ಬೆಂಗಳೂರು: ನಗರದ ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಟರಿ ರಸ್ತೆ ಹಾಗೂ ಮಾಸ್ಕ್ ರಸ್ತೆ (ಕ್ಲಾರೆನ್ಸ್ ಜಂಕ್ಷನ್) ಬಳಿ ಇರುವ ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿ ಹಿನ್ನೆಲೆಯಲ್ಲಿ ಆಗಸ್ಟ್ 25ರಿಂದ ಸೆಪ್ಟೆಂಬರ್ 18ರವೆರೆಗೆ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಅಂಡರ್ ಬ್ರಿಡ್ಜ್ ಕೆಳಭಾಗದ ರೈಲ್ವೆ ಹಳಿಗಳ ಜತೆಗೆ ಹೆಚ್ಚುವರಿಯಾಗಿ ಎರಡು ರೈಲ್ವೆ ಹಳಿಗಳನ್ನು ಅಳವಡಿಸಲು, ಈಗಿರುವ ರೈಲ್ವೆ ಮೇಲ್ಸೇತುವೆಯನ್ನು ಒಡೆದು, ಹೆಚ್ಚುವರಿಯಾಗಿ ಎರಡು ರೈಲ್ವೆ ಹಳಿಗಳನ್ನು ಅಳವಡಿಸಿದ ನಂತರ ಹೊಸ ರೈಲ್ವೆ ಬ್ರಿಡ್ಜ್ ಅನ್ನು ಮರು ನಿರ್ಮಾಣ ಮಾಡಲಾಗುತ್ತದೆ. ಹೀಗಾಗಿ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಈ ಕೆಳಕಂಡಂತೆ ವ್ಯವಸ್ಥೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ.
- ನೇತಾಜಿ ರಸ್ತೆಯಿಂದ ಲಿಂಗರಾಜಪುರ, ಹೆಣ್ಣೂರು ಕಡೆಗೆ ಹೋಗುವ ವಾಹನಗಳು ಎಂ.ಎಂ. ರಸ್ತೆಯಲ್ಲಿ ನೇರವಾಗಿ ಚಲಿಸಿ ಲಾಜರ್ ರಸ್ತೆ ಬಳಿ (ಸಂಚಾರ ಠಾಣಾ ಮುಂಭಾಗ) ಎಡ ತಿರುವು ಪಡೆದು ರೈಲ್ವೆ ಅಂಡರ್ ಬ್ರಿಡ್ಜ್ ದಾಟಿ ಪಾಟರಿ ರಸ್ತೆ-ಹೆಣ್ಣೂರು ಮುಖ್ಯ ರಸ್ತೆ ಜಂಕ್ಷನ್ನಲ್ಲಿ ಬಲ ತಿರುವು ಪಡೆದು ಲಿಂಗರಾಜಪುರ, ಹೆಣ್ಣೂರು ಕಡೆಗೆ ಸಂಚರಿಸಬಹುದಾಗಿದೆ.
- ನೇತಾಜಿ ರಸ್ತೆಯಿಂದ ಐ.ಟಿ.ಸಿ, ಬಾಣಸವಾಡಿ ಕಡೆಗೆ ಹೋಗುವ ವಾಹನಗಳು ಎಂ.ಎಂ ರಸ್ತೆಯಲ್ಲಿ ನೇರವಾಗಿ ಚಲಿಸಿ ರಾಜ ರಸ್ತೆ ಬಳಿ (ಸಂಚಾರ ಠಾಣಾ ಮುಂಭಾಗ) ಎಡ ತಿರುವು ಪಡೆದು ರೈಲ್ವೆ ಅಂಡರ್ ಬ್ರಿಡ್ಜ್ ದಾಟಿ ಪಾಟರಿ ರಸ್ತೆಯಲ್ಲಿ ‘ಯು-ಟರ್ನ್’ ಪಡೆದು ಐ.ಟಿ.ಸಿ, ಬಾಣಸವಾಡಿ ಕಡೆಗೆ ಸಂಚರಿಸಬಹುದಾಗಿದೆ.
- ಮಾಸ್ಕ್ ರಸ್ತೆಯಿಂದ ಲಿಂಗರಾಜಪುರ, ಹೆಣ್ಣೂರು ಕಡೆಗೆ ಹೋಗುವ ವಾಹನಗಳು ಮಾಸ್ಕ್ ಸರ್ಕಲ್ನಲ್ಲಿ ಬಲ ತಿರುವು ಪಡೆದು ಎಂ.ಎಂ. ರಸ್ತೆಯಲ್ಲಿ ನೇರವಾಗಿ ಚಲಿಸಿ ಲಾಜರ್ ರಸ್ತೆ ಬಳಿ (ಸಂಚಾರ ಠಾಣಾ ಮುಂಭಾಗ) ಎಡ ತಿರುವು ಪಡೆದು ರೈಲ್ವೆ ಅಂಡರ್ ಬ್ರಿಡ್ಜ್ ದಾಟಿ ಪಾಟರಿ ರಸ್ತೆ-ಹೆಣ್ಣೂರು ಮುಖ್ಯ ರಸ್ತೆ ಜಂಕ್ಷನ್ನಲ್ಲಿ ಬಲ ತಿರುವು ಪಡೆದು ಲಿಂಗರಾಜಪುರ, ಹೆಣ್ಣೂರು ಕಡೆಗೆ ಸಂಚರಿಸಬಹುದಾಗಿದೆ.
- ಮಾಸ್ಕ್ ರಸ್ತೆಯಿಂದ ಐ.ಟಿ.ಸಿ, ಬಾಣಸವಾಡಿ ಕಡೆಗೆ ಹೋಗುವ ವಾಹನಗಳು ಮಾಸ್ಕ್ ಸರ್ಕಲ್ನಲ್ಲಿ ಬಲ ತಿರುವು ಪಡೆದು ಎಂ.ಎಂ. ರಸ್ತೆಯಲ್ಲಿ ನೇರವಾಗಿ ಚಲಿಸಿ, ಲಾಜರ್ ರಸ್ತೆ ಬಳಿ (ಸಂಚಾರ ಠಾಣಾ ಮುಂಭಾಗ) ಎಡ ತಿರುವು ಪಡೆದು ರೈಲ್ವೆ ಅಂಡರ್ ಬ್ರಿಡ್ಜ್ ದಾಟಿ ಪಾಟರಿ ರಸ್ತೆಯಲ್ಲಿ ಯು-ಟರ್ನ್ ಪಡೆದು ಪಟಿಸಿ, ಬಾಗಸವಾಡಿ ಕಡೆಗೆ ಸಂಚರಿಸಬಹುದಾಗಿದೆ.
- ಕೋಲ್ಸ್ ರಸ್ತೆಯಿಂದ ಐ.ಟಿ.ಸಿ, ಬಾಣಸವಾಡಿ ಕಡೆಗೆ ಹೋಗುವ ವಾಹನಗಳು ಕೋಲ್ಸ್ ರಸ್ತೆ-ವೀಲ್ಡರ್ ರಸ್ತೆ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಸಿಂಧಿ ಕಾಲನಿ ಜಂಕ್ಷನ್ – ಐಟಿಸಿ ಫ್ಲೈ ಓವರ್ನಲ್ಲಿ ನೇರವಾಗಿ ಚಲಿಸಿ ಐ.ಟಿ.ಸಿ, ಬಾಣಸವಾಡಿ ಕಡೆಗೆ ಸಂಚರಿಸಬಹುದಾಗಿದೆ.
- ಮಾಸ್ಕ್ ರಸ್ತೆಯಿಂದ ಟ್ಯಾನರಿ ರಸ್ತೆ, ನಾಗಾವಾರ ಕಡೆಗೆ ಹೋಗುವ ವಾಹನಗಳು ಮಾಸ್ಕ್ ಸರ್ಕಲ್ ನಲ್ಲಿ ಎಡ ತಿರುವು ಪಡೆದು ಎಂ.ಎಂ.ರಸ್ತೆಯಲ್ಲಿ ನೇರವಾಗಿ ಚಲಿಸಿ ನೇತಾಜಿ ರಸ್ತೆ-ಜಿ.ಕೆ.ವೇಲ್ನಲ್ಲಿ ಯುಟರ್ನ್ ಪಡೆದು ಟ್ಯಾನರಿ ರಸ್ತೆ, ನಾಗಾವಾರ ಕಡೆಗೆ ಸಂಚರಿಸಬಹುದಾಗಿದೆ.
- ಎಂ.ಎಂ. ರಸ್ತೆಯಿಂದ ಟ್ಯಾನರಿ ರಸ್ತೆ, ನಾಗಾವಾರ ಕಡೆಗೆ ಹೋಗುವ ವಾಹನಗಳು ಎಂ.ಎಂ.ರಸ್ತೆಯಲ್ಲಿ ನೇರವಾಗಿ ಚಲಿಸಿ ನೇತಾಜಿ ರಸ್ತೆ-ಜಿ.ಕೆ.ವೇಲ್ನಲ್ಲಿ ಯು-ಟರ್ನ್ ಪಡೆದು ಟ್ಯಾನರಿ ರಸ್ತೆ, ನಾಗಾವಾರ ಕಡೆಗೆ ಸಂಚರಿಸಬಹುದಾಗಿದೆ.
ಇದನ್ನೂ ಓದಿ | ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಉಗ್ರರ ಮೊಬೈಲ್ ಮಾಹಿತಿ ಬಯಲು, ಪ್ರಚೋದನಾಕಾರಿ ವಿಡಿಯೊ, ಹಲವು ಸಾಕ್ಷ್ಯ ಲಭ್ಯ