ಬೆಂಗಳೂರು: ಸಪ್ತಕ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಿಸೆಂಬರ್ 11ರಂದು ಬೆಳಗ್ಗೆ 9.30ಕ್ಕೆ ಅತ್ಯುತ್ತಮ ಯುವ ಕಲಾವಿದರಿಂದ ಪೂರ್ಣದಿನದ ʼಸಂಗೀತ ಸಾಂಗತ್ಯʼ (Sangeeth Sangatya) ಕಾರ್ಯಕ್ರಮವನ್ನು ನಗರದ ಮಲ್ಲೇಶ್ವರ ಪಶ್ಚಿಮದ ಮಿಲ್ಕ್ ಕಾಲೊನಿಯ ಸಪ್ತಕ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಗಾಯಕರಾದ ಕೌಸ್ತವ್ ಕಾಂತಿ ಗಂಗೂಲಿ, ಆದಿತ್ಯ ಪಲ್ಲಕ್ಕಿ, ಅರ್ಚನಾ ಶೆನೊಯ್, ಶ್ರೇಯಾ ಗೋಣುಗುಂಟಾ, ಕೊಳಲು ವಾದಕ ನಿರಂಜನ ಹೆಗಡೆ, ಸಹ ಕಲಾವಿದರಾದ ತಬಲಾ ವಾದಕ ವಿಘ್ನೇಶ ಕಾಮತ್, ಸಂತೋಷ ಹೆಗಡೆ, ಹಾರ್ಮೋನಿಯಂ ವಾದಕ ಶ್ರೀಧರ ಭಟ್ ಅವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಇದನ್ನೂ ಓದಿ | ಕುಂಬಳೆ ಸುಂದರ ರಾವ್ | ಇನ್ನಿಲ್ಲವಾದ ಅವರ ನೆನಪಿನಲ್ಲಿ…