ಬೆಂಗಳೂರು: ನಗರದ ವಿಜಯಶ್ರೀ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಟೆಕ್ವಾಂಡೊ ಚಾಂಪಿಯನ್‌ಷಿಪ್-೨೦೨೨ನಲ್ಲಿ ರುಹಾನಿ ಟೆಕ್ವಾಂಡೊ ಸೆಂಟರ್ ಚಾಂಪಿಯನ್‌ಪಟ್ಟ ಅಲಂಕರಿಸಿದೆ. ನವೆಂಬರ್ ೧೨ ಹಾಗೂ ೧೩ರಂದು ಈ ಕೂಟ ನಡೆದಿದ್ದು, ವಿಜಯಶ್ರೀ ಪಬ್ಲಿಸ್ ಸ್ಕೂಲ್ ಹಾಗೂ ರುಹಾನಿ ಟೆಕ್ವಾಂಡೊ ಸೆಂಟರ್ ನ್ಯಾಷನಲ್ ಓಪನ್ ವಾಲಿಬಾಲ್ ಮತ್ತು ಟೆಕ್ವಾಂಡೊ ಚಾಂಪಿಯನ್‌ಷಿಪ್ ಆಯೋಜಿಸಿತ್ತು.
ರುಹಾನಿ ಟೆಕ್ವಾಂಡೊ ಸೆಂಟರ್ ಸಮಗ್ರ ಚಾಂಪಿಯನ್‌ಷಿಪ್ ತನ್ನದಾಗಿಸಿಕೊಂಡರೆ ಚೈನ್‌ಕಿ ಮಾರ್ಷಲ್ ಆರ್ಟ್ಸ್ ಸಂಸ್ಥೆ ರನ್ನರ್‌ಅಪ್ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಅದೇ ರೀತಿ ೧೪ರ ವಯೋಮಿತಿಯ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ವಿಜಯಶ್ರೀ ಪಬ್ಲಿಕ್ ಸ್ಕೂಲ್ ಚಾಂಪಿಯನ್‌ಪಟ್ಟ ಅಲಂಕರಿಸಿದರೆ, ಕೆಂಪಾಪುರದ ಕೆನ್‌ಶ್ರೀ ಸ್ಕೂಲ್ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.
೧೮ರ ವಯೋಮಿತಿಯ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲೂ ವಿಜಯಶ್ರೀ ಪಬ್ಲಿಕ್ ಸ್ಕೂಲ್ ಟ್ರೋಫಿ ಗೆದ್ದುಕೊಂಡಿತು. ದಿ ಇಂಟರ್‌ನ್ಯಾಷನಲ್ ಸ್ಕೂಲ್ ಫೈನಲ್ ಪಂದ್ಯದಲ್ಲಿ ಸೋತು ರನ್ನರ್‌ಅಪ್ ಸ್ಥಾನ ಪಡೆಯಿತು.
ಮಾಸ್ಟರ್ ಮಧನ್ ಆರ್, ಉತ್ತಮ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದರೆ, ಮಾಸ್ಟರ್ ಯಶವಂತ್ ಬೆಸ್ಟ್ ಸ್ಪೈಕರ್ ಪ್ರಶಸ್ತಿ, ಮಾಸ್ಟರ್ ಆದರ್ಶ್ ಬೆಸ್ಟ್ ಸೆಟ್ಟರ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ | Volleyball Championship | 14 ವರ್ಷಗಳ ಬಳಿಕ ಪದಕ ಗೆದ್ದ ಭಾರತದ ವಾಲಿಬಾಲ್ ತಂಡ