ಬೆಂಗಳೂರು: ಬಹುರೂಪಿ ಪ್ರಕಾಶನದ ವತಿಯಿಂದ ಖ್ಯಾತ ಪತ್ರಕರ್ತ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪಿ.ಸಾಯಿನಾಥ್ ಅವರ ರಚನೆಯ ಹಾಗೂ ಪತ್ರಕರ್ತ, ಲೇಖಕ ಜಿ.ಎನ್.ಮೋಹನ್ ಅವರು ಕನ್ನಡಕ್ಕೆ ಅನುವಾದಿಸಿರುವ ʼಕೊನೆಯ ಹೀರೋಗಳು: ಭಾರತ ಸ್ವಾತಂತ್ರ್ಯದ ಕಾಲಾಳು ಯೋಧರುʼ (The Last Heroes: Foot Soldiers of Indian Freedom) ಕೃತಿಯ ಬಿಡುಗಡೆ, ಉಪನ್ಯಾಸ- ಸಂವಾದ ಕಾರ್ಯಕ್ರಮವನ್ನು (Book Release) ಅಕ್ಟೋಬರ್ 1ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ನಗರದ ಬಸವನಗುಡಿ ನ್ಯಾಷನಲ್ ಕಾಲೇಜಿನ ಡಾ.ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೊನೆಯ ಹೀರೋಗಳು: ಭಾರತ ಸ್ವಾತಂತ್ರ್ಯದ ಕಾಲಾಳು ಯೋಧರು ಪುಸ್ತಕವನ್ನು ಕೃತಿಯ ಹೀರೋಗಳ ಕುಟುಂಬಗಳ ಸಮ್ಮುಖದಲ್ಲಿ ನವ ದೆಹಲಿಯ ಜೆಎನ್‌ಯು ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ವಿದ್ವಾಂಸ ಡಾ.ಪುರುಷೋತ್ತಮ ಬಿಳಿಮಳೆ ಅವರು ಬಿಡುಗಡೆ ಮಾಡಲಿದ್ದಾರೆ. ಬೆಳಗ್ಗೆ 11.30ಕ್ಕೆ ಪಿ.ಸಾಯಿನಾಥ್ ಅವರಿಂದ ʼಯಾರು ನಮ್ಮ ಸ್ವಾತಂತ್ರ್ಯ ಯೋಧರುʼ ಕುರಿತು ಉಪನ್ಯಾಸ ಮತ್ತು ಸಂವಾದ ನಡೆಯಲಿದೆ.
ಇದನ್ನೂ ಓದಿ | Raja Marga Column : ಅಸ್ಮಿತಾಯ್: ಕೊಂಕಣಿ ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ವಿರಾಟ್ ಕ್ಯಾನ್ವಾಸ್
ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ನ್ಯಾ.ಎಚ್.ಎನ್.ನಾಗಮೋಹನ ದಾಸ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಉಪಾಧ್ಯಕ್ಷರು, ಇಂದೋರ್‌ನ ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಟ್ರಸ್ಟಿ ಎನ್.ಆರ್. ವಿಶುಕುಮಾರ್, ಸಂಸ್ಕೃತಿ ಚಿಂತಕರಾದ ಡಾ.ವಿಜಯಮ್ಮ, ಪರಿ ಸಂಸ್ಥಾಪಕರು, ಖ್ಯಾತ ಪತ್ರಕರ್ತ ಪಿ.ಸಾಯಿನಾಥ್, ಅವಧಿ ಸಂಪಾದಕ ಜಿ.ಎನ್.ಮೋಹನ್ ಅವರು ಭಾಗವಹಿಸಲಿದ್ದಾರೆ.
ಪಾಲಗುಮ್ಮಿ ಸಾಯಿನಾಥ್ ಅವರ ಪರಿಚಯ
ಪಾಲಗುಮ್ಮಿ ಸಾಯಿನಾಥ್ ಅವರು ‘ಪೀಪಲ್ಸ್ ಆರ್ಕೇವ್ ಆಫ್ ರೂರಲ್ ಇಂಡಿಯಾ’ (ಪರಿ) ಸಂಸ್ಥಾಪಕ ಸಂಪಾದಕರು. ಕಳೆದ 42 ವರ್ಷಗಳಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರು. ಈ ಪೈಕಿ 30 ಸುದೀರ್ಘ ವರ್ಷಗಳ ಕಾಲ ಅವರು ಗ್ರಾಮೀಣ ಭಾರತವನ್ನು ಪೂರ್ಣಾವಧಿಯಾಗಿ ವರದಿ ಮಾಡಿದ್ದಾರೆ. ‘ದಿ ಹಿಂದೂʼ ಪತ್ರಿಕೆಯ ಗ್ರಾಮೀಣ ವ್ಯವಹಾರಗಳ ಸಂಪಾದಕರಾಗಿದ್ದರು.
ಸಾಯಿನಾಥ್ ಅವರಿಗೆ 60 ರಾಷ್ಟ್ರೀಯ, ಅಂತಾರಾಷ್ಟ್ರೀಯ ವರದಿಗಾರಿಕೆ ಪ್ರಶಸ್ತಿಗಳು, ಫೆಲೋಶಿಪ್‌ಗಳು ಸಿಕ್ಕಿವೆ. ಇವುಗಳ ಪೈಕಿ 2021ರಲ್ಲಿನ ಫುಕುವೋಕಾ ಗ್ರಾಂಡ್ ಪ್ರೈಜ್, 2014ರಲ್ಲಿ ನೀಡಲಾದ ವರ್ಲ್ಡ್ ಮೀಡಿಯಾ ಸಮ್ಮಿಟ್ ಅವಾರ್ಡ್, 2007ರಲ್ಲಿನ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ, ಆಮ್ನೆಸ್ಟಿ ಇಂಟರ್‌ನ್ಯಾಷನಲ್ ನೀಡುವ ಮಾನವ ಹಕ್ಕುಗಳ ವರದಿಗಾರಿಕೆಯ ಬಹುಮಾನ, ರಾಮನಾಥ್ ಗೋಯೆಂಕಾ ವರ್ಷದ ಪತ್ರಕರ್ತ ಪ್ರಶಸ್ತಿಗಳು ಕೆಲವು.
ಇದನ್ನೂ ಓದಿ | Yakshagana Show: ಅ.7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷನೂಪುರ ʼರಾಜಾ ತ್ರೀʼ ಪ್ರದರ್ಶನ
2014 ಡಿಸೆಂಬರ್‌ನಲ್ಲಿ ಸಾಯಿನಾಥ್ ಅವರು ‘ಪರಿ’ಯನ್ನು ಹುಟ್ಟುಹಾಕಿದರು. 14 ಭಾಷೆಗಳಲ್ಲಿ ‘ಪರಿ’ ಪ್ರಕಟವಾಗುತ್ತಿದೆ. ‘ಪರಿ’ ಸ್ವತಂತ್ರವಾದ ಬಹುಮಾಧ್ಯಮ ಡಿಜಿಟಲ್ ವೇದಿಕೆಯಾಗಿದ್ದು, ಎಲ್ಲಾ ಪ್ರದೇಶ ಹಾಗೂ ಗ್ರಾಮೀಣ ಜನರನ್ನು ವರದಿ ಮಾಡುವುದು ಪರಿಯ ಮುಖ್ಯ ಉದ್ದೇಶಗಳಲ್ಲೊಂದು. ಕಳೆದ 7 ವರ್ಷಗಳಲ್ಲಿ ‘ಪರಿ’ 50ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದೆ.