Site icon Vistara News

National Horticulture Fair 2024: ಹೆಸರಘಟ್ಟದಲ್ಲಿ ಮಾ. 5 ರಿಂದ 7 ರವರೆಗೆ ರಾಷ್ಟ್ರೀಯ ತೋಟಗಾರಿಕೆ ಮೇಳ

National Horticulture Fair

ಬೆಂಗಳೂರು: ನಗರದ ಹೊರವಲಯದ ಹೆಸರಘಟ್ಟದ ಐಸಿಎಆರ್‌-ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (Indian Institute of Horticultural Research) ಆವರಣದಲ್ಲಿ ಮಾರ್ಚ್‌ 5 ರಿಂದ 7 ರವರೆಗೆ ʼರಾಷ್ಟ್ರೀಯ ತೋಟಗಾರಿಕೆ ಮೇಳ-2024ʼ (National Horticulture Fair 2024) ಆಯೋಜಿಸಲಾಗಿದೆ. “ಸುಸ್ಥಿರ ಅಭಿವೃದ್ಧಿಗಾಗಿ ನವೀನ ಪೀಳಿಗೆಯ ತೋಟಗಾರಿಕೆ ತಂತ್ರಜ್ಞಾನಗಳು” ಎಂಬುವುದು ಈ ಬಾರಿಯ ಮೇಳದ (NHF 2024) ಧ್ಯೇಯವಾಕ್ಯವಾಗಿದೆ.

ಬೆಂಗಳೂರಿನ ಸೊಸೈಟಿ ಫಾರ್‌ ಹಾರ್ಟಿ ಕಲ್ಚರ್‌, ಬೆಸ್ಟ್‌ ಹಾರ್ಟ್‌ ತಂತ್ರಜ್ಞಾನ ವ್ಯಾಪಾರ ಇನ್ಕ್ಯುಬೇಟರ್‌, ಐಸಿಎಆರ್‌-ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆ (ATARI), ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ತೋಟಗಾರಿಕೆ ಮೇಳ ಹಮ್ಮಿಕೊಳ್ಳಲಾಗಿದ್ದು, ವಿಸ್ತಾರ ನ್ಯೂಸ್‌ ಮಾಧ್ಯಮ ಸಹಯೋಗ ನೀಡಿದೆ.

ಮೇಳದಲ್ಲಿ ತೋಟಗಾರಿಕೆಯ ಹೊಸ ತಂತ್ರಜ್ಞಾನಗಳ ಕುರಿತ ವಸ್ತು ಪ್ರದರ್ಶನ, ಕಾರ್ಯಾಗಾರ ಹಾಗೂ ಸಮ್ಮೇಳನಗಳು ನಡೆಯಲಿವೆ. ಹೊಸ ಆವಿಷ್ಕಾರಗಳಾದ ಸ್ಮಾರ್ಟ್‌ ನೀರಾವರಿ, ನಿಯಂತ್ರಿತ ಪರಿಸರ ಕೃಷಿ, ಲಂಬವನ ಕೃಷಿ, ಸಂಪನ್ಮೂಲಗಳ ಸರಿಯಾದ ಬಳಕೆ, ಪರಿಸರದ ಪ್ರಭಾವದ ಏರುಪೇರುಗಳ ನಡುವೆ ಹೆಚ್ಚು ಇಳುವರಿ ಪಡೆಯುವುದು ಸೇರಿ ವಿವಿಧ ರೀತಿಯ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುತ್ತದೆ.

ಇದನ್ನೂ ಓದಿ | ಫೆ.27, 28ರಂದು ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ; ನೌಕರರ ಸಮ್ಮೇಳನದ ಹಿನ್ನೆಲೆ ಮಂಜೂರು

ಹೊಸತೇನಿದೆ?

ಸಸ್ಯ ಆರೋಗ್ಯ ಕ್ಲಿನಿಕ್‌, ಸ್ಪಾನ್‌ ಇನ್ಕ್ಯುಬೇಶನ್‌ ಮತ್ತು ಸಾಮರ್ಥ್ಯ ಅಭಿವೃದ್ಧಿ ಕೇಂದ್ರ, ಐಐಎಚ್‌ಆರ್‌ ಹಣ್ಣಿನ ಸಸ್ಯಗಳ ಮಳಿಗೆ, ಜೇನು, ಮಧು ಪರೀಕ್ಷಾ ಸೌಲಭ್ಯ, ಕಮಲಂ ಹಣ್ಣಿನ ಉತ್ಕೃಷ್ಠತೆಯ ಕೇಂದ್ರ, ಐಸಿಎಆರ್‌-ಐಐಎಚ್‌ಆರ್‌ ಬೆಸ್ಟ್‌ ಹಾರ್ಟ್‌ ಮಳಿಗೆಗಳು ಇರಲಿವೆ.

ಕಾರ್ಯಾಗಾರ ಮತ್ತು ಮಳಿಗೆಗಳನ್ನು ಕಾಯ್ದಿರಿಸಲು ತೋಟಗಾರಿಕೆ ಮೇಳದ ಜಾಲತಾಣಕ್ಕೆ https://nhf2024.in/ ಭೇಟಿ ನೀಡಿ, ಫೆ.20ರೊಳಗೆ ಹಣ ಪಾವತಿ ಮಾಡಬೇಕಾಗಿದೆ.

Exit mobile version