Site icon Vistara News

Water supply: ಅರ್ಧ ಬೆಂಗಳೂರು ನಗರಕ್ಕೆ ಇಂದು ಕಾವೇರಿ ನೀರಿಲ್ಲ, ನಿಮ್ಮ ಏರಿಯಾ ಪಟ್ಟಿಯಲ್ಲಿದೆಯಾ ಇದೆಯಾ ನೋಡಿ

tap water

ಬೆಂಗಳೂರು: ಕಾವೇರಿ ನೀರು ಸರಬರಾಜು (Kaveri water supply) ವ್ಯವಸ್ಥೆಯಲ್ಲಿ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ಇಂದು ವ್ಯತ್ಯಯ ಆಗಲಿದೆ.

ಕಾವೇರಿ 1 ಮತ್ತು 2ನೇ ಹಂತದ ಜಲರೇಚಕ ಯಂತ್ರಾಗಾರಗಳ ದುರಸ್ತಿ ಕಾರ್ಯ ಹಾಗೂ ಕವಾಟಗಳ ದುರಸ್ತಿಯಿಂದಾಗಿ ಇಂದು ಈ ಕೆಳಗಿನ ಏರಿಯಾಗಳಲ್ಲಿ ನೀರು ಪೂರೈಕೆ ಇರುವುದಿಲ್ಲ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮಾಹಿತಿ ನೀಡಿದೆ.

ಎಲ್ಲೆಲ್ಲಿ ವ್ಯತ್ಯಯ?

ನೇತಾಜಿ ನಗರ, ನಾಗಮ್ಮ ನಗರ, ಕೇಶವ ನಗರ, ಕೆ.ಪಿ.ಅಗ್ರಹಾರ, ರಾಘವೇಂದ್ರ ಕಾಲೋನಿ, ಟಿಪ್ಪುನಗರ, ಆನಂದಪುರ, ಚಾಮರಾಪೇಟೆ, ರಾಮಚಂದ್ರ ಅಗ್ರಹಾರ, ಆದರ್ಶನಗರ, ಕನ್ನೀರ್‌ ಕಾಲೋನಿ, ನಂಜಾಂಬ ಅಗ್ರಹಾರ, ವಾಲ್ಮೀಕಿ ನಗರ, ವಿ. ಎಸ್. ಗಾರ್ಡನ್, ಹರಿಕುಂಟೆ, ಪಾದರಾಯನಪುರ ಪ್ಲವರ್ ಗಾರ್ಡನ್, ಬನ್‌ಗೈ ಕಾಲೋನಿ, ಆಂಜನಪ್ಪ ಗಾರ್ಡನ್, ಬಿನ್ನಿ ಲೇಔಟ್, ನ್ಯೂ ಬಿನ್ನಿ ಲೇಔಟ್, ವಿದ್ಯಾಪೀಠ, ಶ್ರೀನಿವಾಸ ನಗರ, ಬ್ಯಾಂಕ್ ಕಾಲೋನಿ, ಐಟಿಐ ಲೇಔಟ್, ಗುರುರಾಜ್ ಲೇಔಟ್, ವಿವೇಕಾನಂದ ನಗರ, ಕಾದಿಮಿಷನ್ ಲೇಔಟ್, ಕತ್ರಿಗುಪ್ಪೆ, ತ್ಯಾಗರಾಜನಗರ, ಬಸವನಗುಡಿ. ಶಾಸ್ತ್ರೀನಗರ, ಎನ್. ಆರ್. ಕಾಲೋನಿ, ಬೈರಪ್ಪ ಬ್ಲಾಕ್‌, ಮೌಂಟ್ ಜಾಯ್ ಎಕ್ಸ್ ಟೆಕ್ಷನ್, ಅಶೋಕ್ ನಗರ, ಬನಂಶಂಕರಿ ಒಂದನೇ ಹಂತ, ಶ್ರೀನಗರ, ಬೃಂದಾವನನಗರ, ಸುಂಕೇನಹಳ್ಳಿ.

ಕುಮಾರಸ್ವಾಮಿ ಲೇಔಟ್‌ 1ನೇ ಹಂತ ಮತ್ತು 2 ನೇ ಹಂತ ಇಸ್ರೋ ಲೇಔಟ್, ಸಮೃದ್ಧಿ ಲೇಔಟ್, ಲಿಯಾಸ್ ನಗರ, ರಾಜ್ಯೋತ್ಸವ ನಗರ, ವಿಠಲ್ ನಗರ, ಶಾಂತಲಾ ನಗರ, ಶಾಂತಿನಗರ, ವಿನಾಯಕನಗರ, ಆನೆಪಾಳ್ಯ, ಎಲ್. ಆರ್. ನಗರ, ಅಂಬೇಡ್ಕರ್ ನಗರ, ನೀಲಸಂದ್ರ ಆಸ್ಮಿನ್ ಟೌನ್. ಈಜೀಪುರ, ವಿವೇಕ್ ನಗರ, ಅಶೋಕ್ ನಗರ, ರಿಚ್‌ಮಂಡ್ ಟೌನ್, ಎಂಜಿ ರೋಡ್, ಬ್ರಿಗೇಡ್ ರಸ್ತೆ, ಜೆ.ಕೆ ಪುರಂ, ಎಂ.ವಿ ಗಾರ್ಡನ್, ವಿಕ್ಟೋರಿಯಾ ಲೇಔಟ್ ಮಾಯಾ ಬಜಾರ್, ದೊಮ್ಮಲೂರು, ದೊಮ್ಮಲೂರು ವಿಲೇಜ್, ದೊಮ್ಮಲೂರು ಲೇಔಟ್, ಕಮಾಂಡ್ ಆಸ್ಪತ್ರೆ, ದೊಮ್ಮಲೂರು 2ನೇ ಹಂತ, ಎಚ್‌ಎಎಲ್‌ 2ನೇ ಹಂತ, ಅಮರಜ್ಯೋತಿ ಲೇಔಟ್, ಕಾರ್ಪೋರೇಷನ್ ಕ್ವಾರ್ಟರ್ಸ್, ಕೊಡಿಹಳ್ಳಿ, ಹನುಮಂತಪ್ಪ ಲೇಔಟ್, ಗಂಗಾಧರ್ ಚಿಟ್ಟೆ ರಸ್ತೆ, ಬಜಾರ್ ಸ್ಟ್ರೀಟ್, ಹಲಸೂರು, ಮರ್ಫಿ ಟೌನ್, ಜೋಗು ಪಾಳ್ಯ.

ಕೇಂಬ್ರಿಡ್ಜ್ ಲೇಔಟ್, ಗೌತಮಪುರ, ಧೀನಬಂಧುನಗರ, ರಾಜೇಂದ್ರ ನಗರ, ರಾಜೇಂದ್ರ ನಗರ ಸ್ಮಮ್, ವೆಂಕಟಸ್ವಾಮಿ ರೆಡ್ಡಿ ಲೇಔಟ್, ಮಲ್ಲಪ್ಪ ರೆಡ್ಡಿ ಲೇಔಟ್, ನಂಜಪ್ಪ ರೆಡ್ಡಿ ಲೇಔಟ್, ಕೆ.ಆರ್. ನಂಜಪ್ಪ ಲೇಔಟ್, ಎನ್.ಆರ್.ಡಿ.ಐ, ಕ್ಯಾಂಪಸ್, ಆಡುಗೋಡಿ, ಕಾವೇರಿ ಸಂಕೀರ್ಣ, ಪೋಲಿಸ್ ಕ್ಯಾಟರ್ಸ್, ನೇತ್ರಾವತಿ 1 ರಿಂದ 10 ಬ್ಲಾಕ್‌ಗಳು, ನಂದಿ ಸಂಕೀರ್ಣ 1 ರಿಂದ 32 ಬ್ಲಾಕ್‌ಗಳು ಮತ್ತು ಟಿಪ್ಪು ಬ್ಲಾಕ್‌ಗಳು, ಕೋರಮಂಗಲ 6 ನೇ 7 ನೇ ಬ್ಲಾಕ್‌, ಕೆ.ಆರ್.ಗಾರ್ಡನ್, ಕೆ.ಹೆಚ್.ಬಿ ಕಾಲೋನಿ, ಜಾನ್ ನಗರ, ಕೋರಮಂಗಲ ವಿಲೇಜ್, ಕೋರಮಂಗಲ 8ನೇ ಬ್ಲಾಕ್, ಪಾರ್‌ಸಿಯಲ್ ಎನ್‌.ಜಿ.ವಿ, ಜಯನಗರ 3ನೇ ಬ್ಲಾಕ್‌, 4ನೇ ಬ್ಲಾಕ್‌ ಮತ್ತು 4ನೇ ‘ಟಿ’ ಬ್ಲಾಕ್.

ಇದನ್ನೂ ಓದಿ: Contaminated Water: ಮೊಳಕಾಲ್ಮೂರಿನಲ್ಲಿ ಕಲುಷಿತ ನೀರು ಸೇವಿಸಿ 33 ಮಂದಿ ಅಸ್ವಸ್ಥ

Exit mobile version