Site icon Vistara News

Plastic recycling : ಬೆಂಗಳೂರು ಶಾಲೆಗಳಲ್ಲಿ “ಮರುಬಳಕೆ” ಅಧ್ಯಾಯ; ಮಕ್ಕಳಿಗೆ ರಿಸೈಕಲ್‌ ಪಾಠ

Recycling chapter in Bengaluru schools Plastic recycling lessons for children

ಬೆಂಗಳೂರು: ಪ್ಲಾಸ್ಟಿಕ್‌ನಿಂದ (Plastic recycling) ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ತಡೆಯಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸದ್ಯ Sunfeast YiPPee ‘ಎ ಬೆಟರ್ ವರ್ಲ್ಡ್’ ಕಾರ್ಯಕ್ರಮವನ್ನು ರೂಪಿಸಿದ್ದು, ತನ್ನ ಬ್ರಾಂಡ್ ಮಿಷನ್‌ಗೆ ಅನುಗುಣವಾಗಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಕುರಿತು ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿದೆ.

ಬೆಟರ್ ವರ್ಲ್ಡ್ ಕಾರ್ಯಕ್ರಮದ ಮೂಲಕ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಕುರಿತು ಬೆಂಗಳೂರಿನ 500 ಶಾಲೆಗಳಲ್ಲಿ 2.5 ಲಕ್ಷ ಶಾಲಾ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗಿದೆ. ಸುಮಾರು 22,400 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಿ 1,247 ಬೆಂಚು ಹಾಗೂ ಡೆಸ್ಕ್‌ಗಳನ್ನು ತಯಾರಿಸಿ ಬೆಂಗಳೂರಿನ ಶಾಲೆಗಳಿಗೆ ನೀಡಲಾಗಿದೆ.

ಇದನ್ನೂ ಓದಿ: Bengaluru News : ಇಳಿ ವಯಸ್ಸಿನವರಿಗೆ ನಡುಕು ಹುಟ್ಟಿಸಿದ ಪಾರ್ಕಿನ್ಸನ್‌ ರೋಗ

ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡುವ ಹಾಗೂ ಮರುಬಳಕೆ ಮಾಡುವ ತಂತ್ರಗಳ ಕುರಿತು ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ಬೆಂಗಳೂರಿನಾದ್ಯಂತ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಮನೆಯಿಂದಲೇ ತಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಶಾಲೆಗಳಲ್ಲಿ ಗೊತ್ತುಪಡಿಸಿದ ಸಂಗ್ರಹಣಾ ಕೇಂದ್ರಗಳಲ್ಲಿ ಇರಿಸಲಾಗಿತ್ತು. ಈ ಪ್ಲಾಸ್ಟಿಕ್ ತ್ಯಾಜ್ಯಗಳ ಮರುಬಳಕೆ ಮಾಡಿ ಶಾಲೆಗಳಿಗೆ ಪ್ಲಾಸ್ಟಿಕ್‌ನಿಂದ ಬೆಂಚುಗಳು ಮತ್ತು ಡೆಸ್ಕ್‌ಗಳನ್ನು ತಯಾರಿಸಲಾಗಿದೆ. ಈ ಮೂಲಸೌಕರ್ಯ ಅಗತ್ಯವಿರುವ ಶಾಲೆಗಳಲ್ಲಿ ಈ ಬೆಂಚ್‌ಗಳನ್ನು ನೀಡಲಾಗಿದೆ.

ಮರುಬಳಕೆ ಪ್ಲಾಸ್ಟಿಕ್ ತ್ಯಾಜ್ಯದಿಂದ ಮಾಡಿದ್ದ 100 ಬೆಂಚುಗಳು ಮತ್ತು ಡೆಸ್ಕ್‌ಗಳನ್ನು ಬೆಂಗಳೂರಿನ ಬೇಗೂರಿನ ಸರ್ಕಾರಿ ಪ್ರೌಢಶಾಲೆಗೆ YiPPee ತಂಡವು ನೀಡಿದೆ. ಈ ಕುರಿತು ಮಾತನಾಡಿರುವ ಸ್ನ್ಯಾಕ್ಸ್ ನೂಡಲ್ಸ್ ಮತ್ತು ಪಾಸ್ತಾ, ಐಟಿಸಿ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕವಿತಾ ಚತುರ್ವೇದಿ, ಐಟಿಸಿ ಪರಿಸರ ನಿರ್ವಹಣೆಗಾಗಿ ಬಹು ಆಯಾಮದ ಉಪಕ್ರಮಗಳೊಂದಿಗೆ ಸುಸ್ಥಿರತೆಯಲ್ಲಿ ಜಾಗತಿಕ ಮಾದರಿಯಾಗಿದೆ. ಸನ್‌ಫೀಸ್ಟ್ YiPPee! ಕಾರ್ಯಕ್ರಮದಡಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು, ಮರುಬಳಕೆಗೆ ಸಹಾಯ ಮಾಡಲು ಶಾಲೆಗಳಲ್ಲಿ ಸಮುದಾಯ ಚಾಂಪಿಯನ್‌ಗಳನ್ನು ರಚಿಸುವ ಪ್ರಯಾಣವನ್ನು ಪ್ರಾರಂಭಿಸಿದೆ. ಈ ಮೂಲಕ ಶಾಲಾ ಹಂತದಿಂದಲ್ಲೇ ಪ್ಲಾಸ್ಟಿಕ್‌ ತ್ಯಾಜ್ಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಮುಂದಿನ ಪೀಳಿಗೆಯ ನೆಮ್ಮದಿ ಬದುಕಿಗೆ ಇದು ಅಗತ್ಯವಿದೆ ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version