ಬೆಂಗಳೂರು: 2024-25ನೇ ಸಾಲಿನ ʼಪ್ರೆಸ್ ಕ್ಲಬ್ ಆಫ್ ಬೆಂಗಳೂರುʼ (Press Club of Bangalore) ಚುನಾವಣೆಯಲ್ಲಿ ಹಿರಿಯ ಪತ್ರಕರ್ತ ಆರ್. ಶ್ರೀಧರ್ ಅವರು ಮರು ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಬಿ. ಎನ್. ಮೋಹನ್ ಕುಮಾರ್ ಆಯ್ಕೆಯಾಗಿದ್ದಾರೆ. ʼಪ್ರೆಸ್ ಕ್ಲಬ್ ಆಫ್ ಬೆಂಗಳೂರುʼಗೆ ಭಾನುವಾರ ಚುನಾವಣೆ ನಡೆದಿದ್ದು, ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗುವಲ್ಲಿ ಆರ್. ಶ್ರೀಧರ್ ಸಫಲರಾದರು.
ಅಧ್ಯಕ್ಷ ಸ್ಥಾನಕ್ಕಾಗಿ ಧ್ಯಾನ್ ಪೂಣಚ್ಚ, ಆರ್. ಶ್ರೀಧರ್ ಹಾಗೂ ಸುಭಾಷ್ ಹೂಗಾರ್ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಅತಿ ಹೆಚ್ಚು ಮತದಾರರ ಬೆಂಬಲದಿಂದ ಆರ್. ಶ್ರೀಧರ್ ಅವರು ಅಧ್ಯಕ್ಷರಾಗಿ ಮರು ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಮಹಾಂತೇಶ್ ಹೀರೇಮರ್, ಬಿ.ಎನ್.ಮೋಹನ್ ಕುಮಾರ್ ಹಾಗೂ ವಿಶ್ವನಾಥ್ ಭಾಗವತ್ ಕಣದಲ್ಲಿದ್ದರು. ಅಂತಿಮವಾಗಿ ಮೋಹನ್ ಕುಮಾರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅದೇ ರೀತಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ದೊಡ್ಡ ಬೊಮ್ಮಯ್ಯ, ಟಿ. ಮಂಜುನಾಥ್, ಎಂ.ಡಿ ಶಿವಕುಮಾರ್ ಬೆಳ್ಳಿತಟ್ಟೆ ಹಾಗೂ ವೈ.ಎಸ್.ಎಲ್. ಸ್ವಾಮಿ ನಡುವೆ ಪೈಪೋಟಿ ನಡೆದಿತ್ತು. ಅಂತಿಮವಾಗಿ ಶಿವಕುಮಾರ್ ಬೆಳ್ಳಿತಟ್ಟೆಯವರು ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಪಟ್ಟಿ
1.ಅಧ್ಯಕ್ಷ – ಹಿರಿಯ ಪತ್ರಕರ್ತ ಆರ್. ಶ್ರೀಧರ್ ಶ್ರೀಧರ್
2.ಉಪಾಧ್ಯಕ್ಷ- ಬಿ.ಎನ್.ಮೋಹನ್ ಕುಮಾರ್
3.ಪ್ರಧಾನ ಕಾರ್ಯದರ್ಶಿ – ಎಂ.ಡಿ.ಶಿವಕುಮಾರ್ ಬೆಳ್ಳಿತಟ್ಟೆ
4.ಕಾರ್ಯದರ್ಶಿ – ಜಿ.ವೈ. ಮಂಜುನಾಥ್
5.ಜಂಟಿ ಕಾರ್ಯದರ್ಶಿ- ಧರಣೀಶ್ ಬಿ.ಎನ್
6.ಖಜಾಂಚಿ- ಜಿ.ಗಣೇಶ್
ಕಾರ್ಯಕಾರಿ ಸಮಿತಿ ಸದಸ್ಯರು
ಪ್ರೆಸ್ ಕ್ಲಬ್ ಕಾರ್ಯಕಾರಿ ಸಮಿತಿಗೆ ಸ್ಪರ್ಧಿಸಿದ್ದ 19 ಅಭ್ಯರ್ಥಿಗಳ ಈ ಕೆಳಕಂಡ ಪೈಕಿ 6 ಸದಸ್ಯರು ಗೆಲುವು ಕಂಡಿದ್ದಾರೆ.
1.ರೋಹಿಣಿ ವಿ. ಅಡಿಗ
2.ಮಂಜುನಾಥ್ ಸಿ.ಆರ್.
3.ಮುಮ್ತಾಜ್ ಅಲೀಂ ಜಿ
4.ಯಾಸಿರ್ ಮುಶ್ತಾಕ್
5.ಶರಣಬಸಪ್ಪ ಎ.ಎಚ್.
6.ಶಿವಣ್ಣ
ಕಾರ್ಯಕಾರಿ ಸಮಿತಿ ಮಹಿಳಾ ಸದಸ್ಯರು
ಮಿನಿ ತೇಜಸ್ವಿ: ಪ್ರೆಸ್ ಕ್ಲಬ್ ಮಹಿಳಾ ಮೀಸಲು ವಿಭಾಗದಲ್ಲಿ ಸ್ಪರ್ಧಿಸಿದ್ದ ಇಬ್ಬರ ಪೈಕಿ ಮಿನಿ ತೇಜಸ್ವಿ ಗೆಲುವು ಪಡೆದು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಯಾರಿಗೆಷ್ಟು ಮತ?
ಪ್ರೆಸ್ ಕ್ಲಬ್ ಆಫ್ ಬೆಂಗಳೂರು 2024-25ನೇ ಸಾಲಿನ ಚುನಾವಣೆಗೆ ಬೆಳಗ್ಗೆ 9 ರಿಂದ 4ಗಂಟೆವರೆಗೂ ಮತದಾನ ಪ್ರಕ್ರಿಯೆ ನಡೆಯಿತು. ಒಟ್ಟು 1040 ಮತದಾರರ ಪೈಕಿ ಈ ಬಾರಿ 767 ಸದಸ್ಯರು ಮತ ಚಲಾಯಿಸಿದರು.
ಆರ್.ಶ್ರೀಧರ್ – 404
ಬಿ.ಎನ್.ಮೋಹನ್ ಕುಮಾರ್- 417
ಎಂ.ಡಿ.ಶಿವಕುಮಾರ್ ಬೆಳ್ಳಿತಟ್ಟೆ – 336
ಗಣೇಶ್.ಜಿ. – 556
ಮಂಜುನಾಥ್ ಜಿ.ವೈ.- 288
ಧರಣೀಶ್ ಬಿ.ಎನ್.- 195
ಕಾರ್ಯಕಾರಿ ಸಮಿತಿ ಮಹಿಳಾ ಮೀಸಲು ಸದಸ್ಯೆ – ಮಿನಿ ತೇಜಸ್ವಿ – 491
ಮಂಜುನಾಥ್ ಸಿ.ಆರ್ – 281
ರೋಹಿಣಿ ವಿ ಅಡಿಗ – 306
ಯಾಸಿರ್ ಮುಶ್ತಾಕ್ – 259
ಮುಮ್ತಾಜ್ ಅಲೀಂ ಜಿ – 272
ಶಿವಣ್ಣ – 234
ಶರಣಬಸಪ್ಪ ಎ.ಎಚ್. – 258
Paris Olympics 2024: ಒಲಿಂಪಿಕ್ಸ್‌ಗೆ ಭಾರತದ ಎಲ್ಲ ಕ್ರೀಡಾಪಟುಗಳು ಫಿಟ್ ಎಂದ ಐಒಎ