ಬೆಂಗಳೂರು: ಶಿಕ್ಷಣ ತಂಡದ ವತಿಯಿಂದ ಜನವರಿ 20ರಂದು ಬೆಳಗ್ಗೆ 9 ಗಂಟೆಗೆ ನಗರದ ಜೆ.ಸಿ.ರಸ್ತೆಯ ಟೌನ್‌ಹಾಲ್ ಪಕ್ಕದ ರವೀಂದ್ರ ಕಲಾಕ್ಷೇತ್ರದಲ್ಲಿ ಶಿಕ್ಷಣ ಹಬ್ಬ-2023 ಅಭಿನಂದನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕಾಗಿ ಶ್ರಮಿಸುತ್ತಿರುವ ಐದು ತಂಡಗಳಿಗೆ ʼಶಿಕ್ಷಣ ಅವಾರ್ಡ್ʼ (Shikshana Habba) ಪ್ರದಾನ ಮಾಡಲಾಗುತ್ತದೆ.
ಮುಖ್ಯ ಅತಿಥಿಯಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಗೌರವ ಅತಿಥಿಯಾಗಿ ಕನ್ನಡ ಚಲನಚಿತ್ರ ನಟಿ ಪೂಜಾ ಗಾಂಧಿ ಅವರು ಭಾಗವಹಿಸಲಿದ್ದಾರೆ. ಶಿಕ್ಷಣ ತಂಡದ ಗೌರವ ಅಧ್ಯಕ್ಷ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಐಜಿಪಿ ರವಿ ಡಿ. ಚೆನ್ನಣ್ಣನವರ್, ತಂಡದ ಮಾರ್ಗದರ್ಶಕರಾದ ಡಿಆರ್‌ಡಿಒ, ಎಡಿಇ ವಿಜ್ಞಾನಿ ಶ್ರೀನಿವಾಸನ್ ಉಪಸ್ಥಿತರಿರಲಿದ್ದಾರೆ.
ಐದು ತಂಡಗಳಿಗೆ ಶಿಕ್ಷಣ ಅವಾರ್ಡ್
ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕಾಗಿ ಶ್ರಮಿಸುತ್ತಿರುವ ಐದು ಸಾಮಾಜಿಕ ತಂಡಗಳಿಗೆ ಕಾರ್ಯಕ್ರಮದಲ್ಲಿ ಶಿಕ್ಷಣ ಅವಾರ್ಡ್ ಪ್ರದಾನ ಮಾಡಲಾಗುತ್ತದೆ. ಭರವಸೆ ತಂಡ, ಕನ್ನಡ ಮನಸುಗಳು, ಅಮೃತ ಹಸ್ತ ತಂಡ, ಗಂಧದ ಗುಡಿ ಬಳಗ ಹಾಗೂ ಡಿಸ್ಕಷನ್ ಕ್ಲಾಸದ ಅಸೋಸಿಯೇಷನ್ ತಂಡಗಳಿಗೆ ಶಿಕ್ಷಣ ಪ್ರಶಸ್ತಿ ನೀಡಲಾಗುತ್ತದೆ.
ಇದನ್ನೂ ಓದಿ | Raja Marga Column : ನಿಮ್ಮ ಮಗು ಮೊಬೈಲ್‌ಗೆ ಅಡಿಕ್ಟ್ ಆಗಿದೆಯಾ? ತಪ್ಪಿಸಲು ಏನು ಮಾಡೋದು?
ʼಶಿಕ್ಷಣʼ ಸ್ನೇಹಿತರ ತಂಡವು ಕಳೆದ ಐದಾರು ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಬೇಸಿಕ್ ಕಂಪ್ಯೂಟರ್ ಹೇಳಿಕೊಡುವ ಕೆಲಸ ಮಾಡುತ್ತಿದೆ. ತರಬೇತಿ ನೀಡುವ ಎಲ್ಲಾ ಶಾಲೆಯ (9 ಶಾಲೆ) ಮಕ್ಕಳಿಗಾಗಿ ಪ್ರತಿ ವರ್ಷದ ಕೊನೆಯಲ್ಲಿ ಶಿಕ್ಷಣ ಹಬ್ಬ ಆಯೋಜಿಸಿ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅದರಂತೆ ಈ ಬಾರಿಯೂ ರವೀಂದ್ರ ಕಲಾಕ್ಷೇತ್ರದಲ್ಲಿ ಜ. 20ರಂದು ಕಾರ್ಯಕ್ರಮ ನಡೆಯುತ್ತಿದೆ.