ಬೆಂಗಳೂರು: ಸಪ್ತಕ ಮತ್ತು ಕಲಾನಂದನಂ ವತಿಯಿಂದ ಏಪ್ರಿಲ್ 7ರಂದು ಸಂಜೆ 5.30ಕ್ಕೆ ʼಸಂಗೀತ ಸಂಧ್ಯಾʼ ಕಾರ್ಯಕ್ರಮವನ್ನು (Sangeetha Sandhya) ನಗರದ ಮಲ್ಲೇಶ್ವರದ ರೈಲ್ವೆ ಸ್ಟೇಷನ್ ಬಳಿಯ 11ನೇ ಕ್ರಾಸ್‌ನ ಹವ್ಯಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಮೊಮ್ಮಗ, ಪುಣೆಯ ಗಾಯಕ ವಿರಾಜ ಜೋಶಿ, ಬೆಂಗಳೂರಿನ ತಬಲಾವಾದಕ ರೂಪಕ ವೈದ್ಯ, ಹಾರ್ಮೋನಿಯಂ ವಾದಕ ಸೂರ್ಯ ಉಪಾಧ್ಯಾಯ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇದು ಬೆಂಗಳೂರಿನಲ್ಲಿ ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಮೊಮ್ಮಗ ವಿರಾಜ ಜೋಶಿ ಅವರ ಮೊದಲ ಸಂಗೀತ ಕಾರ್ಯಕ್ರಮವಾಗಿದೆ.
ಸನ್ಮಾನ ಕಾರ್ಯಕ್ರಮ
70ನೇ ಹುಟ್ಟು ಹಬ್ಬದ ಪ್ರಯುಕ್ತ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪಂ. ರವೀಂದ್ರ, ಅಯೋಧ್ಯೆಯಲ್ಲಿ ಶ್ರೀ ರಾಮನ ಮೂರ್ತಿಯ ಕೆತ್ತಿದ ಅಂತರಾರಾಷ್ಟ್ರೀಯ ಖ್ಯಾತಿಯ ಶಿಲ್ಪಿ ಗಣೇಶ ಭಟ್ಟ ಇಡಗುಂಜಿ ಅವರನ್ನು ಸನ್ಮಾನಿಸಲಾಗುತ್ತದೆ.
ಮುಖ್ಯ ಅತಿಥಿಗಳಾಗಿ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಭಾಗಿಯಾಗಲಿದ್ದು, ಸಪ್ತಕ ಸಂಚಾಲಕ ಜಿ. ಎಸ್. ಹೆಗಡೆ, ಕಲಾನಂದನಂ ಸ್ಥಾಪಕರು ಹಾಗೂ ನಿರ್ದೇಶಕರಾದ ಸುನೀತಾ ವೇಣುಗೋಪಾಲ ಉಪಸ್ಥಿತರಿರಲಿದ್ದಾರೆ.
ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕದ ಕನಸಿನ ವಿಹಾರ
ಜುಗಲ್ ಬಂದಿ
ದೆಹಲಿಯ ವಯೋಲಿನ್ ವಾದಕ ಡಾ. ಸಂತೋಷ ನಾಹರ್, ಬೆಂಗಳೂರಿನ ಹಾರ್ಮೋನಿಯಂ ಕಲಾವಿದ ಡಾ. ರವೀಂದ್ರ ಕಾಟೋಟಿ, ತಬಲಾ ವಾದಕ ಪಂ. ರವೀಂದ್ರ ಯಾವಗಲ್ ಅವರಿಂದ ಸಂಗೀತದ ಜುಗಲ್ ಬಂದಿ ನಡೆಯಲಿದೆ.