Site icon Vistara News

Hindu Janajagruti Samiti: ಗಲಭೆ ತಡೆಗೆ ಕೇಂದ್ರ, ರಾಜ್ಯಗಳಲ್ಲಿ ಯೋಗಿ ಸರ್ಕಾರದ ನೀತಿ ಜಾರಿಗೆ ತರಬೇಕು: ಸಮೀರ್ ಲೋಖಂಡೆ

Sameer Lokhande says Yogi govt's policy should be implemented at centre, states to prevent riots

ಮುಂಬಯಿ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದ ಗಲಭೆ ಒಂದು ಪಿತೂರಿಯಾಗಿದ್ದು, ‘ಔರಂಗಾಬಾದ್’ ಹೆಸರನ್ನು ಬೆಂಬಲಿಸುವವರ ಸಿದ್ಧಾಂತವೇ ಇದಕ್ಕೆ ಕಾರಣಕರ್ತರಾಗಿದ್ದಾರೆ. ಇದು ಔರಂಗಜೇಬನ ‘ದಾರುಲ್ ಇಸ್ಲಾಂ’ (ಇಸ್ಲಾಂ ಆಳ್ವಿಕೆ) ಗುರಿಯನ್ನು ಸಾಧಿಸುವ ಹೋರಾಟವಾಗಿದೆ. ಹಿಂದುಗಳ (Hindu Janajagruti Samiti) ಏಕೀಕರಣ ಮತ್ತು ಹಿಂದುಗಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸಬೇಕು. ಇಂತಹ ಗಲಭೆಗಳನ್ನು ತಡೆಯಲು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನೀತಿಯನ್ನು ಕೇಂದ್ರ ಮತ್ತು ಎಲ್ಲಾ ರಾಜ್ಯಗಳ ಸರ್ಕಾರಗಳು ಜಾರಿಗೆ ತರಬೇಕು ಎಂದು ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಸಮೀರ್‌ ಲೋಖಂಡೆ ಪ್ರತಿಪಾದಿಸಿದರು.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಹಿಂದು ಜನಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ʼಹಿಂದುಗಳ ಮೇಲೆ ದ್ವೇಷದ ಭಾಷಣ ಆರೋಪ, ಹಾಗಾದರೇ ರಾಮನವಮಿ ಗಲಭೆಕೋರರ ಬಗ್ಗೆ ಮೌನವೇಕೆ?’ ವಿಷಯದ ಕುರಿತ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸುದರ್ಶನ್ ಸ್ಯೂಸ್’ನ ಸಂಭಾಜಿನಗರದ ಪ್ರತಿನಿಧಿ ಬಾಬುಲಾಲ್ ರಾಠೌರ್ ಮಾತನಾಡಿ, ಸಂಭಾಜಿನಗರದಲ್ಲಿ ನಡೆದ ಗಲಭೆ ಪೂರ್ವಯೋಜಿತವಾಗಿತ್ತು. ಗಲಭೆಕೋರರು ಭಾರೀ ಪ್ರಮಾಣದ ಕಲ್ಲುಗಳು ಮತ್ತು ಪೆಟ್ರೋಲ್ ಬಾಂಬ್‌ಗಳನ್ನು ಹೊಂದಿದ್ದರು. ಪೊಲೀಸರ ಎದುರೇ ಪೊಲೀಸ್ ವಾಹನಗಳನ್ನು ಸುಟ್ಟರೂ ಪೊಲೀಸರು ಲಾಠಿ ಚಾರ್ಜ್ ಮಾಡಲಿಲ್ಲ. ಪೊಲೀಸರು ಗಲಭೆಯ ಸಾಕ್ಷ್ಯ ನಾಶಪಡಿಸಲು ಯತ್ನಿಸಿದರು. ಗಲಭೆಯಲ್ಲಿ ಸುಟ್ಟು ಕರಕಲಾದ ವಾಹನಗಳು ಪಂಚನಾಮೆ ಇಲ್ಲದೆ ತೆರವುಗೊಳಿಸಿದರು ಎಂದು ಆರೋಪಿಸಿದರು.

ಇದನ್ನೂ ಓದಿ | BJP Karnataka: ಬಿಜೆಪಿ ಅಭ್ಯರ್ಥಿಗಳ ನಕಲಿ ಪಟ್ಟಿ ಕಾಂಗ್ರೆಸ್‌ ಸೃಷ್ಟಿ ಎಂದ ಬಿಜೆಪಿ: ಪೊಲೀಸ್‌ ದೂರು ದಾಖಲು

ಎಂ.ಐ.ಎಂ.ನ ಸಂಸದ ಇಮ್ತಿಯಾಜ್ ಜಲೀಲ್‌ಗೆ ಗಲಭೆಯ ಮಾಹಿತಿ ಪೊಲೀಸರಿಗಿಂತ ಮೊದಲೇ ಹೇಗೆ ಸಿಕ್ಕಿತು? ಗಲಭೆ ಯೋಜನೆಯಲ್ಲಿ ಇಮ್ತಿಯಾಜ್ ಜಲೀಲ್ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆಯಾಗಬೇಕು. ಗಲಭೆಯ ನಂತರ ಸುಟ್ಟ ವಾಹನಗಳ ಫೋಟೊ ಮತ್ತು ವಿಡಿಯೊ ತೆಗೆಯಲು ಪತ್ರಕರ್ತರಿಗೆ ಪೊಲೀಸರು ಏಕೆ ಅವಕಾಶ ನೀಡಲಿಲ್ಲ? ಸತ್ಯವನ್ನು ಮರೆಮಾಚಲು ಏಕೆ ಪ್ರಯತ್ನಿಸಲಾಯಿತು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ ಎಂದರು.

ಪಶ್ಚಿಮ ಬಂಗಾಳದ ಹಾವಡಾದ ‘ಭಾರತೀಯ ಸಾಧಕ ಸಮಾಜ’ದ ಅನಿರ್ಬಾನ್ ನಿಯೊಗಿ ಮಾತನಾಡಿ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಹಿಂದು ವಿರೋಧಿ ಹೇಳಿಕೆಯಿಂದಲೇ ಹಿಂದು ಸಮುದಾಯಕ್ಕೆ ಸಾಕಷ್ಟು ಹಾನಿ ಆಯಿತು. ಅವರು ಇಂತಹ ಹೇಳಿಕೆಗಳನ್ನು ನೀಡುವಾಗ ಪ್ರಜ್ಞಾಪೂರ್ವಕವಾಗಿ ಮಾತನಾಡಬೇಕು. ಮುಖ್ಯಮಂತ್ರಿಗಳ ಹೇಳಿಕೆಯಿಂದ ಗಲಭೆಕೋರರ ವಿರುದ್ಧ ಕ್ರಮಕೈಗೊಳ್ಳಲು ಪೊಲೀಸ್ ಪಡೆ ಕೂಡ ಹೆದರುತ್ತಿತ್ತು. ಪಶ್ಚಿಮ ಬಂಗಾಳದ ಗಲಭೆಗಳ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ | Karnataka Election 2023: ಯತೀಂದ್ರ ಸಿದ್ದರಾಮಯ್ಯಗೆ ಅಪ್ಪನ ಸೋಲಿನ ಭಯ?; ಮತಯಾಚನೆ ವೇಳೆ ಅವರು ಹೇಳಿದ್ದೇನು?

ಹಿಂದು ಜನಜಾಗೃತಿ ಸಮಿತಿಯ ವಕ್ತಾರ ಸತೀಶ ಕೊಚರೇಕರ್ ಮಾತನಾಡಿ, ಗಲಭೆಕೋರರಿಗೆ ಗಲಭೆಯ ತರಬೇತಿ ನೀಡಲಾಗಿದೆ ಎಂಬುದನ್ನು ರಾಮ ನವಮಿ ಗಲಭೆ ತೋರಿಸುತ್ತದೆ. ಇಂತಹವುಗಳು ಕೆಲ ಮತಾಂಧರು ತಮ್ಮ ಪ್ರಭಾವವನ್ನು ಹಾಗೇ ಉಳಿಸಿಕೊಳ್ಳಲು, ತಾವು ಎಷ್ಟು ಆಕ್ರಮಣಕಾರಿ ಎಂಬುದನ್ನು ತೋರಿಸಲು, ಹಿಂದು ಸಮಾಜವನ್ನು ನಿರಂತರ ಭಯದ ನೆರಳಿನಲ್ಲಿ ಬದುಕುವಂತೆ ಮಾಡುವ ಪ್ರಯತ್ನವಾಗಿದೆ. ದೇಶವನ್ನು ವಿಭಜಿಸಲು ‘ಮಿನಿ ಪಾಕಿಸ್ತಾನ’ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಹಿಂದುಗಳು ಹನುಮಂತನಂತೆ ಬಲೋಪಾಸನೆ ಮಾಡುವುದು ಕಾಲಕ್ಕೆ ಅಗತ್ಯವಾಗಿದೆ. ಸಂವಿಧಾನವು ಪ್ರತಿಯೊಬ್ಬರಿಗೂ ಆತ್ಮರಕ್ಷಣೆಯ ಹಕ್ಕನ್ನು ನೀಡಿದ್ದು, ಅದನ್ನು ಚಲಾಯಿಸಬೇಕು ಎಂದು ಹೇಳಿದರು.

Exit mobile version