Site icon Vistara News

Rashtrotthana Sahitya | ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬ: ನ.19, 20ರಂದು ವಿವಿಧ ಪುಸ್ತಕಗಳ ಬಿಡುಗಡೆ, ಸೆಮಿನಾರ್

Rashtrotthana Sahitya

ಬೆಂಗಳೂರು: ನಗರದ ಕೆಂಪೇಗೌಡ ನಗರದ ‘ಕೇಶವಶಿಲ್ಪ’ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಒಂದು ತಿಂಗಳ ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬದ‌ (Rashtrotthana Sahitya) ಭಾಗವಾಗಿ ನ.೧೯ ಮತ್ತು 20 ರಂದು ವಿವಿಧ ಪುಸ್ತಕಗಳ ಬಿಡುಗಡೆ ಹಾಗೂ ವಿಚಾರ ಸಂಕಿರಣ ಸೇರಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನ.19 ಶನಿವಾರ ಬೆಳಗ್ಗೆ 11.00 ಗಂಟೆಗೆ ನಾಡೋಜ ಎಸ್. ಆರ್. ರಾಮಸ್ವಾಮಿಯವರ ನಾಲ್ಕು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವಿರುತ್ತದೆ. ಲೇಖಕ, ಯುವಾ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಪುಸ್ತಕಗಳ ಲೋಕಾರ್ಪಣೆ ಮಾಡಲಿದ್ದಾರೆ. ನಂತರ ‘ಹಲವರು ರಾಷ್ಟ್ರಾರಾಧಕರು’, ‘ದ್ರಷ್ಟಾರ ಸಾವರ್ಕರ್’ ಪುಸ್ತಕಗಳ ಕುರಿತು ಲೇಖಕ, ಅನುವಾದಕ ಶ್ರೀ ಹರಿ ರವಿಕುಮಾರ್ ಅವರು Essays & Speeches – Vol.1 & 2 ಪುಸ್ತಕಗಳ ಬಗ್ಗೆ ಮಾತನಾಡಲಿದ್ದಾರೆ. ಸಂಜೆ 5.00 ಗಂಟೆಗೆ ಬಹುಶ್ರುತ ವಿದ್ವಾಂಸ, ಲೇಖಕ ಶತಾವಧಾನಿ ಡಾ.ರಾ.ಗಣೇಶ್ ಅವರು ರಾಳ್ಳಪಲ್ಲಿ ಅನಂತಕೃಷ್ಣಶರ್ಮರ ‘ಗಾನಕಲೆ’ ಹಾಗೂ ‘ಸಾಹಿತ್ಯ ಮತ್ತು ಜೀವನಕಲೆ’ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ.

ಇದನ್ನೂ ಓದಿ | ಛಂದ ಪುಸ್ತಕ ಬಹುಮಾನ ವಿವಾದ | ಪ್ರಶಸ್ತಿ ಪಡೆಯದಂತೆ ಒತ್ತಡ? ಕೊನೇ ಕ್ಷಣದಲ್ಲಿ ಪುರಸ್ಕಾರ ನಿರಾಕರಿಸಿದ ಫಾತಿಮಾ ರಲಿಯಾ

ನ.20 ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ʼಸ್ವಾತಂತ್ರ್ಯಪೂರ್ವದ ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರೀಯತೆʼ ವಿಚಾರ ಸಂಕಿರಣ ಇರಲಿದೆ. ಲೇಖಕ, ಅನುವಾದಕ, ಅಂಕಣಕಾರ ಅಜ್ಜಂಪುರ ಮಂಜುನಾಥ್, ಬೀದರ್‌ನ ಉಪನ್ಯಾಸಕ ಡಾ.ಜ್ಯೋತಿರ್ಮಯ್ ಕೆ., ಬೆಳಗಾವಿಯ ಲೇಖಕ, ಸಂಶೋಧಕ ಪ್ರಕಾಶ್ ಗಿರಿಮಲ್ಲನವರ, ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ಮಾಧವ ಪೆರಾಜೆ, ಬೆಂಗಳೂರಿನ ಉಪನ್ಯಾಸಕ ವಿ. ರಾಜ, ಮಿಥಿಕ್ ಸೊಸೈಟಿ ಗೌರವ ಕಾರ್ಯದರ್ಶಿ ವಿ. ನಾಗರಾಜ್ ಮೊದಲಾದವರು ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಅಕ್ಟೋಬರ್‌ 29 ರಿಂದ ನ.27ರವರೆಗೆ ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ ಕನ್ನಡ ಪುಸ್ತಕ ಹಬ್ಬದಲ್ಲಿ ಇದೇ ಸ್ವರೂಪದ ವಾರಾಂತ್ಯದ ಉಪನ್ಯಾಸ, ಸಂವಾದ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ನಡೆಯಲಿವೆ. ಮತ್ತೆ ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೆ ಪುಸ್ತಕ ಪದರ್ಶನ ಹಾಗೂ ಮಾರಾಟ ಇರಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ ಮಾತ್ರವಲ್ಲದೇ ಇತರೇ ಪ್ರಸಿದ್ಧ ಸಾಹಿತ್ಯಗಳೂ ಲಭ್ಯವಿರುತ್ತವೆ. ಶೇ.5೦ ವರೆಗೂ ರಿಯಾಯಿತಿ ಸಿಗಲಿದೆ. ಪುಸ್ತಕಗಳನ್ನು ಆನ್‌ಲೈನ್ ಮೂಲಕವೂ ಖರೀದಿಸಬಹುದು.

ಇದನ್ನೂ ಓದಿ | ರಾಷ್ಟ್ರೋತ್ಥಾನ ಸಾಹಿತ್ಯದಿಂದ ಒಂದು ತಿಂಗಳ ಕನ್ನಡ ಪುಸ್ತಕ ಹಬ್ಬ; ಅಕ್ಟೋಬರ್ 29ರಿಂದ ಆರಂಭ

Exit mobile version