ಬೆಂಗಳೂರು: ಕೈಯಲ್ಲಿ ಒಂದು ಪುಟ್ಟ ಕುಂಚ, ಕಣ್ಣಿನಲ್ಲಿ ಇಡಿ ಪ್ರಪಂಚವನ್ನು ಕಾಣುವ ಕಲಾವಿದರು ಬಿಡಿಸುವ ಚಿತ್ರಕಲೆ (Painting Exhibition) ಎಂತಹವರನ್ನೂ ಸೆಳೆದು ಬಿಡುತ್ತದೆ. ಚಿತ್ರಗಳ ಕಲಾಲೋಕ ಚಿತ್ರಕಲಾ ಪರಿಷತ್‌ನಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ನಡೆಯುತ್ತಿದೆ.
ಪ್ರಖ್ಯಾತ ಕಲಾವಿದರಾದ ಭಾರತಿ ಸೆಂಥಿಲ್ವೇಲನ್ ಅವರ ಏಕವ್ಯಕ್ತಿ ಚಿತ್ರಕಲೆ ಪ್ರದರ್ಶನ ನಡೆಯುತ್ತಿದೆ. ಬೆಂಗಳೂರು ಮೂಲದ ಭಾರತಿ ಅವರು ತಮ್ಮ ಚಿತ್ರಗಳ ಮೂಲಕ ಬಾಲ್ಯದ ದಿನಗಳನ್ನು ನೆನಪಿಸಿದ್ದಾರೆ.
ಈ ಹೊಸ ಸರಣಿಯ ಚಿತ್ರಗಳು ಯೌವ್ವನದ ನೆನಪುಗಳ ಜತೆಗೆ ದೈನಂದಿನ ಜೀವನ ಕೆಲವು ಸುಂದರ ಸಮಯದ ಸವಿನೆನಪುಗಳನ್ನು ಕಣ್ಣ ಮುಂದೆ ತರುತ್ತವೆ. ಈ ಕೆಲಿಡೋಸ್ಕೋಪಿಕ್ ಚಿತ್ರಗಳು ಮುಗ್ಧತೆಯ ಪ್ರತಿಂಬಿಂಬವನ್ನು ಸೂಚಿಸುತ್ತಿವೆ.
ನಗರ ಜೀವನದ ತುರ್ತು ಮತ್ತು ಒತ್ತಡದ ಬದುಕಿನ ಕೆಲವು ಕ್ಷಣಗಳನ್ನು ಚಿತ್ರಕಲೆಯಲ್ಲಿ ಕಾಣಬಹುದಾಗಿದೆ. ಜತೆಗೆ ಹಳ್ಳಿಯ ಪರಿಕಲ್ಪನೆಯ ಚಿತ್ರಣವೂ ಸೊಗಸಾಗಿ ಮೂಡಿ ಬಂದಿದ್ದು, ಬಾಲ್ಯವನ್ನು ನೆನಪಿಸುತ್ತಿದೆ.
ಇದನ್ನೂ ಓದಿ | Sunny Leone | ಉಪೇಂದ್ರ ಸಿನಿಮಾದ ʻಯುಐʼನಲ್ಲಿ ನಟಿಸುತ್ತಿದ್ದಾರಾ ಸನ್ನಿ ಲಿಯೋನ್?