ಬೆಂಗಳೂರು: ʼಜಿ ಅಕಾಡೆಮಿʼ ವತಿಯಿಂದ ಕನ್ನಡ ಚಲನಚಿತ್ರ ಉದ್ಯಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು, ಹೊಸದಾಗಿ ಕಲಾವಿದರು, ನಿರ್ದೇಶಕರು ಮತ್ತು ನಿರ್ಮಾಪಕರಾಗ ಬಯಸುವವರಿಗೆ ಆ.10 ರಂದು ಬೆಂಗಳೂರು ನಗರದ ನಾಗರಭಾವಿಯ ಡಿ-ಗ್ರೂಪ್ ಲೇಔಟ್‌ನಲ್ಲಿರುವ ಜಿ ಅಕಾಡೆಮಿಯಲ್ಲಿ ಬೆಳಗ್ಗೆ 9.40ಕ್ಕೆ ಒಂದು ದಿನದ ಕಾರ್ಯಾಗಾರವನ್ನು (Workshop) ಏರ್ಪಡಿಸಲಾಗಿದೆ.
ಇದನ್ನೂ ಓದಿ: Pralhad Joshi: ಪ್ರಸಕ್ತ ಸಕ್ಕರೆ ಋತುವಿನಲ್ಲಿ 1 ಲಕ್ಷ ಕೋಟಿ ರೂ. ರೈತರ ಬಾಕಿ ಪಾವತಿ
ಕಾರ್ಯಾಗಾರದಲ್ಲಿ ಚಲನಚಿತ್ರ ಉದ್ಯಮದ ನಿರ್ಮಾಪಕ-ನಿರ್ದೇಶಕ ಗುರು ದೇಶಪಾಂಡೆ, ನಿರ್ದೇಶಕರಾದ ಬಿ.ಎಂ. ಗಿರಿರಾಜ್ ಮತ್ತು ಆಕಾಶ್ ಶ್ರೀವತ್ಸ, ಪತ್ರಕರ್ತ ಎಸ್. ಶ್ಯಾಮ್ ಪ್ರಸಾದ್ ಪಾಲ್ಗೊಳ್ಳಲಿದ್ದಾರೆ. ಅತಿಥಿ ಭಾಷಣಕಾರರಾಗಿ ಎಂ.ಎಲ್.ಎಂ. ಶರತ್ ಪಾಲ್ಗೊಳ್ಳಲಿದ್ದು, ಚಿತ್ರರಂಗದ ಕಾರ್ಯವಿಧಾನಗಳ ಕುರಿತು ಅವರು ಆಳವಾದ ಮಾಹಿತಿ ನೀಡಲಿದ್ದಾರೆ.
ಇದನ್ನೂ ಓದಿ: Teachers Transfer : ಇಂದಿನಿಂದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಶುರು; ವಿವಿಧ ನೇಮಕಾತಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ
ಕಾರ್ಯಾಗಾರವು ಅಂದು ಬೆಳಗ್ಗೆ 9:40 ರಿಂದ ಮಧ್ಯಾಹ್ನ 3:00 ರವರೆಗೆ ನಡೆಯಲಿದ್ದು, ನೋಂದಾಯಿಸಿಕೊಳ್ಳಲು ಮೊ.ಸಂ: 99007 77222 / 99001 95195 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.