Site icon Vistara News

ಶೋಮ್ರಿತಾ ಮಂಡಲ್‌ ನೃತ್ಯ ಪ್ರದರ್ಶನ ಶನಿವಾರ: ಕೆ.ಎಚ್‌. ಕಲಾಸೌಧದಲ್ಲಿ ಆಯೋಜನೆ

shomrita-mondal-solo-in-bengaluru

ಬೆಂಗಳೂರು: ಖ್ಯಾತ ಒಡಿಸ್ಸಿ ನೃತ್ಯಗಾರ್ತಿ ಶೋಮ್ರಿತಾ ಮಂಡಲ್‌ ಅವರ ಏಕವ್ಯಕ್ತಿ ನೃತ್ಯ ಕಾರ್ಯಕ್ರಮ ಡಿಸೆಂಬರ್‌ 10ರ ಶನಿವಾರ ಬೆಂಗಳೂರಿನಲ್ಲಿ ಆಯೋಜನೆಯಾಗಿದೆ.

ಸಂಜೆ 6 ಗಂಟೆಗೆ ಹನುಮಂತನಗರದ ಕೆ.ಎಚ್‌. ಕಲಾಸೌಧದಲ್ಲಿ ನಡೆಯುವ ʼಶ್ರೀ ಗುರುಭ್ಯೋ ನಮಃʼ ಪ್ರದರ್ಶನದಲ್ಲಿ ಮಂಗಳಾಚರಣ (ಶಿವ ಆರಾಧನ), ಸ್ಥಾಯೀ ನೃತ್ಯ, ಅರ್ಧನಾರೀಶ್ವರ, ಪಲ್ಲವಿ, ಅಷ್ಟಪದಿ ಹಾಗೂ ಮೋಕ್ಷದ ಮೂಲಕ ನೃತ್ಯವನ್ನು ಕೊಂಡೊಯ್ಯಲಿದ್ದಾರೆ.

2010ರಲ್ಲಿ ಬರ್ನಾಲೀ ಸರ್ಕಾರ್‌ ಅವರು ಸ್ಥಾಪಿಸಿದ ಶುಭಂ ಸ್ಕೂಲ್‌ ಆಫ್‌ ಪರ್ಫಾರ್ಮಿಂಗ್‌ ಆರ್ಟ್ಸ್‌ ಸಂಸ್ಥೆಯು ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ನಾಲ್ಕು ವರ್ಷದವರಿದ್ದಾಗಲೇ ಭರತನಾಟ್ಯದ ಮೂಲಕ ನೃತ್ಯ ಅಭ್ಯಾಸ ಆರಂಭಿಸಿದ ಶೋಮ್ರಿತಾ ಮಂಡಲ್‌, ಗುರು ಮೈಥಿಲಿ ದೇಸಾಯಿ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ವಿಶಾರದ ಪೂರ್ಣಗೊಳಿಸಿದರು. ಶುಭಂ ಸಂಸ್ಥೆಯ ಬರ್ನಾಲಿ ಸರ್ಕಾರ್‌ ಅವರ ಮಾರ್ಗದರ್ಶನದಲ್ಲಿ ಒಡಿಸ್ಸಿ ಅಭ್ಯಾಸ ಮಾಡುತ್ತಿರುವ ಶೋಮ್ರಿತಾ, ಇದೀಗ ಶುಭಂ ತಂಡದ ಸದಸ್ಯೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಒಡ್ಡಿಸಿ ನೃತ್ಯ ಗುರು ಝೇಲಂ ಪರಾಜಪೆ, ಬರ್ನಾಲಿ ಸರ್ಕಾರ, ಡಾ. ಸುಜಯಾ ಘೋಷ್‌, ಮೈಥಿಲಿ ದೇಸಾಯಿ, ಶೊಮ್ರಿತಾ ವರ ಪೋಷಕರಾದ ಸುನೇತ್ರಾ ಮಂಡಲ್‌, ನಿತೀಶ್‌ ಚಂದ್ರ ಮಂಡಲ್‌, ಅತಿಥಿಗಳಾಗಿ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಸಂಯೋಜಕ ಎಂ.ಆರ್‌. ಸತ್ಯನಾರಾಯಣ, ಸುದರ್ಶನ್‌ ಶೆಟ್ಟಿ, ಸುನಿಲ್‌ ಕುಮಾರ್‌ ಸಿಂಗ್‌, ಪಿ. ವೇಣುಗೋಪಾಲ್‌, ಬಿ.ಆರ್‌. ಸಾವಂತ್‌, ಕೆ. ಸಂಧ್ಯಾ ಶರ್ಮಾ ಭಾಗವಹಿಸಲಿದ್ದಾರೆ.

ನೃತ್ಯಕ್ಕೆ ಹಿಮ್ಮೇಳವಾಗಿ ವಯಲಿನ್‌ನಲ್ಲಿ ಪ್ರದೀಪ್‌ ಕುಮಾರ್‌ ಮೊಹರಾಣಾ, ಗಾಯನದಲ್ಲಿ ಗಣೇಶ್‌ ದೇಸಾಯಿ, ಹಾರ್ಮೋನಿಯಂನಲ್ಲಿ ರಣಿತೇಂದ್ರನಾಥ್‌ ಟ್ಯಾಗೋರ್‌, ಮೃದಂಗದಲ್ಲಿ ಸೌಭಾಗ್ಯ ನಾರಾಯಣ್‌ ಚೊಟಾರೆ, ಕೊಳಲು ವಾದನದಲ್ಲಿ ನಿರಂಜನ ಹೆಗಡೆ ಭಾಗವಹಿಸಲಿದ್ದಾರೆ.

ಇದನ್ನೂ ಓದಿ | ವೈದ್ಯ ದರ್ಪಣ ಅಂಕಣ | ಮನುಷ್ಯನ ಆಯಸ್ಸು ಎಷ್ಟು?

Exit mobile version