Site icon Vistara News

ಬಸವನಗುಡಿಯಲ್ಲಿ ಜ.10ರಂದು ‘ಪಾಲಿಥೀನ್ ಮುಕ್ತ ಅಯೋಧ್ಯೆಯತ್ತ ನಮ್ಮ ಚಿತ್ತʼ ಸಂವಾದ

Paryavaran Sanrakshan Gatividhi

ಬೆಂಗಳೂರು: ರಾಮ ಮಂದಿರ ರಾಷ್ಟ್ರ ಮಂದಿರ ಎಂದು ಭಾರತದ ಅಸ್ಮಿತೆಯನ್ನು ಸಾರುವ ರಾಮ ಮಂದಿರ (Ram Mandir) ಲೋಕಾರ್ಪಣೆ ಶುಭ ಸಂದರ್ಭದಲ್ಲಿ ಪರ್ಯಾವರಣ ಸಂರಕ್ಷಣ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತ ವತಿಯಿಂದ ಜನವರಿ 10ರಂದು ಬೆಳಗ್ಗೆ 10.30 ರಿಂದ 11.30 ರವೆರೆಗೆ ʼಪಾಲಿಥೀನ್ ಮುಕ್ತ (ಪ್ಲಾಸ್ಟಿಕ್) ಅಯೋಧ್ಯೆಯತ್ತ ನಮ್ಮ ಚಿತ್ತʼ (Polythene Free Ayodhya) ಸಂವಾದವನ್ನು ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಮಾತೆ ಪ್ರಕೃತಿಯನ್ನು ಮಲಿನ ಮಾಡುವ ಪ್ಲಾಸ್ಟಿಕ್ ಬಳಕೆ ಮಾಡದೆ, ಶ್ರೀರಾಮನ ಪವಿತ್ರ ಕ್ಷೇತ್ರದ ದರ್ಶನ ಮಾಡಲು ಜನರಲ್ಲಿ ಜಾಗೃತಿ ಮೂಡಿಸುವುದು ಪರ್ಯಾವರಣ ಸಂರಕ್ಷಣ ಗತಿವಿಧಿ ಸಂಸ್ಥೆಯ ಉದ್ದೇಶವಾಗಿದೆ. ಜತೆಗೆ ಎಲ್ಲಾ ಧಾರ್ಮಿಕ ಕ್ಷೇತ್ರಗಳು ಪಾಲಿಥೀನ್ ಮುಕ್ತವಾಗಬೇಕಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಂವಾದದಲ್ಲಿ ಮುಖ್ಯ ಅತಿಥಿಗಳಾಗಿ ಬ್ರಹ್ಮರ್ಷಿ ಆನಂದ ಪೀಠದ ಡಾ. ಮಹರ್ಷಿ ಆನಂದ ಗುರೂಜಿ, ಪತ್ರಕರ್ತೆ ಹಾಗೂ ವಾಗ್ಮಿ ಶ್ರೀಲಕ್ಷ್ಮಿ ರಾಜಕುಮಾರ್, ಘನ ತ್ಯಾಜ್ಯ ನಿರ್ವಹಣೆ ತಜ್ಞ ರಾಮ ಪ್ರಸಾದ್‌,‌ ವಿಎಚ್‌ಪಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ | Raja Marga Column: ಆಡ್ವಾಣಿ ರಥಯಾತ್ರೆ; ರಾಮಜನ್ಮಭೂಮಿ ಹೋರಾಟದ ಮಹತ್ತರ ಮೈಲುಗಲ್ಲು

ಪರ್ಯಾವರಣ ಸಂರಕ್ಷಣ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಸಂಯೋಜಕ ವೆಂಕಟೇಶ ಸಂಗನಾಳ, ಜಮ ಸಂವಾದ ಪ್ರಮುಖರಾದ ಸಹನಾ ಹೆಗಡೆ ಉಪಸ್ಥಿತರಿರಲಿದ್ದಾರೆ.

Exit mobile version