ಬೆಂಗಳೂರು : ಬಸವೇಶ್ವರ ನಗರದ ಪುಣ್ಯ ಆಸ್ಪತ್ರೆ (Punya Hospital ), ಕ್ಲೌಡ್ ಫಿಸಿಷಿಯನ್ ಮತ್ತು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬೆಂಗಳೂರು ಇದರ ಸಹಯೋಗದೊಂದಿಗೆ ಚಾಮರಾಜಪೇಟೆಯ ಐಎಂಎನಲ್ಲಿ ಬೆಂಗಳೂರಿನ ಜನರ ಆರೋಗ್ಯ ಕಾಳಜಿಯಲ್ಲಿ ತಾಂತ್ರಿಕ ಪ್ರಗತಿಯ ಕುರಿತ ಮಾಹಿತಿಯನ್ನು ಪ್ರದರ್ಶಿಸಲಾಯಿತು. ಪುಣ್ಯ ಆಸ್ಪತ್ರೆ ಮತ್ತು ಕ್ಲೌಡ್ ಫಿಸಿಷಿಯನ್ ನಡುವಿನ ಈ ಸಹಭಾಗಿತ್ವದ ಮೂಲಕ ರೋಗಿಗಳಿಗೆ ಸಾಟಿಯಿಲ್ಲದ ಪ್ರಯೋಜನಗಳನ್ನು ತರುವ ಉದ್ದೇಶ ವಿವರಿಸಲಾಯಿತು.
ಪುಣ್ಯ ಆಸ್ಪತ್ರೆಯ ಹಿರಿಯ ಕನ್ಸಲ್ಟೆಂಟ್ ಸ್ತ್ರೀರೋಗತಜ್ಞರು ಮತ್ತು ಲ್ಯಾಪ್ರೊಸ್ಕೋಪಿಕ್ ಸರ್ಜನ್ ಡಾ. ಪುಣ್ಯ ಅವರು ಅತ್ಯಾಧುನಿಕ ಲ್ಯಾಪ್ರೊಸ್ಕೋಪಿಕ್ ಸ್ತ್ರೀರೋಗ ಶಸ್ತ್ರಚಿಕಿತ್ಸೆಗಳು ಸೇರಿದಂತೆ ಮಹಿಳೆಯರ ಆರೋಗ್ಯ ರಕ್ಷಣೆಯನ್ನು ಪರಿವರ್ತಿಸುವ ಹಲವಾರು ತಾಂತ್ರಿಕತೆ ಬಗ್ಗೆ ಮಾಹಿತಿ ನೀಡಿದರು. ತ್ವರಿತ ಚೇತರಿಕೆ, ನಿಖರ ಶಸ್ತ್ರಚಿಕಿತ್ಸೆ, ಬಹು ರೋಗಲಕ್ಷಣಗಳ ಪರಿಣಾಮಕಾರಿ ನಿರ್ವಹಣೆಯನ್ನು ಇದೇ ಸಂದರ್ಭದಲ್ಲಿ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಡಾ.ನಾಗರಾಜ್ ಮತ್ತು ಡಾ.ಪುಣ್ಯವತಿ ನಾಗರಾಜ್ ಅವರು ಕ್ಲೌಡ್ ಫಿಸಿಷಿಯನ್ ಸಹಭಾಗಿತ್ವದಲ್ಲಿ ಉದ್ಘಾಟಿಸಿದ ಪುಣ್ಯ ಆಸ್ಪತ್ರೆಯ ಸ್ಮಾರ್ಟ್-ಐಸಿಯು ಅನಾವರಣ ಮಾಡಿದರು. ಇದು ಸುಧಾರಿತ ತಂತ್ರಜ್ಞಾನದೊಂದಿಗೆ ಗುಣಮಟ್ಟದ ಆರೈಕೆಯನ್ನು ಒದಗಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದರು. ಇದು ವೈದ್ಯಕೀಯ ಸೇವೆಯಲ್ಲಿನ ಡಿಜಿಟಲ್ ಡೇಟಾವನ್ನು ಒದಗಿಸುತ್ತದೆ. ಕ್ಲೌಡ್ ಫಿಸಿಷಿಯನ್ ನ ಸಹ-ಸಂಸ್ಥಾಪಕ ಮತ್ತು ಸಿಇಒ ಡಾ. ಧ್ರುವ್ ಜೋಶಿ ಅವರು ಸ್ಮಾರ್ಟ್ ಐಸಿಯು ಕುರಿತು ಮಾಹಿತಿ ನೀಡಿದರು.
ಇದನ್ನೂ ಓದಿ : janaspandana : ಫೆ.8ರಂದು ವಿಧಾನಸೌಧದಲ್ಲಿ ಜನಸ್ಪಂದನ; ವಿಧಾನಸೌಧಕ್ಕೆ ಹೋಗುವವರಿಗೆ ಇಲ್ಲಿದೆ ವಿಶೇಷ ಸೂಚನೆ
ಕ್ಲೌಡ್ ಫಿಸಿಷಿಯನ್ ನ ಮೆಡಿಕಲ್ ಆಂಕೊಲಾಜಿ ಡಾ.ಮನೀಶ್ ಕುಮಾರ್ ಸ್ಮಾರ್ಟ್-ಕ್ಯಾನ್ಸರ್ ಆರೈಕೆಯ ಸಂಕೀರ್ಣತೆಗಳನ್ನು ತಿಳಿಸಿದರು. ಮಲ್ಟಿಪಲ್ ಮೈಲೋಮಾದ ಬಗ್ಗೆ ಒಳನೋಟಗಳನ್ನು ವಿವರಿಸಿದರು. ಕ್ಯಾನ್ಸರ್ ಚಿಕಿತ್ಸೆಯ ತಂತ್ರಗಳನ್ನು ತಿಳಿಸಿದರು. ಐಎಂಎ ಬೆಂಗಳೂರು ಅಧ್ಯಕ್ಷ ಡಾ.ಮಧುಶಂಕರ್ ಅವರು ಪುಣ್ಯ ಆಸ್ಪತ್ರೆ, ಐಎಂಎ ಬೆಂಗಳೂರು ಮತ್ತು ಕ್ಲೌಡ್ ಫಿಸಿಷಿಯನ್ ಸಹಯೋಗದ ಪ್ರಯತ್ನಗಳನ್ನು ಶ್ಲಾಘಿಸಿದರು.