Site icon Vistara News

R Madhavan: ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್ 2 ಹೊಗಳಿದ ಮಾಧವನ್‌; ಮೋದಿ ಪ್ರತಿಕ್ರಿಯೆ ಏನು?

R Madhavan Modi

ಬೆಂಗಳೂರು; ನಟ ಮತ್ತು ನಿರ್ದೇಶಕ, ಆರ್ ಮಾಧವನ್ ಇತ್ತೀಚೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನೂತನ ಟರ್ಮಿನಲ್ 2ಗೆ (Terminal 2) ಭೇಟಿ ನೀಡಿದ್ದರು. ಈ ಬಗ್ಗೆ ನಟ ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡಿ ಹೊಗಳಿದ್ದಾರೆ. ಈ ವಿಡಿಯೊಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರತಿಕ್ರಿಯಿಸಿದ್ದಾರೆ.

ʻʻಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯುನ್ನತವಾಗಿದೆ. ಮೂಲ ಸೌಕರ್ಯಗಳೂ ಕೂಡ. ಇದನ್ನು ವಿಮಾನ ನಿಲ್ದಾಣ ಎಂದರೆ ಯಾರೂ ನಂಬುವುದಿಲ್ಲ. ಇಲ್ಲಿನ ಸೀಲಿಂಗ್‌ನಲ್ಲಿ ಗಿಡಗಳನ್ನು ತೂಗುಹಾಕಲಾಗಿದೆ. ಅವೆಲ್ಲ ನಿಜವಾದ ಗಿಡಗಳು, ಅವುಗಳಿಗೆ ಪ್ರತಿದಿನ ಸೀಲಿಂಗ್‌ನಿಂದ ನೀರು ಹಾಯಿಸುವ ವ್ಯವಸ್ಥೆ ಮಾಡಲಾಗಿದೆ ಬಿದಿರಿನ ಸೀಲಿಂಗ್ ಕೂಡ ಇದೆʼʼಎಂದು ಹೊಗಳಿದ್ದಾರೆ ಮಾಧವನ್‌. ಈ ವಿಡಿಯೊಗೆ ನಾಲ್ಕು ಲಕ್ಷಕ್ಕೂ ಅಧಿಕ ಲೈಕ್ಸ್‌ಗಳು ಬಂದಿದ್ದು ಹಲವರು ಕಮೆಂಟ್‌ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ವಿಡಿಯೊಗೆ ಪ್ರತಿಕ್ರಿಯಿಸಿದ್ದಾರೆ. “ಭಾರತದ ಬೆಳವಣಿಗೆಗಾಗಿ ಮುಂದಿನ ಜನರೇಷನ್‌ಗೆ ಮೂಲಭೂಯ ಸೌಕರ್ಯಗಳು” ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.

ಈ ಬಗ್ಗೆ ಅನೇಕರು ಕಮೆಂಟ್‌ ಮೂಲಕ ವ್ಯಕ್ತಪಡಿಸಿದ್ದಾರೆ. “ವಿದೇಶಿ ವಿಮಾನ ನಿಲ್ದಾಣಗಳಿಗಿಂತ ಭಾರತೀಯ ವಿಮಾನ ನಿಲ್ದಾಣಗಳು ಉತ್ತಮವಾಗಿವೆ” ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. “ನಿಜವಾಗಿಯೂ ಗಮನಾರ್ಹವಾಗಿದೆ. ನಿಮ್ಮ ಉಪಸ್ಥಿತಿ ಸ್ಥಳವನ್ನು ಇನ್ನಷ್ಟು ಸುಂದರಗೊಳಿಸಿದೆ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ʻʻಬಹುಶಃ ವಿಶ್ವದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣ,” ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸೆಪ್ಟೆಂಬರ್ 12 ರಂದು ಟರ್ಮಿನಲ್ 2 (T2) ನಲ್ಲಿ ಅಂತರರಾಷ್ಟ್ರೀಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

ಇದನ್ನೂ ಓದಿ: R Madhavan: ‘ಎಡಿಸನ್ ಆಫ್ ಇಂಡಿಯಾ’-ಜಿ.ಡಿ ನಾಯ್ಡು ಬಯೋಪಿಕ್‌ನಲ್ಲಿ ಆರ್ ಮಾಧವನ್

ಆರ್‌ ಮಾಧವನ್‌ ಪೋಸ್ಟ್‌

ಸ್ವದೇಶಿ ತಂತ್ರಜ್ಞಾನ ಬಳಸಿಕೊಂಡು ಹ್ಯಾಂಗಿಂಗ್ ಗಾರ್ಡನ್, ಔಟ್ ಡೋರ್ ಗಾರ್ಡನ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಏರ್‌ಪೋರ್ಟ್‌ನ ಸೌಂದರ್ಯವನ್ನು ಹೆಚ್ಚಿಸಿವೆ. ವಾಸ್ತವದಲ್ಲಿ T2 ಅನ್ನು ಟರ್ಮಿನಲ್ ಇನ್ ಗಾರ್ಡನ್ (Terminal in Garden) ಎಂದೇ ಕರೆಯಲಾಗುತ್ತದೆ. ಅಷ್ಟರ ಮಟ್ಟಿಗೆ ಟರ್ಮಿನಲ್ ಗ್ರೀನರಿಯಾಗಿದೆ ಎಂದು ಹೇಳಬಹುದು.ಅರೈವಲ್ಸ್‌(ಆಗಮನ)ಗೆ ಗ್ರೌಂಡ್ ಫ್ಲೋರ್ ಮತ್ತು ಮೊದಲನೇ ಅಂತಸ್ತು ಡಿಪಾರ್ಚರ್(ನಿರ್ಗಮನ)ಗೆ ಮೀಸಲಾಗಿದೆ. ನಮ್ಮ ಮೆಟ್ರೋ ಸೇರಿದಂತೆ ಮಲ್ಟಿ ಮಾಡೆಲ್ ಹಬ್, ಸೋಲಾರ್ ಪ್ಯಾನೆಲ್ ಛಾವಣಿ, ಕೃತಕ ಜಲಪಾತಗಳು, ಎಲಿವೆಟೆಡ್ ವಾಕ್‌ವೇಯ್ಸ್, ಗ್ರೀನ್ ಸೀಟಿಂಗ್ ಏರಿಯಾಗಳು ಆಕರ್ಷಕವಾಗಿವೆ.

ಟರ್ಮಿನಲ್‌ 2 ವಿಶೇಷತೆಗಳೇನು?

Exit mobile version