳಬೇಕು.

ಇದನ್ನೂ ಓದಿ: Acid Attack : ಆಸ್ತಿ ವಿಚಾರಕ್ಕೆ ಯುವಕನಿಗೆ ಆ್ಯಸಿಡ್‌ ಎರಚಿದ ಸಂಬಂಧಿಕರು; ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಫೈಟಿಂಗ್‌

Namma Metro : ನಮ್ಮ ಮೆಟ್ರೋ 3ನೇ ಹಂತಕ್ಕೆ ಸಂಪುಟ ಒಪ್ಪಿಗೆ; ಜೆ.ಪಿ. ನಗರದಿಂದ ಹೆಬ್ಬಾಳಕ್ಕೆ ನೇರ ಸಂಪರ್ಕ

ಬೆಂಗಳೂರು: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ‌, ಟ್ರಾಫಿಕ್‌ ಸಂಕಷ್ಟಗಳಿಗೆ ಪರಿಹಾರ ರೂಪವಾಗಿ ಬಂದಿರುವ ನಮ್ಮ ಮೆಟ್ರೋದ (Namma Metro) ಮೂರನೇ ಹಂತದ (Namma Metro Third Phase) ಯೋಜನೆಯ ಕಾಮಗಾರಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ (Cabinet Meeting) ನೀಡಿದೆ. ಬೆಂಗಳೂರಿನ ಜೆ.ಪಿ. ನಗರದಿಂದ ಹೆಬ್ಬಾಳವನ್ನು (JP Nagar to Hebbala) ಸಂಪರ್ಕಿಸುವ ಸುಮಾರು 44 ಕಿ.ಮೀ. ಉದ್ದದ ಹೊರ ವರ್ತುಲ ಮೆಟ್ರೋ ರಿಂಗ್‌ ರೋಡ್‌ ಇದಾಗಿದೆ. ಈ ಯೋಜನೆಯನ್ನು ಸುಮಾರು 15,611 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಮೆಟ್ರೋ ಮೂರನೇ ಹಂತ ಹಲವು ಪ್ರಮುಖ ಭಾಗಗಳನ್ನು ಸಂಪರ್ಕಿಸುತ್ತದೆ. ಹೆಬ್ಬಾಳ – ಗೊರುಗುಂಟೆಪಾಳ್ಯ-ಕನಕಪುರ ರಸ್ತೆ – ಜೆಪಿ ನಗರ ಮೆಟ್ರೋ ನಿಲ್ದಾಣಗಳು ಇದರಲ್ಲಿ ಬರಲಿವೆ. ಇದಕ್ಕೆ ಬೇಕಾಗುವ ಖರ್ಚಿನ ಮೊತ್ತದಲ್ಲಿ ಶೇ. 15-16 ಭಾಗವನ್ನು ಕೇಂದ್ರ ಸರ್ಕಾರ ನೀಡುತ್ತದೆ. ಉಳಿದ ಶೇ. 85 ಭಾಗವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಸಂಪುಟ ಸಭೆಯ ಬಳಿಕ ವಿವರ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಏನಿದು ಮೆಟ್ರೋ ಮೂರನೇ ಹಂತದ ಯೋಜನೆ, ಯಾವ್ಯಾಗ ಭಾಗವನ್ನು ಸಂಪರ್ಕಿಸುತ್ತದೆ

ಮೆಟ್ರೋ ಮೂರನೇ ಹಂತ ಒಟ್ಟು 81 ಕಿಮೀ. ಉದ್ದದ ಮೂರು ಕಾರಿಡಾರ್‌ಗಳನ್ನು ಒಳಗೊಂಡ ಯೋಜನೆಯಾಗಿದೆ.
ಕಾರಿಡಾರ್‌ – 1 : ಜೆ.ಪಿ. ನಗರ 4ನೇ ಹಂತದಿಂದ ಕೆಂಪಾಪುರವರೆಗಿನ 32.15 ಕಿ.ಮೀ.: 22 ನಿಲ್ದಾಣಗಳು
ಕಾರಿಡಾರ್‌ – 2: ಹೊಸ ಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೆ 12 ಕಿ.ಮೀ.: 9 ನಿಲ್ದಾಣಗಳು
ಕಾರಿಡಾರ್‌ – 3: ಸರ್ಜಾಪುರದಿಂದ ಹೆಬ್ಬಾಳವರೆಗೆ 37 ಕಿ. ಮೀ. ಅಂತರ ಹೊಂದಿದೆ.

ರಾಜ್ಯ ಸಚಿವ ಸಂಪುಟವು ಸದ್ಯಕ್ಕೆ ಮೊದಲ ಎರಡು ಕಾರಿಡಾರ್‌ಗಳಿಗೆ ಅನುಮತಿಯನ್ನು ನೀಡಿದೆ.

ಉದ್ದೇಶಿತ ಕಾರಿಡಾರ್‌ – 1ರ ಅಡಿ ಜೆ.ಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ 32.15 ಕಿ. ಮೀ. ಮಾರ್ಗದಲ್ಲಿ 22 ನಿಲ್ದಾಣಗಳು ಬರಲಿವೆ ಮತ್ತು ಕಾರಿಡಾರ್‌ – 2ರಲ್ಲಿ ಹೊಸ ಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೂ 12. ಕಿ. ಮೀ. ಮಾರ್ಗದಲ್ಲಿ 9 ನಿಲ್ದಾಣಗಳು ಬರಲಿವೆ. ಈ ಯೋಜನೆ ಉಪ ನಗರ ರೈಲು, ಬಸ್‌ ಡಿಪೋಗಳೂ ಸೇರಿದಂತೆ 9 ಕಡೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಸುಮನ ಹಳ್ಳಿ ಜಂಕ್ಷನ್‌ ಇಂಟರ್‌ಚೇಂಜ್‌ ನಿಲ್ದಾಣವಾಗಿ ಕಾರ್ಯ ನಿರ್ವಹಿಸಲಿದೆ.

ಹೆಬ್ಬಾಳದಲ್ಲಿ ಕೊನೆಗೊಳ್ಳುವ ಕಾರಿಡಾರ್‌ – 1 ಏರ್‌ಪೋರ್ಟ್‌ ಲೈನ್‌ನ (ನೀಲಿ ಮಾರ್ಗ) ಹಂತ – 2 ಮಾರ್ಗದೊಂದಿಗೆ ಸಂಪರ್ಕ ಬೆಸೆಯಲಿದೆ. ಇದು ಕೆ. ಆರ್‌. ಪುರದಿಂದ ಹೆಬ್ಬಾಳ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗಲಿದೆ. ಜೆ. ಪಿ. ನಗರದ ನಿಲ್ದಾಣವು ಹಸಿರು ಮಾರ್ಗದ ಜೆ. ಪಿ. ನಗರ ನಿಲ್ದಾಣ, ಕಾಮಾಕ್ಯ ಮೆಟ್ರೋ ನಿಲ್ದಾಣ ಹಾಗೂ ನೇರಳೆ ಮಾರ್ಗದ ಮೈಸೂರು ರಸ್ತೆ ನಿಲ್ದಾಣ, ಸುಮನಹಳ್ಳಿ ಕ್ರಾಸ್‌ ಎರಡೂ ಹೊಸ ಕಾರಿಡಾರ್‌ಗಳಿಗೆ ಸಂಪರ್ಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ : Namma Metro : ಹಳಿಯಲ್ಲಿ ಯುವಕನ ಹುಚ್ಚಾಟ; 27 ನಿಮಿಷ ಮೆಟ್ರೋ ಸಂಚಾರ ಸ್ಥಗಿತ

ಕಾರಿಡಾರ್‌ ಒಂದರಲ್ಲಿ ಬರುವ ನಿಲ್ದಾಣಗಳು ಇವು

ಜೆ.ಪಿ. ನಗರ-ಹೆಬ್ಬಾಳ ಮಾರ್ಗ: ಜೆ.ಪಿ. ನಗರ 4ನೇ ಹಂತ, ಜೆ.ಪಿ ನಗರ 5ನೇ ಹಂತ, ಜೆ.ಪಿ ನಗರ, ಕದಿರೇನ ಹಳ್ಳಿ, ಕಾಮಾಕ್ಯ ಬಸ್‌ ನಿಲ್ದಾಣ, ಹೊಸಕೆರೆ ಹಳ್ಳಿ ಕ್ರಾಸ್‌, ಪಿಇಎಸ್‌ ಕಾಲೇಜು, ಮೈಸೂರು ರಸ್ತೆ ನಾಗರಬಾವಿ ವೃತ್ತ, ವಿನಾಯಕ ಲೇಔಟ್‌, ಅಂಬೇಡ್ಕರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌, ಬಿಡಿಎ ಕಾಂಪ್ಲೆಕ್ಸ್‌, ಸುಮನಹಳ್ಳಿ ಕ್ರಾಸ್‌, ಚೌಡೇಶ್ವರಿ ನಗರ, ಫ್ರೀಡಂ ಫೈಟರ್‌ ಕ್ರಾಸ್‌, ಕಂಠೀರವ ಸ್ಟೇಡಿಯಂ, ಪೀಣ್ಯ, ಬಾಹುಬಲಿ ನಗರ, ಬಿಇಎಲ್‌ ವೃತ್ತ, ಪಟೇಲಪ್ಪ ಲೇಔಟ್‌, ಹೆಬ್ಬಾಳ, ಕೆಂಪಾಪುರ

ಕಾರಿಡಾರ್‌ -2ರಲ್ಲಿ ಬರುವ ಮೆಟ್ರೋ ನಿಲ್ದಾಣಗಳು ಇವು

ಹೊಸಹಳ್ಳಿ-ಕಡಬಗೆರೆ ಮಾರ್ಗ: ಹೊಸ ಹಳ್ಳಿ, ಕೆಎಚ್‌ಬಿ ಕಾಲೋನಿ, ವಿನಾಯಕ ನಗರ, ಸುಮನ ಹಳ್ಳಿ ಕ್ರಾಸ್‌, ಸುಂಕದ ಕಟ್ಟೆ, ಹೇರೋ ಹಳ್ಳಿ, ಬ್ಯಾಡರ ಹಳ್ಳಿ, ಫಾರೆಸ್ಟ್‌ ಗೇಟ್‌, ಕಡಬಗೆರೆ

ಕಾರಿಡಾರ್‌ -3ರಲ್ಲಿ ಬರುವ ಮೆಟ್ರೋ ನಿಲ್ದಾಣಗಳು

ಸರ್ಜಾಪುರದಿಂದ ಹೆಬ್ಬಾಳವರೆಗಿನ ಈ ಮೆಟ್ರೋ ಮಾರ್ಗವು 37 ಕಿ.ಮೀ. ಅಂತರ ಹೊಂದಿದೆ. ಇದರಲ್ಲಿ 18.60 ಎತ್ತರಿಸಿದ ಮಾರ್ಗವಾದರೆ, 16.80 ಕಿ. ಮೀ. ಭೂಗತ ಮಾರ್ಗವನ್ನು ಹೊಂದಿದೆ. ಈ ಯೋಜನೆಗೆ ಒಟ್ಟು 15 ಸಾವಿರ ಕೋಟಿ ಅಂದಾಜು ಮೊತ್ತ ನಿಗದಿಪಡಿಸಲಾಗಿದೆ. ಇದು ಈ ಸಂಪುಟ ಒಪ್ಪಿಗೆ ನೀಡಿದ ಯೋಜನೆಯಲ್ಲಿ ಸೇರಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ‌

Exit mobile version