Site icon Vistara News

Spandana Vijay Raghavendra: ಇಂದು ಸ್ಪಂದನಾ ನೆನಪಿನ ಶಾಂತಿ ಹೋಮ

Spandana vijay Raghavendra Photo

Spandana vijay Raghavendra Photo kept at BK Shivaram house

ಬೆಂಗಳೂರು: ಹೃದಯಾಘಾತದಿಂದ ಮೃತಪಟ್ಟ ಸ್ಪಂದನ ವಿಜಯ ರಾಘವೇಂದ್ರ (Spandana Vijay Raghavendra) ಅವರ ಮರಣೋತ್ತರ ಸಂಸ್ಕಾರ ಕ್ರಿಯೆಗಳು ಇಂದಿನಿಂದ ಮಲ್ಲೇಶ್ವರಂ ನಿವಾಸದಲ್ಲಿ ನಡೆಯಲಿದೆ. ಸ್ಪಂದನ ಅವರ ತಂದೆ ಬಿ.ಕೆ ಶಿವರಾಂ ನಿವಾಸದಲ್ಲಿ ಸ್ಪಂದನಾ ಶಾಂತಿ ಹೋಮ ನಡೆಯಲಿದೆ.

ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಅವರು ಆಗಸ್ಟ್ 06ರಂದು ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ (heart failure) ಇಹಲೋಕ ತ್ಯಜಿಸಿದ್ದರು. ಸಾವಿರಾರು ಜನರ ಅಂತಿಮ ದರ್ಶನದೊಂದಿಗೆ ಅವರ ಅಂತ್ಯಕ್ರಿಯೆ ನಡೆದಿತ್ತು. ಇಂದು ಈಡಿಗ ಬಿಲ್ಲವ ಸಂಪ್ರದಾಯದಂತೆ ಉತ್ತರ ಕ್ರಿಯೆ ಪೂಜೆ ನಡೆಯಲಿದೆ. 11 ದಿನಗಳ ಪೂಜೆಗೆ ರಾಜ್ ಕುಟುಂಬ ತಯಾರಿ ನಡೆಸಿದೆ.

ಮುಂಜಾನೆ 08 ಗಂಟೆಯಿಂದ ಹೋಮ ಹವನಗಳು ಆರಂಭವಾಗಿ ಸತತ 3 ಗಂಟೆಗಳ ಕಾಲ ಮಲ್ಲೇಶ್ವರಂ ನಿವಾಸದಲ್ಲಿ ಶಾಂತಿ ಹೋಮ ನಡೆಯಲಿದೆ. ಬಿ.ಕೆ ಶಿವರಾಂ ಹಾಗು ಎಸ್.ಎ ಚಿನ್ನೇಗೌಡರ ಕುಟುಂಬ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಶಿವ ರಾಜ್‌ಕುಮಾರ್‌ ಹಾಗೂ ಅವರ ಪತ್ನಿ ಗೀತಾ ಖುದ್ದು ಹಾಜರಿರುವ ಸಾಧ್ಯತೆ ಇದೆ.

12.30ರ ನಂತರ ಗಣ್ಯರಿಗೆ ಹಾಗೂ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಮಲ್ಲೇಶ್ವರಂನ ಬಿಬಿಎಂಪಿ ಆಟದ ಮೈದಾನದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಅಭಿಮಾನಿಗಳಿಗೂ ವಿಜಯ ರಾಘವೇಂದ್ರ ಫ್ಯಾಮಿಲಿ ಪ್ರೀತಿಯ ಆಹ್ವಾನ ನೀಡಿದೆ. ಮಧ್ಯಾಹ್ನ 12:30ರ ನಂತರ ಮಲ್ಲೇಶ್ವರಂನ ಕೋದಂಡರಾಮಪುರದ ಯಂಗ್‌ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಸುಮಾರು 4000 ಜನರಿಗೆ ತರಹೇವಾರಿ ಸಿಹಿ ಭೋಜನವಿದ್ದು, ವಿಐಪಿಗಳಿಗೆ ಹಾಗೂ ಸಾರ್ವಜನಿಕರಿಗೆ ಒಂದೇ ಜಾಗದಲ್ಲಿ ಊಟದ ವ್ಯವಸ್ಥೆ ಇದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Spandana Vijay Raghavendra: ಸ್ಪಂದನಾ ಉತ್ತರ ಕ್ರಿಯೆಗೆ ಸಿದ್ಧತೆ; ಸರ್ವರಿಗೂ ಆಹ್ವಾನಿಸಿದ ವಿಜಯ ರಾಘವೇಂದ್ರ ಕುಟುಂಬ

Exit mobile version