ಬೆಂಗಳೂರು: ಸನಾತನ ಹಿಂದು ಸಮಾಜ ಪರಿಷತ್ ವತಿಯಿಂದ ಆಗಸ್ಟ್ 3ರಂದು ಬೆಳಗ್ಗೆ 10.30ಕ್ಕೆ ವ್ಯಕ್ತಿತ್ವದ ಪರಿಪೂರ್ಣ ವಿಕಸನಕ್ಕಾಗಿ ಮತ್ತು ವಿಶ್ವಮಾನವ ತತ್ವದ ಜಾಗೃತಿಗಾಗಿ ‘ಸಮಾನ ಸಂಸ್ಕಾರ ಕಾರ್ಯಾಗಾರʼ ವನ್ನು ನಗರದ ಮಹಾಲಕ್ಷ್ಮಿ ಲೇಔಟ್‌ನ ಹಿಂದು ಸಾದರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ.
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿ ಅವರು ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಲಿದ್ದಾರೆ. ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಭು ಅಕಾಡೆಮಿಯ ಡಾ. ಆರತಿ ವಿ.ಬಿ. ಅವರು ದಿಕ್ಸೂಚಿ ಭಾಷಣ ಮಾಡಿ, ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಇಡೀ ಭಾರತಕ್ಕೆ ರಾಮ ಮಂದಿರದ ಕನಸು ಹಂಚಿದ ಅಶೋಕ್ ಸಿಂಘಾಲ್
ಮುಖ್ಯ ಅತಿಥಿಗಳಾಗಿ ಶಾಸಕ ಹಾಗೂ ಚಾತುರ್ಮಾಸ್ಯ ಮಹೋತ್ಸವ ಸೇವಾ ಸಮಿತಿ ಗೌರವಾಧ್ಯಕ್ಷರಾದ ಕೆ.ಗೋಪಾಲಯ್ಯ, ಶಿಕ್ಷಣ ತಜ್ಞ ಎನ್. ಸತ್ಯ ಪ್ರಕಾಶ್, ಹರಿಹರಪುರ ಶ್ರೀಮಠದ ಆಡಳಿತಾಧಿಕಾರಿ ಬಿ.ಎಸ್.ರವಿಶಂಕರ್, ಚಾತುರ್ಮಾಸ್ಯ ಮಹೋತ್ಸವ ಸೇವಾ ಸಮಿತಿ ಪ್ರಧಾನ ಸಂಚಾಲಕ ಡಾ. ಬಿ.ಎಸ್.ರಾಘವೇಂದ್ರ ಭಟ್ ಭಾಗವಹಿಸಲಿದ್ದಾರೆ.