Site icon Vistara News

ಸಾತನೂರಿನಲ್ಲಿ ಅ.15 ರಿಂದ 24ರವರೆಗೆ ನವರಾತ್ರಿ ಮಹೋತ್ಸವ, ಲಕ್ಷ್ಮೀ ಕಾಳಿ ಸರಸ್ವತಿ, ನವದುರ್ಗಾ ಉತ್ಸವ

Navratri Mahotsava

ಬೆಂಗಳೂರು: ತ್ರಿಕೋನ ಶಕ್ತಿ ಪೀಠದಿಂದ (TriKona Shakti Peetha) ಅ.15 ರಿಂದ 24ರವರೆಗೆ ನವರಾತ್ರಿ ಮಹೋತ್ಸವ, ಲಕ್ಷ್ಮೀ ಕಾಳಿ ಸರಸ್ವತಿ ಉತ್ಸವ ಹಾಗೂ ನವದುರ್ಗಾ ಉತ್ಸವವನ್ನು ನಗರದ ಯಲಹಂಕ ತಾಲೂಕಿನ ಬಾಗಲೂರು ಮುಖ್ಯರಸ್ತೆಯ ಸಾತನೂರಿನ ಕಂಟ್ರಿ ಕ್ಲಬ್‌ ಬಳಿ ಆಯೋಜಿಸಲಾಗಿದೆ.

ನವರಾತ್ರಿ ಹಿನ್ನೆಲೆಯಲ್ಲಿ (Navaratri Mahotsava) ಶ್ರೀ ತ್ರಿಕೋನ ಶಕ್ತಿ ಹಾಗೂ ನವದುರ್ಗಿ ಅಮ್ಮನವರನ್ನು ಪಟ್ಟಕ್ಕೆ ಕೂರಿಸಲಾಗುತ್ತಿದೆ. ತ್ರಿಕೋನ ಶಕ್ತಿ ಪೀಠದ ಸಂಸ್ಥಾಪಕರಾದ ಶ್ರೀ ಶ್ರೀ ಶ್ರೀ ರಜನಿ ಮಾತಾಜೀ, ಶ್ರೀ ಡಿ. ತಿಪ್ಪೇಸ್ವಾಮಿ ಅವರ ದಿವ್ಯ ಸಾನ್ನಿಧ್ಯದಲ್ಲಿ ದುರ್ಗಾ ದೇವಿಯ 9 ರೂಪಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಗುತ್ತದೆ.

ಅ.15ರಂದು ಬೆಳಗ್ಗೆ 9 ಗಂಟೆಗೆ ದೇವಿಯ ಆವಾಹನೆ, ಗಣಪತಿ ಪೂಜೆ, ನವದುರ್ಗಿ ಆವಾಹನೆ, ತ್ರಿದೇವತೆ, ತ್ರಿಮೂರ್ತಿಗಳ ಆವಾಹನೆ, ಗಣ ಹೋಮ, ಕುಂಕುಮಾರ್ಚನೆ, ಪುಷ್ಪಾರ್ಚನೆ, 108 ಜಪ ಪಾರಾಯಣ, ಚಂಡಿ ಪಾರಾಯಣ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಲಘು ಪೂರ್ಣಾಹುತಿ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯುತ್ತದೆ. ಮಧ್ಯಾಹ್ನ 1.30 ರಿಂದ 3ಗಂಟೆವರೆಗೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಸಂಜೆ 6.30ಕ್ಕೆ ಅಮ್ಮನವರಿಗೆ ಪುಷ್ಪಾರ್ಚನೆ, ಆರತಿ, ರಾತ್ರಿ 9 ಗಂಟೆಗೆ ಮಹಾ ಮಂಗಳಾರತಿ ನಡೆಯುತ್ತದೆ.

ನವರಾತ್ರಿ ಕಾರ್ಯಕ್ರಮಗಳು

ನವರಾತ್ರಿಯಲ್ಲಿ ಪ್ರತಿ ದಿನ ಬೆಳಗ್ಗೆ 9 ಗಂಟೆಗೆ ದೇವಿಯ ಆವಾಹನೆ, ಕುಂಕುಮಾರ್ಚನೆ, ಪುಷ್ಪಾರ್ಚನೆ, ಹೋಮ, 108 ಜಪ, ಚಂಡಿ ಪಾರಾಯಣ, ಮಧ್ಯಾಹ್ನ 12 ಗಂಟೆಗೆ ಲಘು ಪೂರ್ಣಾಹುತಿ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ. ಸಂಜೆ 6.30ಕ್ಕೆ ಪುಷ್ಪಾರ್ಚನೆ, ಆರತಿ, ರಾತ್ರಿ 9 ಗಂಟೆಗೆ ಮಹಾ ಮಂಗಳಾರತಿ ನಡೆಯುತ್ತದೆ.

ಮೊದಲ ದಿನ ಅ.15 ರಂದು ಶೈಲ ಪುತ್ರಿ ದೇವಿ ಪೂಜೆ, ಅ. 16ರಂದು ಬ್ರಹ್ಮಚಾರಿಣಿ ದೇವಿ, ಅ. 17ರಂದು ಚಂದ್ರಘಟ್ಟ ದೇವಿ, ಅ. 18ರಂದು ಕೂಷ್ಮಾಂಡ ದೇವಿ, ಅ.19ರಂದು ಸ್ಕಂದಮಾತಾ ದೇವಿ, ಅ.20ರಂದು ಕಾತ್ಯಾಯಿನಿ ದೇವಿ, ಅ.21ರಂದು ಕಾಳರಾತ್ರಿ ದೇವಿ, ಅ.22ರಂದು ಮಹಾಗೌರಿ, ಅ.23ರಂದು ಸಿದ್ಧಿದಾತ್ರಿ ದೇವಿ ಪೂಜೆ ನಡೆಯುತ್ತದೆ.

ಹತ್ತನೇ ದಿನವಾದ ಅ.24ರಂದು ಬೆಳಗ್ಗೆ 10.45ಕ್ಕೆ ಗಣೇಶ, ನವದುರ್ಗೆ, ತ್ರಿದೇವತೆಯ ಮೂರ್ತಿಗಳನ್ನು ಸಾಂಸ್ಕೃತಿಕ ಮತ್ತು ಜಾನಪದ ಕಲಾ ತಂಡಗಳೊಂದಿಗೆ ಬೃಹತ್‌ ಮೆರವಣಿಗೆ ನಡೆಸಲಾಗುತ್ತದೆ.

ಶ್ರೀ ರಜನಿ ಮಾತಾಜೀ ಮೇಲೆ ದೇವಿ ಆವಾಹನೆ

ನವರಾತ್ರಿ ಒಂಬತ್ತು ದಿನಗಳಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆವರೆಗೆ ತ್ರಿಕೋನ ಶಕ್ತಿ ಪೀಠ ಸಂಸ್ಥಾಪಕರಾದ ಶ್ರೀ ಶ್ರೀ ಶ್ರೀ ರಜನಿ ಮಾತಾಜೀ ಅವರ ಮೇಲೆ ಅಮ್ಮನವರು ಆವಾಹನೆ ಆಗಲಿದ್ದು, ಭಕ್ತರು ದರ್ಶನ ಪಡೆಯಬಹುದು.

ಇದನ್ನೂ ಓದಿ | ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಅ.15-26ರವರೆಗೆ ಶರನ್ನವರಾತ್ರಿ ಉತ್ಸವ, ಮಹಾಚಂಡಿಕಾ ಹೋಮ, ಶ್ರೀ ಮಾತಾ ಪ್ರಶಸ್ತಿ ಪ್ರದಾನ

ಸಾಂಸ್ಕೃತಿಕ ಕಾರ್ಯಕ್ರಮಗಳು

ನವರಾತ್ರಿಯಲ್ಲಿ ಪ್ರತಿದಿನ ಸಂಜೆ 6.30 ರಿಂದ ಭವ್ಯ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಾಡಿನ ಖ್ಯಾತ ಕಲಾವಿದರಿಂದ ಜಾನಪದ ಕಲೆ ಸಂಸ್ಕೃತಿ ಸಾರುವ ತೊಗಲು ಗೊಂಬೆ ಆಟ, ಯಕ್ಷಗಾನ. ಭಾರತನಾಟ್ಯ ಮುಂತಾದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಇದನ್ನೂ ಓದಿ | Yuva Dasara: ಜಯನಗರದಲ್ಲಿ ಅ.15 ರಿಂದ 24 ರವರೆಗೆ ʼಯುವ ದಸರಾʼ

ವಿವಿಧ ಸ್ಪರ್ಧೆಗಳ ಆಯೋಜನೆ

ರಂಗೋಲಿ, ಮ್ಯೂಸಿಕಲ್‌ ಚೇರ್‌, ಮಕ್ಕಳ ಫ್ಯಾನ್ಸಿ ಡ್ರೆಸ್‌ ಮತ್ತು ವಿವಿಧ ಗೇಮ್ಸ್‌, ಹಳ್ಳಿ ಆಟ, ವಾಲಿಬಾಲ್, ಮಡಿಕೆ ಹೊಡೆಯುವುದು, ಊಟದ ಸ್ಪರ್ಧೆ ನಡೆಯಲಿವೆ.

Exit mobile version