ಬೆಂಗಳೂರು: ನೀವು ಮೆಟ್ರೋ ಪ್ರಯಾಣಿಕರಾಗಿದ್ದರೆ (Metro commuters), ಭಾನುವಾರವಾಗಿರುವುದರಿಂದ ಕೆಂಗೇರಿ ಕಡೆಗೋ ಬೈಯಪ್ಪನಹಳ್ಳಿ ಕಡೆಗೋ ಕುಟುಂಬ ಸಮೇತ ಮೆಟ್ರೋದಲ್ಲಿ ಹೋಗೋಣ ಎಂದು ಪ್ಲ್ಯಾನ್ ಮಾಡಿದ್ದರೆ ಮೊದಲು ಈ ವರದಿಯನ್ನು ಗಮನಿಸಿಕೊಳ್ಳಿ. ಆಗಸ್ಟ್ 27ರ ಭಾನುವಾರ ನಮ್ಮ ಮೆಟ್ರೋ ಸಂಚಾರದಲ್ಲಿ (Namma Metro) ಸಂಚಾರದಲ್ಲಿ ಮಹತ್ತರ ಬದಲಾವಣೆ ಆಗಿದೆ. ಕೆಲವು ಮೆಟ್ರೋ ಮಾರ್ಗಗಳಲ್ಲಿ (Metro operation) ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ರೈಲು ಸಂಚಾರ ಇರುವುದಿಲ್ಲ. ಹಾಗಿದ್ದರೆ ಯಾವ ಮಾರ್ಗದಲ್ಲಿ ಇರುವುದಿರಲ್ಲ ಎನ್ನುವುದನ್ನು ಇಲ್ಲಿ ನೋಡಿ.
ರೈಲು ಸೇವೆ ವ್ಯತ್ಯಯ ಆಗುವ ಮಾರ್ಗಗಳು ಯಾವುವು?
ಆಗಸ್ಟ್ 27ರಂದು ಈ ಕೆಲವು ಮಾರ್ಗಗಳ ಮೆಟ್ರೋ ನಿಲ್ದಾಣಗಳ ಮಧ್ಯೆ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ರೈಲು ಸೇವೆಗಳು ಲಭ್ಯವಿರುವುದಿಲ್ಲ ಎನ್ನುವುದು ಮೆಟ್ರೋ ಪ್ರಕಟಣೆ.
- ಮೈಸೂರು ರಸ್ತೆ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳ ಮಧ್ಯೆ ಸೇವೆ ಅಲಭ್ಯ.
- ಬೈಯಪ್ಪನಹಳ್ಳಿ ಮತ್ತು ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಸೇವೆ ಇರುವುದಿಲ್ಲ.
- ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಕೃಷ್ಣರಾಜಪುರ ಮೆಟ್ರೋ ನಿಲ್ದಾಣಗಳ ಮಧ್ಯೆ ರೈಲು ಸೇವೆ ವತ್ಯಯಗೊಳ್ಳಲಿದೆ.
ಯಾಕೆ ಈ ಸಂಚಾರ ವ್ಯತ್ಯಯ?
- ಎಲ್ಲರಿಗೂ ತಿಳಿದಿರುವಂತೆ ನೇರಳೆ ಮಾರ್ಗದ ವಿಸ್ತರಣೆ ಕಾರ್ಯ ನಡೆದಿದೆ. ಕೆಂಗೇರಿಯಿಂದ ಚೆಲ್ಲಘಟ್ಟವರೆಗೆ ಬೈಯಪ್ಪನಹಳ್ಳಿಯಿಂದ ಕೆಆರ್‌ಪುರವನ್ನು ಜೋಡಿಸುವ ಕೆಲಸ ಅಂತಿಮ ಹಂತದಲ್ಲಿದೆ. ಹೀಗಾಗಿ ಇಲ್ಲಿ ರೈಲು ಸುರಕ್ಷತಾ ಮತ್ತು ಪರೀಕ್ಷೆಗಳು ನಡೆಯಬೇಕಾಗಿದೆ. ಈ ಕಾರಣಕ್ಕಾಗಿ ಈ ಮಾರ್ಗದಲ್ಲಿ ಆಗಸ್ಟ್ 27ರಂದು ಭಾನುವಾರ ಬೆಳಗ್ಗೆ ಮೆಟ್ರೋ ಸಂಚಾರ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿದೆ.
- ನೇರಳೆ ಮಾರ್ಗದ ಕೆ.ಆರ್.ಪುರದಿಂದ ಬೈಯಪ್ಪನಹಳ್ಳಿ ಹಾಗೂ ಕೆಂಗೇರಿಯಿಂದ ಚಲ್ಲಘಟ್ಟ, ಮಟ್ರೋ ನಿಲ್ದಾಣಗಳ ನಡುವೆ ವಿಸ್ತರಣೆ ಮಾರ್ಗಗಳನ್ನು ಕಾರ್ಯಗತಗೊಳಿಸಲಿದ್ದೇವೆ. ಈ ಸಂಬಂಧ ಅನುಕೂಲವಾಗುವಂತೆ ಇದೇ ಭಾನುವಾರ ವಿವರವಾದ ಸುರಕ್ಷತಾ, ಪರೀಕ್ಷೆಗಳನ್ನು ಕೈಗೊಳ್ಳಲೂ ಹೆಚ್ಚಿನ ಸಮಯದ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ರೈಲು ಸೇವೆಗಳನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಗಮನಿಸಿ, ಈ ನಿಲ್ದಾಣಗಳ ಮಧ್ಯೆ ರೈಲು ಸಂಚಾರ ಇರುತ್ತದೆ
- ಭಾನುವಾರ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ, ನೇರಳೆ ಮಾರ್ಗದ ಸ್ವಾಮಿ ವಿವೇಕಾನಂದ ರಸ್ತೆ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ರೈಲು ಸೇವೆಗಳು ಲಭ್ಯವಿರುತ್ತದೆ. ಇವುಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
- ಮಧ್ಯಾಹ್ನ 1 ಗಂಟೆಯ ನಂತರ, ಬೈಯಪ್ಪನಹಳ್ಳಿಯಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗೆ ಮತ್ತು ಕೃಷ್ಣರಾಜಪುರದಿಂದ, ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣದವರೆಗೆ ಎಂದಿನಂತೆ ರಾತ್ರಿ 11.00 ಗಂಟೆಯವರೆಗೆ ಮೆಟ್ರೊ ಸಂಚಾರ ಸೇವೆ (ವಾಣಿಜ್ಯ ಸೇವೆ) ಲಭ್ಯವಿರುತ್ತದೆ.
ರೇಷ್ಮೆ ಸಂಸ್ಥೆಯಿಂದ ನಾಗಸಂದ್ರದವರೆಗೆ ಓಡಾಡುವ ಹಸಿರು ಮಾರ್ಗದಲ್ಲಿ ಸಂಚಾರ ಬದಲಾವಣೆ ಇರುವುದಿಲ್ಲ
ಇದನ್ನೂ ಓದಿ: Namma Metro : ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆಗೆ ನಮ್ಮ ಮೆಟ್ರೋ ವಿಸ್ತರಣೆ?
ಇನ್ನೊಂದು ಮಹತ್ವದ ಮಾಹಿತಿ ಏನೆಂದರೆ ಆಗಸ್ಟ್ 29ರಂದು ಮಂಗಳವಾರ ಬೈಯಪ್ಪನಹಳ್ಳಿ ಟರ್ಮಿನಲ್ ಮತ್ತು ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣ, ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ಮಾರ್ಗಗಳ ನಡುವೆ ಬೆಳಗ್ಗೆ 7 ಗಂಟೆವರೆಗೆ ಯಾವುದೇ ರೈಲು ಸೇವೆ ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋನಿಲ್ದಾಣದಿಂದ ಮಾತ್ರ ರೈಲು ಸೇವೆ ಲಭ್ಯವಿರುತ್ತದೆ.