ಬೆಂಗಳೂರು: ವಜ್ರದ ಆಭರಣಗಳಲ್ಲಿ ದೇಶದ ವಿಶ್ವಾಸಾರ್ಹ ಬ್ರ್ಯಾಂಡ್ ಎನಿಸಿರುವ ‘ಒರಾ’ ಸಂಸ್ಥೆಯು ೬೮ನೇ ಮಳಿಗೆಯನ್ನು (Orra Jewellery Store) ಬೆಂಗಳೂರಿನ ಕೋರಮಂಗಲದಲ್ಲಿ ಆರಂಭಿಸಿದೆ. ಆ ಮೂಲಕ ತನ್ನ ಬ್ರ್ಯಾಂಡ್‌ಅನ್ನು ಬೆಂಗಳೂರಿಗೂ ವಿಸ್ತರಿಸಿದ್ದು, ನೂತನ ಆಭರಣಗಳ ಮೂಲಕ ಆಭರಣ ಪ್ರಿಯರನ್ನು ಸೆಳೆಯುತ್ತಿದೆ.
ಮಳಿಗೆಗೆ ಚಾಲನೆ ನೀಡಿದ ಬಳಿಕ ಒರಾ ವ್ಯವಸ್ಥಾಪಕ ನಿರ್ದೇಶಕ ದೀಪು ಮೆಹ್ತಾ ಮಾತನಾಡಿದರು. “ಬೆಂಗಳೂರು ನಮಗೆ ಮಹತ್ವದ ಮಾರುಕಟ್ಟೆಯಾಗಿದೆ. ಈ ಮಳಿಗೆ ಆರಂಭದೊಂದಿಗೆ ನಮ್ಮ ಬ್ರ್ಯಾಂಡ್‌ಅನ್ನು ಬಲಪಡಿಸಿಕೊಳ್ಳುವ ಗುರಿ ಹೊಂದಿದ್ದೇವೆ. ನಮ್ಮ ಗ್ರಾಹಕರಿಗೆ ಅವಿಸ್ಮರಣೀಯ ಶಾಪಿಂಗ್ ಅನುಭವ ನೀಡುವ ಉದ್ದೇಶ ಹೊಂದಿದ್ದೇವೆ. ಈ ಮಳಿಗೆಯಲ್ಲಿನ ಆಭರಣಗಳನ್ನು ವಜ್ರದ ಆಭರಣಗಳ ಬೇಡಿಕೆಯನ್ನು ಗಮನದಲ್ಲಿ ಇರಿಸಿಕೊಂಡು ಅತ್ಯಂತ ಪ್ರಜ್ಞಾಪೂರ್ವಕವಾಗಿ ವಿನ್ಯಾಸಗೊಳಿಸಲಾಗಿದೆ. ಅವು ನಮ್ಮ ಗ್ರಾಹಕರ ಆಯ್ಕೆ, ಅಭಿರುಚಿಗಳಿಗೆ ಅನುಗುಣವಾಗಿವೆ” ಎಂದು ತಿಳಿಸಿದರು.
ಗ್ರಾಹಕರ ಶಾಪಿಂಗ್ ಅನುಭವ ಹೆಚ್ಚಿಸಲು 6,000 ಚದರ ಅಡಿ ವಿಸ್ತೀರ್ಣದ ಮಳಿಗೆಯು ಆರಾಮದಾಯಕ ಆಸನಗಳು, ಅತ್ಯಾಧುನಿಕ ಒಳಾಂಗಣ ವಿನ್ಯಾಸ ಮತ್ತು ಎರಡು ಬ್ರೈಡಲ್ ಲಾಂಜ್‍ಗಳನ್ನು ಹೊಂದಿದೆ. ಹೊಸ ಮಳಿಗೆಯಲ್ಲಿ ಒರಾ ಕ್ರೌನ್ ಸ್ಟಾರ್ ಸಂಗ್ರಹಗಳು, ಅಸ್ತ್ರ ಸಂಗ್ರಹಗಳು, ಡಿಸೈರ್ಡ್ ಸಂಗ್ರಹಗಳು ಮತ್ತು ಪ್ಲಾಟಿನಂ ಸಂಗ್ರಹಗಳು ಸೇರಿ ಬ್ರಾಂಡ್‍ನ ವೈವಿಧ್ಯಮಯ ಆಭರಣಗಳು ಲಭ್ಯ ಇವೆ.