Site icon Vistara News

Pai International: ಪೈ ವತಿಯಿಂದ ಮೆಗಾ ಮಾನ್ಸೂನ್‌ ಮೇಳ; ಲಕ್ಕಿ ಡ್ರಾ ವಿಜೇತರ ಆಯ್ಕೆ, ಬಹುಮಾನ ಗೆದ್ದವರ ಪಟ್ಟಿ ಬಿಡುಗಡೆ

Pai International Electronics Limited continues its tradition of conducting the most Genuine Lucky Draw function transparently

ಬೆಂಗಳೂರು: ಪೈ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ತನ್ನ ಸಂಪ್ರದಾಯವನ್ನು ಮುಂದುವರಿಸಿದೆ. ಪೈ ಇಂಟರ್‌ನ್ಯಾಷನಲ್‌ ವತಿಯಿಂದ (Pai International)ಸೆಪ್ಟೆಂಬರ್‌ 29ರಂದು ಮೆಗಾ ಮಾನ್ಸೂನ್ ಮೇಳ ಲಕ್ಕಿ ಡ್ರಾ ಕಾರ್ಯಕ್ರಮ ಬೆಂಗಳೂರಿನ ಕೂಡ್ಲು ಗೇಟ್‌ನಲ್ಲಿರುವ ಪೈ ಸೆಂಟ್ರಲ್ ವೇರ್‌ಹೌಸ್‌ನಲ್ಲಿ ನಡೆಯಿತು.

ಪೈ ಶೋ ರೂಮ್‌ಗಳಲ್ಲಿ ಕಳೆದ ಜೂನ್ 4 ರಿಂದ ಸೆಪ್ಟೆಂಬರ್‌ 23ರ ವರೆಗೆ ಶಾಪಿಂಗ್ ಮಾಡಿದ ಗ್ರಾಹಕರಿಗೆ ಕೂಪನ್‌ಗಳನ್ನು ನೀಡಲಾಗಿತ್ತು. ಒಟ್ಟಾರೆ 24,83,381 ಕೂಪನ್‌ಗಳನ್ನು ವಿತರಿಸಲಾಗಿತ್ತು. ಇದರಲ್ಲಿ 63,030 ಮಂದಿಗೆ ಲಕ್ಕಿ ಡ್ರಾ ಮೂಲಕ ಬಹುಮಾನ ನೀಡಲಾಗುತ್ತದೆ. ಕೂಪನ್‌ಗಳನ್ನು ಪಡೆದುಕೊಂಡಿರುವ ಗ್ರಾಹಕರು ತಮಗೆ ಸಮೀಪ ಇರುವ ಪೈ ಶೋ ರೂಮ್‌ನಲ್ಲಿ ವಿಜೇತರ ಹೆಸರನ್ನು ಪರಿಶೀಲಿಸಬಹುದಾಗಿದೆ. ಪೈ ಇಂಟರ್‌ನ್ಯಾಶನಲ್‌ನ ವೆಬ್‌ಸೈಟ್‌ಗೆ ಭೇಟಿ ನೀಡಿಯೂ ಪರಿಶೀಲನೆ ನಡೆಸಬಹುದಾಗಿದೆ.

ಲಕ್ಕಿ ಡ್ರಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪೈ ಇಂಟರ್‌ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್ ಪೈ ಮತ್ತು ನಿರ್ದೇಶಕ ರಾಹುಲ್‌ ಪೈ “ಎಲೆಕ್ಟ್ರಾನಿಕ್ಸ್ ಉಪಕರಣಗಳು, ಮೊಬೈಲ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ವಿಶ್ವಾಸಾರ್ಹ ಮತ್ತು ಪ್ರಮುಖ ಬ್ರ್ಯಾಂಡ್ ಆಗಿ ಪೈ ಇಂಟರ್‌ನ್ಯಾಷನಲ್‌ ಜನರ ಮನೆ ಮಾತಾಗಿದೆ. ಪೂರ್ಣ ಪ್ರಮಾಣದ ಶೋರೂಮ್‌ಗಳು ಕರ್ನಾಟಕ ಮತ್ತು ತೆಲಂಗಾಣದಾದ್ಯಂತ ಹರಡಿಕೊಂಡಿವೆ. ಮೆಗಾ ಮಾನ್ಸೂನ್ ಮೇಳ ಲಕ್ಕಿ ಡ್ರಾ ಸಮಾರಂಭವನ್ನು ಪ್ರತಿ ಬಾರಿಯಂತೆ ಈ ಬಾರಿಯೂ ಸಹ ನಡೆಸಿಲಾಗಿದೆ. ಲಕ್ಕಿ ಕೂಪನ್ ಡ್ರಾವನ್ನು ನಡೆಸುವಾಗ ಪಾರದರ್ಶಕತೆ ಕಾಪಾಡಿಕೊಳ್ಳಲಾಗಿದ್ದು, ಬಹುಮಾನ ವಿತರಣೆ ಮಾಡಲಾಗುವುದು,” ಎಂದರು.

ಇಲ್ಲಿಯವರೆಗೆ ಪೈ ಇಂಟರ್ನ್ಯಾಷನಲ್ 340 ಕಾರುಗಳು, 330 ಬೈಕ್‌ಗಳು, 179.88 ಕೋಟಿ ಪೈ ಲಾಯಲ್ಟಿ ಪಾಯಿಂಟ್ಸ್, ಪೈ ಮಳಿಗೆಗಳಲ್ಲಿ 25.34 ಕೋಟಿ ಉಚಿತ ಶಾಪಿಂಗ್, 4.15 ಕೋಟಿ ನಗದು ಬಹುಮಾನ, 7.32 ಕೋಟಿ ಚಿನ್ನದ ನಾಣ್ಯಗಳನ್ನು ತನ್ನ ಗ್ರಾಹಕರಿಗೆ ವಿತರಿಸಿದೆ. ಇಲ್ಲಿಯವರೆಗೆ ಸಾವಿರಾರು ಎಲ್ಸಿಡಿಗಳು, ಎಲ್ಇಡಿಗಳು / ರೆಫ್ರಿಜರೇಟರ್ಗಳು / ವಾಷಿಂಗ್ ಮೆಷಿನ್ಗಳು / ಟಿವಿಗಳು / ಮೈಕ್ರೋವೇವ್ ಓವನ್ಗಳು / ಮೊಬೈಲ್ ಫೋನ್ಗಳು / ಡಿವಿಡಿ ಪ್ಲೇಯರ್ಗಳು / ಇಂಡಕ್ಷನ್ ಕುಕ್ಕರ್ಗಳು ಮತ್ತು ಲಕ್ಷಾಂತರ ಇತರ ಸಣ್ಣ ಬಹುಮಾನಗಳ ಜತೆಗೆ ಪ್ರಮುಖ ಬಹುಮಾನಗಳಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version