Site icon Vistara News

Mythree Foundation: ಜೂ.19ರಂದು ಆನ್‌ಲೈನ್‌ ʼಕಾಳಿದಾಸ ಕಾವ್ಯ ಸಪ್ತಾಹʼ

Mythree Foundations Online programme

#image_title

ಬೆಂಗಳೂರು: ಮೈತ್ರೀ ಪ್ರತಿಷ್ಠಾನಮ್‌ (Mythree Foundation) ವತಿಯಿಂದ ಜೂನ್‌ 19 ರಂದು ಸಂಜೆ 6 ಗಂಟೆಗೆ ಆನ್‌ಲೈನ್‌ ಮೂಲಕ ʼಕಾಳಿದಾಸ ಕಾವ್ಯ ಸಪ್ತಾಹʼ ಕಾಳಿದಾಸ ಮಹಾಕವಿಯ ಕಾವ್ಯಗಳ ರಸಾರಾಧನೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಭಾರತದ ಹೆಮ್ಮೆಯ ಕವಿ ಕಾಳಿದಾಸನ ಇತಿವೃತ್ತ, ಕಾವ್ಯಶೈಲಿಯ ಪರಿಚಯ, ದಂತಕಥೆಗಳನ್ನು ವಿದ್ವಾಂಸರು ತೆರೆದಿಡಲಿದ್ದಾರೆ.

ವಿದ್ವಾನ್‌ ಉಮಾಕಾಂತ ಭಟ್‌ ಕೆರೆಕೈ, ಡಾ.ರಾಮಚಂದ್ರ ಭಟ್‌ ಕೋಟೆಮನೆ, ಡಾ. ಶ್ರೀರಾಮ್‌ ಭಟ್‌, ಡಾ.ರಾಮಕೃಷ್ಣ ಪೇಜತ್ತಾಯ, ಡಾ.ಗಣಪತಿ ಭಟ್‌, ಡಾ.ಮಹೇಶ್‌ ಕಾಕತ್ಕರ್‌, ಡಾ.ಸೂರ್ಯ ಹೆಬ್ಬಾರ್‌ ಹಾಗೂ ವಿದ್ವಾನ್‌ ಭೋಜರಾಜ. ಟಿ ಆನ್‌ಲೈನ್‌ ಮೂಲಕ ಕಾಳಿದಾಸನ ಬಗ್ಗೆ ಮಾತನಾಡಲಿದ್ದಾರೆ.

ಕಾರ್ಯಕ್ರಮದ ಲಿಂಕ್‌ಗಾಗಿ 9148592363 ಸಂಖ್ಯೆಗೆ ಅಸಕ್ತರು ಹೆಸರನ್ನು ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಬಹುದು. ಕರೆ ಮಾಡಲು ಅವಕಾಶವಿರುವುದಿಲ್ಲ. ಕಾರ್ಯಕ್ರಮವನ್ನು ಆದಿತ್ಯ ನಾವುಡ ಸಂಯೋಜಿಸಿದ್ದಾರೆ.

ಇದನ್ನೂ ಓದಿ | Media Awards: ಜೂ.25ರಂದು ವಿಎಸ್‌ಕೆ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ

Exit mobile version