ಬೆಂಗಳೂರು: ವ್ಯಕ್ತಿಯೊಬ್ಬರ ಕಾಲಿನ ಮೇಲೆ ಬಿಎಂಟಿಸಿ ಬಸ್ ಹರಿದು ಎರಡೂ ಕಾಲುಗಳು ತುಂಡಾಗಿವೆ. ಬೆಂಗಳೂರಿನ ಯಶವಂತಪುರ ಸರ್ಕಲ್‌ನಲ್ಲಿ ಈ ದುರ್ಘಟನೆ ನಡೆದಿದೆ.
ರಾತ್ರಿ 9.30ಕ್ಕೆ ನಡೆದಿರುವ ಈ ಘಟನೆಯಲ್ಲಿ ಸರಿಸುಮಾರು 60 ವರ್ಷದ ವ್ಯಕ್ತಿಯ ಎರಡೂ ಕಾಲುಗಳು ಕತ್ತರಿಸಿಹೋಗಿವೆ. ವ್ಯಕ್ತಿ ಅರೆಪ್ರಜ್ಞಾವಸ್ಥೆಯಲ್ಲಿದ್ದು, ಅವರ ಬಗ್ಗೆ ಇನ್ನಷ್ಟು ವಿವರಗಳು ತಿಳಿದುಬರಬೇಕಿವೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಸದ ವಾಹನಕ್ಕೆ ಗುದ್ದಿದ ಲಾರಿ, ಚೆಲ್ಲಾಡಿದ ಕಸಕ್ಕೆ ಹೈರಾಣಾದ ಸವಾರರು
ಯಶವಂತಪುರದಲ್ಲಿರುವ ಇಸ್ಕಾನ್ ದೇವಾಲಯದ ಮುಂದೆ ನೀರಿನ ಲಾರಿ ಮತ್ತು ಕಸ ಸಾಗಿಸುತ್ತಿದ್ದ ಮಹೇಂದ್ರ ಬೋಲೇರೋ ನಡುವೆ ಅಪಘಾತವಾಗಿದೆ. ಬೆಳಗ್ಗೆ 5.30ರ ಹೊತ್ತಿಗೆ ಹೋಟಲ್ ತ್ಯಾಜ್ಯ ತೆಗೆದುಕೊಂಡು ಹೋಗುತ್ತಿದ್ದ ಬೊಲೇರೋ ಪಿಕ್‌ಅಪ್ ಗಾಡಿಗೆ ವಾಟರ್ ಟ್ಯಾಂಕರ್ ಗುದ್ದಿದ್ದು, ಅಪಘಾತಕ್ಕೆ ಬೊಲೇರೋದಲ್ಲಿದ್ದ ತ್ಯಾಜ್ಯ ಸಂಪೂರ್ಣ ರಸ್ತೆಗೆ ಬಿದ್ದಿದೆ. ರಸ್ತೆ ತುಂಬಾ ಹೋಟಲ್ ತ್ಯಾಜ್ಯ ಚೆಲ್ಲಾಡಿದ್ದು, ಹಲವಾರು ಬೈಕ್ ಸವಾರರು ಇದರಿಂದಾಗಿ ಜಾರಿ ಬಿದ್ದರು.
ರೋಡ್ ಸ್ಕಿಡ್ ಆಗುತ್ತಿರುವುದರಿಂದ ಬೈಕ್ ಸವಾರರು ನಿಯಂತ್ರಣ ಕಳೆದುಕೊಂಡು ಬೀಳುತ್ತಿದ್ದು, 20ಕ್ಕೂ ಹೆಚ್ಚು ಬೈಕ್ ಸವಾರರು ಬಿದ್ದು ಸಣ್ಣ ಪುಟ್ಟ ಗಾಯ ಮಾಡಿಕೊಂಡಿದ್ದಾರೆ. ಸ್ಥಳೀಯರು ಜಾಗದಲ್ಲಿ ನಿಂತು ಬೈಕ್ ಸವಾರರಿಗೆ ನಿಧಾನವಾಗಿ ಚಲಿಸಿ ಎಂದು ಗೈಡ್ ಮಾಡಿದರು.
ಇದನ್ನೂ ಓದಿ: Kumta News: ಮೀನು ಸಾಗಾಣಿಕೆ ವಾಹನದಲ್ಲಿ ಗೋ ಮಾಂಸ ಸಾಗಾಟ; ಅಪಘಾತದಿಂದಾಗಿ ಪ್ರಕರಣ ಬಯಲು