Site icon Vistara News

Person Missing | ದಿನೇಶ್ ಗುಂಡೂರಾವ್ ಮನೆ ಕೆಲಸದ ಸಿಬ್ಬಂದಿ‌ ನಾಪತ್ತೆ ಪ್ರಕರಣ : ಪತ್ತೆ ಹಚ್ಚಿದ ಪೊಲೀಸರು

Person Missing

ಬೆಂಗಳೂರು : ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಮನೆ ಕೆಲಸದ ಸಿಬ್ಬಂದಿ‌ ನಾಪತ್ತೆಯಾಗಿರುವ (Person Missing) ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಮೂರು ವರ್ಷಗಳಿಂದ ಗುಂಡೂರಾವ್ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂಜು ಶರ್ಮಾ(41) ನಾಪತ್ತೆಯಾಗಿದ್ದರು. ಇದೀಗ ಪೊಲೀಸರು ಆತನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಸಂಜು ಶರ್ಮಾ, ಸೆ.2ನೇ ತಾರೀಖು ಬೆಳಗ್ಗೆ ಮನೆಯಿಂದ ಹೊರ ಹೋದಾತ ವಾಪಸ್ಸು ಬಂದಿಲ್ಲ ಎಂದು ದೂರು ದಾಖಲಾಗಿತ್ತು. ಮನೆಯಲ್ಲಿ ಕಳ್ಳತನವಾದ ಬಗ್ಗೆ ಮಾಹಿತಿ ಇಲ್ಲವಾಗಿದೆ ಎಂದು ದಿನೇಶ್ ಗುಂಡೂರಾವ್ ಆಪ್ತ ಸಹಾಯಕರಿಂದ ಸಂಜಯನಗರ ಠಾಣೆಗೆ ದೂರು ದಾಖಲಿಸಿದ್ದರು.

ಇದನ್ನೂ ಓದಿ | ಮರವಂತೆ ಬೀಚ್ ಬಳಿ ಸಮುದ್ರಕ್ಕುರುಳಿದ ಕಾರು; ಚಾಲಕ ಸಾವು, ಮತ್ತೊಬ್ಬ ನಾಪತ್ತೆ, ಇಬ್ಬರ ರಕ್ಷಣೆ

ಈ ಸಂಬಂಧ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿತ್ತು. ಪ್ರಕರಣ ದಾಖಲಿಸಿಕೊಂಡು ಸಂಜು ಶರ್ಮಾ ಪತ್ತೆಗೆ ಪೊಲೀಸರು ಮುಂದಾಗಿದ್ದರು. ಇದೀಗ ನಾಪತ್ತೆಯಾಗಿದ್ದ ಕೆಲಸಗಾರನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸದ್ಯ ಆತನನ್ನು ಗುಂಡೂರಾವ್ ಮನೆಗೆ ಪೊಲೀಸರು ಒಪ್ಪಿಸಿದ್ದಾರೆ.

Exit mobile version