Site icon Vistara News

Pavitra Lokesh | ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ: ಸೈಬರ್‌ ಠಾಣೆ ಮೆಟ್ಟಿಲೇರಿದ ನಟಿ

Pavitra Lokesh

ಬೆಂಗಳೂರು: ನಟಿ ಪವಿತ್ರಾ ಲೋಕೇಶ್‌ ಅವರ ವೈಯಕ್ತಿಕ ಜೀವನದ ಬಗ್ಗೆ ಈಗಾಗಲೇ ಗಾಸಿಪ್‌ಗಳು ಹರಿದಾಡುತ್ತಿವೆ. ಇದರ ಮಧ್ಯೆ ಅಪರಿಚಿತ ವ್ಯಕ್ತಿಯೊಬ್ಬ ಪವಿತ್ರಾ ಲೋಕೇಶ್‌ (Pavitra Lokesh) ಅವರ ನಕಲಿ ಫೇಸ್ಬುಕ್ ಖಾತೆ ತೆರೆದು ಅಶ್ಲೀಲ ಸಂದೇಶಗಳ ಕಳಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಮೈಸೂರಿನ ಸೈಬರ್ ಠಾಣೆಯಲ್ಲಿ ನಟಿ ಪವಿತ್ರಾ ಲೋಕೇಶ್‌ ದೂರು ದಾಖಲಿಸಿದ್ದಾರೆ.

ತಮ್ಮ ಹೆಸರಿನಲ್ಲಿ ನಕಲಿ ಫೇಸ್ಬುಕ್‌ ಖಾತೆ ತೆರೆದಿದ್ದು, ನನ್ನ ಬಗ್ಗೆ ಅಶ್ಲೀಲ ಸಂದೇಶ ಹಾಗೂ ಸುಳ್ಳು ಸುದ್ದಿಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಾಕಲಾಗುತ್ತಿದೆ. ಇದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಟಿ ಪವಿತ್ರಾ ಲೋಕೇಶ್‌ ದೂರಿನಲ್ಲಿ ಆಗ್ರಹಿಸಿದ್ದಾರೆ. ಈ ಕುರಿತು ಎಫ್‌ಐಆರ್‌ ದಾಖಲಾಗಿದೆ.

ಇದನ್ನೂ ಓದಿ | ಸರ್ಕಾರಕ್ಕೆ ಸಂಕಷ್ಟ ತಂದ ಶಿಂಧೆಗೆ ಶಿವಸೇನೆಯಿಂದ ಶಾಕ್‌: ಪೊಲೀಸರಿಗೆ ದೂರು ಕೊಟ್ಟ ಶಾಸಕನ ಪತ್ನಿ

ನಟ ಮೈಸೂರು ಲೋಕೇಶ್‌ ಅವರ ಪುತ್ರಿ ಪವಿತ್ರಾ ಲೋಕೇಶ್‌ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಕನ್ನಡ ತೆಲುಗು ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | ಸಾಯಿ ಪಲ್ಲವಿ ಹೇಳಿಕೆಗೆ ಭಜರಂಗದಳ ಆಕ್ರೋಶ, ನಟಿ ವಿರುದ್ಧ ದೂರು ದಾಖಲು

Exit mobile version